ಕೂಡ್ಲಿಗಿ ಕ್ಷೇತ್ರದ ಐಗಳ ಮಲ್ಲಾಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವತಿಯಿಂದ ದಿ. 24-2-24 ರಂದು ವಿದ್ಯಾರ್ಥಿಗಳು ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಮಾನ್ಯಶಾಸಕರು ಸರಸ್ವತಿದೇವಿಗೆ ಪೂಜೆಸಲ್ಲಿಸಿ ಮಾತನಾಡಿ ಕೆಲವು ಜನ ನನ್ನ ಬಗ್ಗೆ ಮಾತನಾಡುತ್ತಾರೆ. “ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರು ಇರುವುದಿಲ್ಲ. ಯಾಕೆ ನೀವು ಸಣ್ಣ ಸಣ್ಣ ಕಾರ್ಯಕ್ರಮಗಳಿಗೆ ಹೋಗುತ್ತೀರಿ ಎಂದು ಹೇಳುತ್ತಾರೆ.ಕೂಡ್ಲಿಗಿ ಕ್ಷೇತ್ರದ ಪ್ರತಿಯೊಬ್ಬರ ಮನದಲ್ಲಿ ನನ್ನ ಹೆಸರು ಇದೆ ಎಂದು ಹೇಳಲು ಇಚ್ಛಿಸುವೆ ಎಂದರು. ದೊಡ್ಡ ನಗರದ ಶಾಲೆ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ನಡೆಯಬೇಕು ಅನ್ನುವುದು ಏನೂ ಇಲ್ಲ.ಐಗಳ ಮಲ್ಲಾಪುರ ಅಂತಹ ಚಿಕ್ಕ ಗ್ರಾಮದಲ್ಲಿ ಶಾಲೆ ಸ್ಥಾಪನೆಯಾಗಿ 75 ನೇ ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಳ್ಳುವ ಮೂಲಕ ಶೈಕ್ಷಣಿಕ ಬೆಳವಣಿಗೆಯನ್ನು ಮೆಲಕು ಹಾಕುತ್ತಿರುವುದನ್ನು ನೋಡಿ ನನಗೆ ಅತೀ ಹೆಮ್ಮೆ ಅನಿಸುತ್ತದೆ.ಇದಕ್ಕಿಂತ ಇನ್ನೂ ಏನೂ ಬೇಕು ನೀವು ಹೇಳಿ? ಇಲ್ಲಿ ಅನೇಕ ಸಾಧಕರು,ಸಾಹಿತ್ಯ,ಸಂಶೋಧನೆ,ಪತ್ರಿಕೋದ್ಯಮ,
ಆರೋಗ್ಯ,ಶಿಕ್ಷಣ ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರವುದನ್ನು ನೋಡಿದಾಗ ಸಂತಸವನ್ನುಂಟು ಮಾಡುತ್ತದೆ.ಇಂತಹ ಅನೇಕ ಸಾಧಕರ ಪರವಾಗಿ ಸದಾಕಾಲವೂ ನಿಲ್ಲುತ್ತೇನೆ ಎಂದರು.
ನಮ್ಮ ಕ್ಷೇತ್ರದಲ್ಲಿ ಅನಕ್ಷರತೆ,ಬಡತನ,ಮೌಢ್ಯತೆ,ರಕ್ತ ಹೀನತೆ ಮತ್ತು ಪೌಷ್ಟಿಕಾಂಶದ ಕೊರತೆಯ ತಾಂಡವಾಡುತ್ತಿದೆ ಹೀಗಾಗಿ ಆರೋಗ್ಯ,ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಒಳ್ಳೆಯ ಬುನಾದಿಯನ್ನು ಹಾಕೋಣ ಎಂದೂ ತಿಳಿಸಿದರು. ಕ್ಷೇತ್ರದ 200 ಹಳ್ಳಿಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಗಡಿ ಪುನಶ್ಚೇತನ,ಕಲ್ಯಾಣ ಕರ್ನಾಟಕ ಮತ್ತು ವಿಶೇಷ ಅನುದಾನ ಬಳಸಿಕೊಂಡು ಅಭಿವೃದ್ಧಿಗೆ ಒತ್ತುಕೊಡುತ್ತೇವೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯಂತೆ ಪ್ರಾಥಮಿಕ ಆರೋಗ್ಯ ಕೆಂದ್ರ ಸ್ಥಾಪನೆಗಾಗಿ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.ಈ ವೇಳೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು,ವಿವಿಧ ಕ್ಷೇತ್ರದ ಗಣ್ಯಮಾನ್ಯರು, ಮುಖಂಡರು,ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಅಂಗಡಿ ಶಶಿಕುಮಾರ್