ಗದಗ:ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ಪ್ಯಾಸಿಸ್ಟ್ ದಾಳಿಯನ್ನು ಖಂಡಿಸಿ,ಭಾರತ ಡಬ್ಲ್ಯೂ.ಟಿ.ಓ.ದಿಂದ ಹೊರ ಬರಲು ಒತ್ತಾಯಿಸಿ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದರಿಂದ, ಸಂಯುಕ್ತ ಹೋರಾಟ ಕರ್ನಾಟಕ ಎಸ್.ಕೆ.ಎಮ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ ಆರ್ ನಾರಾಯಣರೆಡ್ಡಿ ಬಣ್ಣದ ಕರೆಯ ಮೇರೆಗೆ ತಿಮ್ಮಾಪೂರ ಗ್ರಾಮದ ಸಂಗೋಳ್ಳಿ ರಾಯಣ್ಣನ ವೃತ್ತದಲ್ಲಿ ಪಂಜಿನ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಆಕ್ರೋಶ ದಿನ ಆಚರಣೆ ಮಾಡುವ ಮೂಲಕ ಬಹಿರಂಗ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ಮಾತನಾಡುತ್ತಾ ದ್ವೇಷದ ಕೋಮುವಾದಿ ರಾಜಕೀಯದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿಯ ಕಾರ್ಯಕರ್ತರಿಗೆ ತಲಾ 20ರಿಂದ 50 ಲಕ್ಷ ರೂ ಪರಿಹಾರ ಕೊಡುವ ಕೇಂದ್ರ ಸರ್ಕಾರ,ದೆಹಲಿಯ ಐತಿಹಾಸಿಕ ರೈತರ ಚಳುವಳಿಯಲ್ಲಿ ಪ್ರಾಣ ಅರ್ಪಿಸಿದ 780 ರೈತರ ಕುಟುಂಬಕ್ಕೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ.
ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ.ರೈತರ ಸಾಲ ಮನ್ನಾ ಮಾಡಿಲ್ಲ,ಬೆಳೆ ನಷ್ಟ ಪರಿಹಾರ,ಬೆಳೆ ವಿಮೆ ಹಾಗೂ ಉದ್ಯೋಗ ಖಾತ್ರಿ ಕೂಲಿಯನ್ನೂ ಕೊಡುತ್ತಿಲ್ಲ.
ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.
ಹೋರಾಟ ನಿರತ ರೈತರ ಮೇಲೆ ಗೋಲಿಬಾರ್ ಮಾಡಿ ಕೊಂದು ಹಾಕಿದೆ.ಲಾಠಿ ಚಾರ್ಜ್ ಮಾಡಿರುವುದು ಮತ್ತು ಹೊಗೆ ಬಾಂಬ್ ಹಾಕಿರುವುದು,ರಸ್ತೆಗಳಿಗೆ ಮೊಳೆ ಹೊಡೆದಿರುವುದು,ರಸ್ತೆಗೆ ದೊಡ್ಡ ಗಾತ್ರದ ಕಾಂಕ್ರೀಟ್ ಬ್ಲಾಕ್ ಹಾಕಿರುವ ಬೆಳವಣಿಗೆ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಪರಿಹರಿಸುವ ಮನಸ್ಸಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸರ್ಕಾರದ ಫ್ಯಾಸಿಸ್ಟ್ ನೀತಿಯ ವಿರುದ್ಧ ದೇಶದ ಜನರು ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ,ಹನುಮಪ್ಪ ತಳವಾರ,ಉದಯ ಗಂಗರಾತ್ರಿ,ಮಾರುತಿ ಕೊಪದ್ದ, ಹೇಮಂತ ಉಂಡಿ ಗಣೇಶ ಅಕ್ಕಸಾಲಿ,ಬಸವರಾಜ ಬಂಟಗೌಡ್ರ,ಫಕೀರಪ್ಪ ಗುಡ್ಲಾನೂರ,ಮಂಜುನಾಥ ಗಂಗರಾತ್ರಿ,ಸುರೇಶ ಹಳ್ಳಿಕೇರಿ ಇನ್ನೂ ನೂರಾರು ರೈತರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.