ಹನೂರು:ಕೃಷಿ ಬೇಸಾಯದ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ ಆಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಎಲ್ಲೇಮಾಳ ಗ್ರಾ.ಪಂ. ವ್ಯಾಪ್ತಿಯ ಎಂ.ಟಿ. ದೊಡ್ಡಿ ಗ್ರಾಮದ ಮಾರಮ್ಮ ದೇವಸ್ಥಾನ ಆವರಣ ಕೃಷಿ ಇಲಾಖೆ ವತಿಯಿಂದ ಮಳೆಯಾಶ್ರಿತ ಕೃಷಿ ಅಭಿವೃದ್ದಿ ಯೋಜನೆಯಡಿ ಆಯ್ಕೆಯಾದ 42 ಮಂದಿ ರೈತ ಫಲಾನುಭವಿಗಳಿಗೆ ಹಸುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಈ ಗ್ರಾಮಕ್ಕೆ ಅಭಿವೃದ್ದಿ ಮರಿಚೀಕೆಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವಷ೯ಗಳೆ ಕಳೆದಿದ್ದರೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಎಂ.ಟಿ. ದೊಡ್ಡಿ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ವಿಶೇಷ ಅನುದಾನವನ್ನು ಹೆಚ್ಚಾಗಿ ನೀಡಲಾಗುತ್ತದೆ ಎಂದರು
ಹಾಗೆಯೆ ರಸ್ತೆ ತೀರಾ ಹದಗೆಟ್ಟಿರುವುದರಿಂದ ಸಾರಿಗೆ ವಾಹನಗಳು ಗ್ರಾಮದ ಕಡೆಗೆ ಬರುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ಈ ಮಾರ್ಗವಾಗಿ ತೋಮಿಯರ್ ಪಾಳ್ಯ ಬಂಡಳ್ಳಿ ರಸ್ತೆಗಳಿಗೆ ಹೆಚ್ಚಿನ ಅನುಧಾನ ನೀಡಿ ರಸ್ತೆ ಅಭಿವೃದ್ದಿ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಪುಟ್ಟ ಮಕ್ಕಳು ನಮ್ಮ ಗ್ರಾಮದ ಶಾಲೆ ತೀರಾ ಶಿಥಿಲಾವಸ್ಥೆ ತಲುಪಿದೆ ಮತ್ತು ಮಳೆ ಬಂದರೆ ಸೋರುತಿದೆ ಎಂದು ತಿಳಿಸಿದಾಗ ತಕ್ಷಣವೇ ಶಿಕ್ಷಣ ಇಲಾಖೆ ಅಧಿಕಾರಿಗೆ ಮೊಬೈಲ್ ಪೋನ್ ಕರೆ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಮತ್ತು ಶಾಲಾ ಕಟ್ಟಡ ಉತ್ತಮ ಶಿಕ್ಷಣಕ್ಕೆ ಆಗಬೇಕಾಗಿರುವ ಇನ್ನಿತರ ಅನುಕೂಲತೆಗಳ ಬಗ್ಗೆ ಪಟ್ಟಿ ಮಾಡುವಂತೆ ತಿಳಿಸಿದರು.ಇದಲ್ಲದೆ ಗ್ರಾಮಸ್ಥರುಗಳು ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದ ಕಾರಣ ದನ ಕರುಗಳನ್ನು ದೂರದ ಊರಿಗೆ ಸಾಗು ಹಾಕಲಾದೆ ಎಂದು ಆಳಲು ತೋಡಿ ಕೊಂಡರು ಇದಕ್ಕೆ ಪ್ರತಿ ಕ್ರಿಯಿಸಿದ ಶಾಸಕರು ಈ ಎಲ್ಲಾ ವ್ಯವಸ್ಥೆಗಳನ್ನು ಸರಿ ದೂಗಿಸಲು ಸ್ವಲ್ಪ ಕಾಲಾವಕಾಶಗಳು ಬೇಕಾಗುತ್ತದೆ. ಸಧ್ಯದಲ್ಲೆ ಗ್ರಾಮದ ಪ್ರಮುಖ ರಸ್ತೆಗಳಿಗೆ ಆಧ್ಯೆತೆ ನೀಡಲಾಗುತ್ತದೆ. ಎಂದರು.
ಕೃಷಿ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ 2023-24ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಮಳೆಯಾಶ್ರಿತ ಕೃಷಿ ಅಭಿವೃದ್ದಿ ಯೋಜನೆಯಡಿ ತಾಲ್ಲೂಕಿಗೆ 42 ರೈತರಿಗೆ ಹಸುಗಳನ್ನು ವಿತರಣೆ ಮಾಡಲಾಗುತ್ತಿದೆ.ಸಾಮಾನ್ಯ-30 ಪ.ಜಾತಿ-08 ಪಂಗಡ-04 ನೀಡುತ್ತಿದ್ದು ಒಂದು ರಾಸುಗೆ 40 ಸಾವಿರ ರೂಗಳಾಗುತ್ತದೆ.ಸಕಾ೯ರ ಪ್ರೋತ್ಸಹ ಧನ 20 ಸಾವಿರ ಇನ್ನೂಳಿದ 20 ಸಾವಿರ ರೂಗಳನ್ನು ಫಲಾನುಭವಿಗಳು ನೀಡಬೇಕಾಗುತ್ತದೆ. ಇದಲ್ಲದೆ ರೈತರಿಗೆ ವಷ೯ಕ್ಕೆ10 ಸಾವಿರ ರೂಗಳನ್ನು ವ್ಯವಸಾಯದ ಖಚಿ೯ಗೆ ನೀಡಲಾಗುತ್ತದೆ. ಇದು ನಗದು ರೂಪವಾಗಿರುವುದಿಲ್ಲ.ರೈತರು ಬಿತ್ತನೆ ಬೀಜ ರಸ ಗೊಬ್ಬರು ಔಷಧಗಳನ್ನು ನೀಡಲಾಗುತ್ತದೆ ಎಂದರು.
ಈ ವೇಳೆ ಕೃಷಿ ಸಹಾಯಕಿ ನಿರ್ದೇಶಕಿ ಸುಂದ್ರಮ್ಮ ಕೃಷಿ ಅಧಿಕಾರಿ ವೆಂಕಟ ನಾಯಕ ಎಲ್ಲೇಮಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಮಲಮ್ಮ ಸುರೇಶ ಸದಸ್ಯರಾದ ಚಿನ್ನವೆಂಕಟ ರಾಜಪ್ಪ ರಾಧ ಮುಖಂಡರಾದ ಸಿಂಗಾನಲ್ಲೂರು ರಾಜಣ್ಣ ಹನೂರು ಮಂಜೇಶ ವಿಜಯ ಕುಮಾರ್ ಬೂದುಗುಪ್ಪೆ ಸುರೇಶ ಚಂಗವಾಡಿ ಬಲರಾಮ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್