ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಬಡವರಿಗೆ ಶ್ರೀರಕ್ಷೆ-ರಾಜು ತಲ್ಲೂರು
ಸೊರಬ:ಸಮಾಜದಲ್ಲಿ ಸ್ವತಂತ್ರವಾಗಿ ಕುಟುಂಬಗಳು ಬದುಕಲು ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ.ತಲ್ಲೂರು ಹೇಳಿದರು.
ಪಟ್ಟಣದ ರೇಣುಕಾ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೊರಬ ವಲಯದ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಮತ್ತು ಫಲಾನುಭವಿಗಳಿಗೆ ಆಟೋ ರೀಕ್ಷಾ ಕೀ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ತಾಲೂಕು ಎಂದು ಕರೆಯುವ ಸೊರಬ ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಬಡವರಿಗೆ ಶ್ರೀರಕ್ಷೆಯಾಗಿದೆ.ಶಿಕ್ಷಣ,ಕೃಷಿ ಹಾಗೂ ಉದ್ಯಮ ನಡೆಸಲು ಆರ್ಥಿಕ ನೆರವು ನೀಡಿರುವುದು ವರದಾನವಾಗಿದೆ.ಹುಟ್ಟಿನಿಂದ ಮೋಕ್ಷದವರೆಗೆ ಯೋಜನೆಗಳನ್ನು ನೀಡುತ್ತಿದೆ.ಇದರಿಂದ ಮಹಿಳೆಯರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವ ಜೊತೆಯಲ್ಲಿ ಕುಟುಂಬವು ಆರ್ಥಿಕವಾಗಿ ಸದೃಢವಾಗಲು ಸಾದ್ಯವಾಗಿದೆ.ಮಲೆನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಎತ್ತಿ ಹಿಡಿಯುವಲ್ಲಿ ಮಹಿಳೆಯರು ಯೋಜನೆಯ ಮೂಲಕ ಮತ್ತಷ್ಟು ಪ್ರೇರಣೆ ಹೊಂದಿದ್ದಾರೆ.ದೇಶ ಮತ್ತು ಧರ್ಮದ ಸಂಪತ್ತು ಉಳಿಸುವಲ್ಲಿ ಮಹಿಳೆಯರು ಕಾರಣರಾಗಿದ್ದಾರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಹಕಾರಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಾಲೂಕಿನಲ್ಲಿ 22000 ಕುಟುಂಬಗಳು ಯೋಜನೆಯ ಫಲ ಹೊಂದಿದ್ದಾರೆ ಎಂಬುದು ಶ್ಲಾಘನೀಯ ವಿಷಯವಾಗಿದೆ.
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ ನ್ಯಾಯ,ನೀತಿ ಸತ್ಯ ಮತ್ತು ಧರ್ಮದ ಹೆಸರಿನಲ್ಲಿ ಕಳೆದ 800 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಗ್ಗಡೆಯವರ ಕುಟುಂಬವು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಯೋಜನೆಯ ಮೂಲಕ ಸದೃಡ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ.ದೇಶದಲ್ಲಿ ಬಹುದೊಡ್ಡ ಸಂಪತ್ತು ಎಂದರೆ ಮಾನವ ಸಂಪತ್ತು ಹುಟ್ಟಿದ ಯಾವ ಮನುಷ್ಯನು ಬಡವನಲ್ಲ ಆತನ ಪರಿಶ್ರಮ ಅವನನ್ನು ಎತ್ತರಕ್ಕೆ ಬೆಳೆಸುತ್ತದೆ.ಯಾರಲ್ಲಿ ಆಲಸ್ಯತನ ಆವರಿಸಿರುತ್ತದೆಯೋ ಅವನೇ ಬಡವ.ಸೇವೆ ಮತ್ತು ಸಹೃದಯ ಸಂಪತ್ತು ದೊಡ್ಡದಾದರೆ ದೇಶ ಸಮೃದ್ಧಿಗೊಳ್ಳುತ್ತದೆ ಎಂದರು.
ಶಿವಮೊಗ್ಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಟಿ ಶಾರದಮ್ಮ ಬ್ಯಾಂಕ್‌ನ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.ಧರ್ಮಸ್ಥಳ ಯೋಜನೆಯಿಂದ 8 ಆಟೋಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು ನಂತರ ಸಂಘದ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ದಿನಕರ್ ಭಟ್ ಭಾವೆ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಶಿವಮೊಗ್ಗ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ಬಿ.ಟಿ ಶಾರದಮ್ಮ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ,ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ,ಗುರುಮೂರ್ತಿ,ಕೆರಿಯಪ್ಪ ಮೇಲ್ವಿಚಾರಾಕರಾದ ಉಮೇಶ್,ರಾಜಪ್ಪ,ಲೋಕೇಶ್, ಸುಲೇಮನ್ ಹಾಗೂ ವಲಯದ ಸೇವಾಪ್ರತಿನಿಧಿಗಳು, ಸಿ.ಎಸ್.ಸಿ ಸೇವಾಧಾರರು ಸೇರಿದಂತೆ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ವರದಿ-ಸಂದೀಪ ಯು.ಎಲ್.