ಭದ್ರಾವತಿ:ಶಿವಭಕ್ತರ ಭಕ್ತಿ ವೈಭವ ಎಲ್ಲಾ ಕಲಾವಿದರ ವೇಷ ಭೂಷಣ ಹಾಗೂ ಕಲಾ ಚಾತುರ್ಯದಿಂದ ಪ್ರೇಕ್ಷಕರ ಮನಸೂರೆಗೊಂಡಿದೆ ಎಂದು ಭದ್ರಾವತಿ ದೇವಾಲಯಗಳ ಸಮಿತಿ ಗೌರವಾಧ್ಯಕ್ಷ ಹೆಚ್.ವಿ ಶಿವರುದ್ರಪ್ಪ ಅಭಿಪ್ರಾಯಪಟ್ಟರು.
ಅವರು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಹಾಗೂ ಅಪರಂಜಿ ಅಭಿನಯ ಶಾಲೆ(ರಿ.), ಭದ್ರಾವತಿ ಇವರ ಸಹಯೋಗದಲ್ಲಿ ಗಾನ ಜಾನಪದ ಕಲಾವೃಂದ ಭದ್ರಾವತಿಯ ಕಲಾವಿದರು ಅಪರಂಜಿ ಶಿವರಾಜ್ ರವರ ಶಿವಭಕ್ತರ ಭಕ್ತಿ ವೈಭವ ನಾಟಕದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾನ ಜಾನಪದ ಕಲಾ ವೃಂದವು ಶಿವರಾತ್ರಿಯ ವಿಶೇಷತೆಯ ಕಥೆಯುಳ್ಳ “ಮಹಾಸಾಧ್ವಿ ಮಲ್ಲಮ್ಮ”ನ ರೂಪಕದ ಪ್ರದರ್ಶನ ಹಾಗೂ ಶಿವನ ಮನಮೋಹಕ ನೃತ್ಯ ಪ್ರೇಕ್ಷಕರನ್ನು ರಂಜಿಸಿದವು.”ಕೋಳೂರು ಕೊಡಗೂಸು”ರೂಪಕದಲ್ಲಿ ಕು.ಮೋನಿಷಾ,ಬಾಲ ಶಿವ ದೇವು,ಮಲ್ಲಮ್ಮನಾಗಿ ಶ್ರೀಸುಧಾ ಸೇರಿದಂತೆ ಎಲ್ಲ ಕಲಾವಿದರೂ ತಮ್ಮ ಅಭಿನಯದ ಮೂಲಕ ನೆರೆದಿದ್ದವರ ಮನಗೆದ್ದರು.
ಸರಳವಾಗಿ ಶಿವಭಕ್ತರಿಗೆ ಭಕ್ತರಿಗೆ ಕಥೆ ಹೇಳುವ ಶೈಲಿ, ನಿರೂಪಣೆ,ರಚನೆ ಅಪರಂಜಿ ಶಿವರಾಜ್ ರವರ ರಂಗ ವಿನ್ಯಾಸ ಎಲ್ಲರ ಮೆಚ್ಚುಗೆ ಪಡೆಯಿತು.
ಜೆ.ವಿ.ವಿರೂಪಾಕ್ಷಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಪರಂಜಿ ಶಿವರಾಜ್ ಆಶಯ ನುಡಿಗಳನ್ನಾಡಿದರು.ಮಹಾಲಿಂಗಪ್ಪ ಕಾರ್ಯಕ್ರಮದ ನಿರೂಪಣೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಧರ್ಮ ವಂದಿಸಿದರು.ನಿವೃತ್ತ ಉಪನ್ಯಾಸಕಿ ಅನುಸೂಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ