ಕೊಟ್ಟೂರು:ದಿನಾಂಕ 22-02-2024ರ ಗುರುವಾರದಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಡಿ ಭರಮನಗೌಡ ಸದಸ್ಯರುಗಳಾದ ಮಹೇಶ್ ಸಲೀಂ ಬಾಸ್ ಸೇರಿದಂತೆ ಡಾ.ಬಿಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪ ಮಾಲೆ ಹಾಕುವುದರ ಮೂಲಕ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಕುಂಭ ಹೊತ್ತ ಮಹಿಳೆಯರು ಟ್ರಾಕ್ಟರ್ ಬೈಕ್ ಮೂಲಕ ಸಮಾಳ,ಡ್ರಂ ಸೆಟ್,ತಮಟೆ,ಮೇಳ,ಶಾಲಾ ಮಕ್ಕಳಿಂದ ಲೆಜಿನ್ ಡಂಬಲ್ಸ್ ಮತ್ತು ಹೂಬ್ಸ್ ಚಟುವಟಿಕೆಗಳ ಮೂಲಕ ಸಂವಿಧಾನ ಜಾಗೃತಿ ಹಾಡುಗಳಿಗೆ ನೃತ್ಯ ಮಾಡುತ್ತಾ ಹಾಗೂ ಇನ್ನೂ ಮುಂತಾದ ಸಕಲವಾದ್ಯಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ ಮತ್ತು ತೂಲಹಳ್ಳಿ ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಸಂವಿಧಾನ ಜಾಗೃತಿ ಜಾಥಾ ಅದ್ದೂರಿಯಾಗಿ ಹಬ್ಬದ ಸಡಗರ ಸಂಭ್ರಮವನ್ನು ಮೆರೆಯಿತು.
ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳಾದ ಮರಿಯಪ್ಪ ಕಾರ್ಯಕ್ರಮದ ನಿರೂಪಣೆ ಮಾಡಿ ನಂತರ ಮುಖ್ಯ ಶಿಕ್ಷಕರಾದ ಜಿ ರಾಮಪ್ಪ ಶಿಕ್ಷಕರು ಸ್ವಾಗತಿಸಿದರು ನಂತರ ಡಿವೈಎಸ್ಪಿ ಮಲ್ಲಪ್ಪ ಮಲ್ಲಾಪುರ ಹೊಟ್ಟೆರ್ ಅಜ್ಜಪ್ಪ,ಪಂಚಾಯತಿ ಅಧ್ಯಕ್ಷರಾದ ಡಿ ಭರಮನಗೌಡ ಡಾ ಬಿ ಆರ್ ಅಂಬೇಡ್ಕರ್ ರವರ ಮೂರ್ತಿಗೆ ಪುಷ್ಪ ಮಾಲೆ ಹಾಕುವುದರ ಮೂಲಕ ಉದ್ಘಾಟನೆ ಮಾಡಿ ನಂತರ ಹೊಟ್ಟೆರ್ ಅಜ್ಜಪ್ಪ ಡಿಎಸ್ಎಸ್ ಜಿಲ್ಲಾ ಸಂಚಲಕರಾದ ಬದ್ದಿಮರಿಸ್ವಾಮಿ ಪತ್ರಕರ್ತರಾದ ಗುರುರಾಜ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ವಿಚಾರಗಳನ್ನು ಸಂವಿಧಾನ ಜಾಗೃತಿ ಜಾಥಾ ಬಗ್ಗೆ ತಿಳಿಸಿದರು.
ವಿಶೇಷವಾಗಿ ಶಾಲಾ ಮಕ್ಕಳಿಂದ ಸಂವಿಧಾನ ಜಾಗೃತಿ ಸಂಬಂಧಪಟ್ಟ ಸಂವಿಧಾನ ಪೀಠಿಕೆ ಡಾ ಬಿಆರ್ ಅಂಬೇಡ್ಕರ್ ಅವರ ಆಶಯಗಳು ಹಾಗೂ ಮಹಾನಾಯಕ ಇಂತಹ ಹಾಡುಗಳಿಗೆ ನೃತ್ಯ ಮಾಡಿ ಜಾಗೃತಿ ಮೂಡಿಸುವುದರ ಜೊತೆಗೆ ಹಬ್ಬದ ಸಡಗರವನ್ನೇ ಮೆರೆದರು.
ಈ ಸಂದರ್ಭದಲ್ಲಿ ಜಗದೀಶ್ ನಿಬ್ಗೂರ್ ಡಿವೈಎಸ್ಪಿ ಮಲ್ಲಪ್ಪ ಮಲ್ಲಾಪುರ ವೆಂಕಟಸ್ವಾಮಿ ಸಿಪಿಐ ಗೀತಾಂಜಲಿ ಸಿಂಧೆ ಪಿಎಸ್ಐ ಮತ್ತು ಸಿಬ್ಬಂದಿ ಸಿಆರ್‌ಪಿ ಸಾರ್ ಮತ್ತು ಶಿಕ್ಷಕರು ಜಗದೀಶ್ ಪ ಪಂ ಸ ಶಾಕಿರಾಬೀ ಉಪಾಧ್ಯಕ್ಷರು ಪ್ರತಿಭಾ ಮಹೇಶ್ ಎಸ್ ಅಂಜಿನಪ್ಪ ಕವಿತಾ ಇನ್ನುಳಿದ ಸದಸ್ಯರು ಪ್ರಶಾಂತ್ ಕುಮಾರ್ ಪಿಡಿಒ ಮರಳಿಸಿದ್ದನಗೌಡ್ರು ದಿದ್ಗಿ ಸಿದ್ದನಗೌಡರು ಶಾಂತನಗೌಡ್ರು ಇತರರು ಉಪಸ್ಥಿತರಿದ್ದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು