ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾ ಶಿವರಾತ್ರಿ ಜಾತ್ರೆಯ ಕೊನೆಯ ಮಹಾ ರಥೋತ್ಸವ

ಹನೂರು:ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಐದು ದಿನಗಳಿಂದ ನಡೆದ ಮಹಾ ಶಿವರಾತ್ರಿ ಜಾತ್ರೆಯ ಕೊನೆಯ ದಿನವಾದ ನಿನ್ನೆ ಜಾತ್ರೆಯ ಕೇಂದ್ರ ಬಿಂದು ಮಹಾ ರಥೋತ್ಸವವು ಸಾಲೂರು ಬೃಹನ್ಮಠ ಅಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಧಿವ್ಯ ಸಾರಥ್ಯದಲ್ಲಿ ಜರುಗುವ ಮಹಾ ರಥೋತ್ಸವಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಕೈ ಜೋಡಿಸಿ ತೇರಿಗೆ ಚಾಲನೆ ನೀಡಿದರು.
ಲಕ್ಷಾಂತರ ಭಕ್ತರ ಆರಾಧ್ಯೆ ದೈವ ಮಾದಪ್ಪನ ಸನ್ನಿಧಿ ಮಲೈ ಮಹದೇಶ್ವರ ಬೆಟ್ಟದಲ್ಲಿ ಉಘೇ ಉಘೇ ಮಾದಪ್ಪನ ನಾಮ ಸ್ಮರಣೆಯ ಹರ್ಷೋದ್ಗಾರದೊಂದಿಗೆ ಲಕ್ಷಾಂತರ ಮಾದಪ್ಪನ ಭಕ್ತರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾರಥೋತ್ಸವವನ್ನು ಎಳೆದು ಸಂಭ್ರಮಿಸಿದರು.
ಶಿವರಾತ್ರಿ ಜಾತ್ರಾ ಮಹಾ ರಥೋತ್ಸವ ಪ್ರಯುಕ್ತ ಮಾಯ್ಕಾರ ಮಾದಪ್ಪನಿಗೆ ವಿವಿಧ ಪೂಜಾ ಕೈಂಕಾಯ೯ಗಳು ಎಣ್ಣೆಮಜ್ಜನ ಸೇವೆ ಬಿಲ್ವಾರ್ಚನೆ ಕ್ಷೀರಾಭಿಷೇಕ ರುದ್ರಾಭಿಷೇಕ ಪಂಚಾಮೃತಾ ಅಭಿಷೇಕಗಳನ್ನು ಪ್ರಧಾನ ಅರ್ಚಕರು ಸೇರಿದಂತೆ ಅರ್ಚಕರ ವೃಂಧದವರು ಮುಂಜಾನೆ ನೆರವೇರಿಸಿದರು.
ನಂತರ ಕಳಸ ಪೂಜೆ ಬಲಿ ಅನ್ನ ಹಾಗೂ ಆನೆ ಪೂಜೆ ನೆರವೇರಿಸಿದರು.ಬಳಿಕ ಬಿಳಿ ಕುದುರೆ ವಾಹನ ಸತ್ತಿಗೆ ಸೂರಿಪಾನಿ ನಂದಿಧ್ವಜ ವಾಧ್ಯಮೇಳ ಮೆರೆವಣಿಗೆಯೊಂದಿಗೆ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತ ಮಲ್ಲಿಕಾಜು೯ನ ಸ್ವಾಮಿಗಳ ಅಧ್ಯಕ್ಷತೆಯಲ್ಲಿ 9:40 ರಿಂದ 10:10 ರವರಗೆ ಸಲ್ಲುವ ಶುಭ ಲಗ್ನದಲ್ಲಿ ಶೃಂಗಾರಿಸಿದ ತೇರಿನ ಮೇಲೆ ಧೈವ ಸ್ವರೂಪಿ ಭಗವಂತ ಮಾದಪ್ಪನ ವಿಗ್ರಹ ಮೂರ್ತಿ ಕುಳ್ಳಿರಿಸಿ ಕಪೂ೯ರದ ಆರತಿ ಬೆಳಗಿಸಿ ಬೂದು ಕುಂಬಳ ಕಾಯಿ ಹೊಡೆದು ತೇರಿಗೆ ದೃಷ್ಠಿ ತೆಗೆಯುವ ಮೂಲಕ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶಿವರಾತ್ರಿ ಜಾತ್ರೆ ಮುಕ್ತಾಯದ ದಿನವಾದ ಇಂದು ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಉಪವಾಸ ವಿದ್ದು ಮ.ಬೆಟ್ಟದ ಹೊರ ವಲಯದಿಂದ ಶಸ್ತ್ರೋಕ್ತವಾಗಿ ಪೂಜಾ ವಿಧಿ ವಿಧಾನ ನೆರವೇರಿಸಿ ಸಂಪ್ರದಾಯದಂತೆ101 ಹಾಲಾರವಿ ತಲೆ ಮೇಲೆ ಹೊತ್ತು ಸರದಿ ಸಾಲಿನಲ್ಲಿ ಆಗಮಿಸಿ ತೇರಿಗೆ ಪ್ರದಕ್ಷಣೆ ಹಾಕಲಾಯಿತ್ತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನವೆಂಕಟ್,ರಾಜು ಗೌಡ,ಮಂಜೇಶ್ ಗೌಡ,ವಿಜಯ್ ಕುಮಾರ್,ಗೋಪಾಲ್ ನಾಯಕ,ಮಹೇಶ್ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ