ಬೀದರ್:ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಬೀದರ್ ಜಿಲ್ಲಾ ಹಾಗೂ ರಾಜ್ಯ ಘಟಕದಿಂದ ಬೀದರ್ ನಗರದ ಕನ್ನಡ ಸಾಹಿತ್ಯ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ 49ನೇ , ಜನ್ಮದಿನಾಚರಣೆ ನಿಮಿತ್ತವಾಗಿ ಈ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಎಚ್.ಸುರೇಶ್ ರವರು ಉದ್ಘಾಟನೆ ಮಾಡಿದರು.ಹೋರಾಟ ಸಾಹಿತ್ಯ ಸಾಂಸ್ಕೃತಿಕ ಸಂಗೀತ ಸರ್ಕಾರಿ ಮಾಧ್ಯಮ ಸಮಾಜ ಸೇವೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯಮಟ್ಟದ ಕರ್ನಾಟಕದ ಯುವರತ್ನ ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ರಕ್ತದಾನ ಶಿಬಿರ ಕೂಡಾ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ
ಶ್ರೀ ಅವಿನಾಶ್ ಬುದರಕರ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯ ಅಧ್ಯಕ್ಷರಾದ ಶ್ರೀ.ಎಚ್.ಸುರೇಶ್,ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶ್ರೀ.ಅವಿನಾಶ್ ಬುದರಕರ್,ಶ್ರೀಸಲ್ಮಾನ್ ಖಾನ್ ಯುವನಾಯಕರು,ಶ್ರೀ.ವಿವೇಕ್ ವಾಲಿ ಯುವ ನಾಯಕರು,ಹಿರಿಯ ನಾಯಕರಾದ ಶ್ರೀ ಅಮೃತ್ ಚಿಮ್ಕೊಡೆ,ನಗರ ಸಭೆ ಸದಸ್ಯರಾದ ಶ್ರೀ.ಅಭೀ ಕಾಳೆ,ಶ್ರೀ.ಪೀಟರ್ ಚಿಟ್ಗುಪ್ಪ ಜಿಲ್ಲಾಧ್ಯಕ್ಷರು ಕೆ.ಆರ್.ವಿ ಪ್ರವೀಣ್ ಶೆಟ್ಟಿ ಬಣ,ವೀರ ಕನ್ನಡಿಗ ಸೈನ್ಯ ಜಿಲ್ಲಾಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ,ಶ್ರೀ.ಸುಧಾಕರ್ ಕೋಟೆ ಜಿಲ್ಲಾಧ್ಯಕ್ಷರು ಕರವೇ ಸಿಂಹ ಸೈನ್ಯ,
ಶ್ರೀ.ರಘುಪ್ರಿಯ ಹಾಸ್ಯ ಕಲಾವಿದರು,ಶ್ರೀ.ಮುಬಿನ್ ಹಾಸ್ಯ ಕಲಾವಿದರು,ಶ್ರೀ ಹಣಮಂತ ಪಾಜೀ ಜಿಲ್ಲಾಧ್ಯಕ್ಷರು ಕೇತಕಿ ಸಂಗಮೇಶ್ವರ ಸಂಸ್ಥೆ,ಶ್ರೀ ಪ್ರಶಾಂತ ಭಾವಿಕಟ್ಟಿ ಜಿಲ್ಲಾಧ್ಯಕ್ಷರು ಕರವೇ ಶಿವರಾಮೆ ಗೌಡ ಬಣ,ಶ್ರೀ.ಸ್ಟೀಫನ್ ಪೌಲ್ ಕರವೇ ಕಾವಲು ಪಡೆ ಬೀದರ್ ಉಪಾಧ್ಯಕ್ಷರು,ಶ್ರೀ.ಅರುಣ್ ಕೊಡುಗೆ ಜಿಲ್ಲಾ ವಿಧ್ಯಾರ್ಥಿ ಒಕ್ಕೂಟ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ