ಚಿತ್ತಾಪುರ:ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಾಯ೯ಚಟುವಟಿಕೆಗಳ ಮೂಲಕ ಪ್ರಸಿದ್ಧಿ ಹೊಂದುತ್ತಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಆಯ್ದ 10 ಪ್ರಾಥಮಿಕ ಹಾಗೂ 10 ಪ್ರೌಢ ಶಾಲೆಗಳ ಪಾಲಕರ ಸಮಾವೇಶವನ್ನು ತಾಲೂಕ ಪಂಚಾಯಿತಿ ಸಭಾಂಗಣ ಚಿತ್ತಾಪುರದಲ್ಲಿ ಹಮ್ಮಿಕೊಳ್ಳಲಾಯಿತು.ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ ಶಿರನಾಳ ECO ಚಿತ್ತಾಪುರ,ಶ್ರೀ ವೆಂಕಟ ರೆಡ್ಡಿ ECO ಕಾಳಗಿ ವಲಯ, ಶ್ರೀ ಪಂಡಿತ ಸಿಂಧೆ ಉಪನಿರ್ದೇಶಕರು ತಾಲೂಕ ಪಂಚಾಯಿತಿ ಚಿತ್ತಾಪುರ,ಶ್ರೀ ಮಲ್ಲಿಕಾರ್ಜುನ ಕಾಳಗಿ ಪುರಸಭೆ ಅಧ್ಯಕ್ಷರು ಚಿತ್ತಾಪುರ,ಅಧ್ಯಕ್ಷತೆ ಸಂತೋಷ ಎಂ ಕೆ ಕಾಯ೯ಕ್ರಮ ವ್ಯವಸ್ಥಾಪಕರು ಚಿತ್ತಾಪುರ ವೇದಿಕೆಯನ್ನು ಅಲಂಕರಿಸಿದರು.ಕಾಯ೯ಕ್ರಮದ ಪ್ರಾಸ್ತಾವಿಕ ನುಡಿಯನ್ನು ಸಂತೋಷ ಎಂ ಕೆ ಮಾತನಾಡಿದರು,ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರದ ಕುರಿತು,ಪಾಲಕರಿಗೆ ಪ್ರಶ್ನೆ ಮಾಡುತ್ತಾ ಮಕ್ಕಳನ್ನು ಹೇಗೆ ಕಲಿಕೆಯಲ್ಲಿ ಪಾಲ್ಗೊಳ್ಳುವ ಕುರಿತು ಕಿವಿಮಾತು ಹೇಳಿದರು,ಪಾಲಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಂದೀಪ್ ವಸಿಷ್ಠ ಕಾಯ೯ಕ್ರಮ ಹಿರಿಯ ವ್ಯವಸ್ಥಾಪಕರು SVYM CEO ಕಛೇರಿ ಬೆಂಗಳೂರು ಇವರು ಪಾಲಕರೊಂದಿಗೆ ಸಂವಾದ ಮಾಡಿ,ಪಾಲಕರು ಸಮಸ್ಯೆಗಳನ್ನು ಕೇಳಿ,ಪರಿಹಾರ ಕಂಡುಕೊಂಡರು.ಪಾಲಕರು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾಯ೯ಕ್ರಮದ ನಿರೂಪಣೆ ಕು.ಸುಹಾಸಿನಿ,ಸ್ವಾಗತ ಶ್ರೀ ಚಂದ್ರಕಾಂತ SSF ವಂದನಾರ್ಪಣೆ ಶ್ರೀಮತಿ ರಂಜಿತಾ K ಅವರು ನಡೆಸಿಕೊಟ್ಟರು.ವಿದ್ಯಾರ್ಥಿಗಳ ನೂರಕ್ಕೂ ಹೆಚ್ಚು ಪಾಲಕರು,ಗಣ್ಯರು, ಶಿಕ್ಷಣಾಧಿಕಾರಿಗಳು
ಮತ್ತು SVYM ಸಿಬ್ಬಂದಿ ವಗ೯ ಕಾಯ೯ಕ್ರಮದಲ್ಲಿ ಭಾಗಿಯಾಗಿದ್ದರು ಒಟ್ಟಾರೆ ಪಾಲಕರ ಸಮಾವೇಶ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ವರದಿ ಮೊಹಮ್ಮದ್ ಅಲಿ