ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪರಿನುಡಿ…

ಪ್ರಸ್ತಾವನೆ

ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ.ಆ ಪದಗಳ ಮೂಲ,ರಚನೆ,ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ ನಮಗೆ ಇರುವುದಿಲ್ಲ ಆದರೂ, ಸಮಾಜದೊಂದಿಗಿನ ಸಂವಹನದ ಅಗತ್ಯಕ್ಕಾಗಿ ಬಳಸುತ್ತಿರುತ್ತೇವೆ.ಅಷ್ಟೇ ಅಲ್ಲದೆ ಅವುಗಳ ಕುರಿತು ಕಾಮೆಂಟ್ ಕೂಡ ಕೊಡುತ್ತಿರುತ್ತೇವೆ.ಉದಾಹರಣೆಗೆ ಇಂಗ್ಲಿಷಿನಿಂದ ಎರವಲು ಪಡೆದ ಪದಗಳ ಬಳಕೆಯ ಬಗೆಗೆ ಬಟ್ಲರ್ ಇಂಗ್ಲಿಶ್ ಎಂದು ಹೇಳುವ ಹಾಗೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ.ಆದರೆ ಬಳಕೆ ಹಾಗೂ ಗ್ರಹಿಕೆ ಹೇಗಿರುತ್ತವೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.ಇದು ನುಡಿಯ ಬಗೆಗೆಯಾದರೆ ನುಡಿರೂಪಗಳ ಬಗೆಗೆ ಅರ್ಥ,ಬಳಕೆ, ರಚನೆ ಎಲ್ಲಾ ವಿಷಯಗಳಲ್ಲಿಯೂ ಈ ರೀತಿಯ ಪ್ರಕ್ರಿಯೆ ನಡೆಯುತ್ತಿರುತ್ತದೆ.ಅಂತಹ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಬರೆವಣಿಗೆಗೆ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡುವ ಮೂಲಕ ವಿಷಯ ಹಂಚಿಕೆ ಆರಂಭಿಸಿದ್ದೇನೆ……

Bro

bro ಎಂಬುದು ಇಂಗ್ಲಿಶಿನ brother ಎಂಬ ರೂಪದ ಸಂಕ್ಷಿಪ್ತ ರೂಪವಾಗಿದೆ.ಅಣ್ಣ,ತಮ್ಮ ಹಾಗೂ ಸ್ನೇಹಿತರ ಕುರಿತು ಬಳಕೆಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಅಣ್ಣ ತಮ್ಮಂದಿರಿಗಿಂತ ಸ್ನೇಹಿತರ ವಲಯದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ.ಬಳಕೆ ಕುರಿತು ಗಮನಿಸಿದಾಗ ನಮಗೆ ಭಿನ್ನ ಭಿನ್ನ ಅಭಿಪ್ರಾಯಗಳು ದೊರೆಯುತ್ತವೆ. ಉದಾಹರಣೆಗೆ ಪಿಯುಸಿ ಓದುತ್ತಿರುವ ಭಾಷಿಕರ ಬಳಕೆಗೂ ಯುಜಿ ಹಾಗೂ ಪಿಜಿ ಓದುತ್ತಿರುವ ಭಾಷಿಕರ ಬಳಕೆಗೂ ಬಹಳ ವ್ಯತ್ಯಾಸವಿದೆ.

ಪಿಯು ಓದುತ್ತಿದ್ದ ಮಕ್ಕಳಲ್ಲಿ bro ಎಂಬ ಪದದ ಬಳಕೆಯೂ ಕೊಂಚ ಭಿನ್ನವಾಗಿದ್ದನ್ನು ಗಮನಿಸಿ ಯಾವ ಅರ್ಥದಲ್ಲಿ ಬಳಸಬಹುದು ಎಂಬ ಕುತೂಹಲದಿಂದ ಕೇಳಿದೆ.ಆಗ ದ್ವೀತಿಯ ಪಿಯುಸಿ ಓದುತ್ತಿರುವ ಹುಡುಗನೊಬ್ಬ
“Bro ಅಂದ್ರೆ ಬಾರೆ ಹುಡುಗಿ ಓಡಿ ಹೋಗೋಣ ಅಂತ ಅರ್ಥ” ಎಂದರೆ ಅದೇ ವಯಸ್ಸಿನ ಹುಡುಗಿ ” bro ಅಂದ್ರೆ ಬಾರೋ ಹುಡುಗ ಓಡಿ ಹೋಗೋಣ ಅಂತ ಅರ್ಥ” ಎಂದು ಹೇಳಿದರು.ಸಂಕ್ಷಿಪ್ತ ರೂಪಗಳು ಬಳಕೆಯ ಸಂದರ್ಭದಲ್ಲಿ ಯಾವೆಲ್ಲಾ ಅರ್ಥಗಳನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಈ ಭಾಷಾ ಪ್ರಕ್ರಿಯೆಯೇ ಸಾಕ್ಷಿ.

ರಚನೆ:ಲೋಹಿತೇಶ್ವರಿ ಎಸ್ ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ