ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೋದಿ ಪ್ರಧಾನಿಯಾಗಲು ನನ್ನ ಗೆಲುವು ಅತ್ಯವಶ್ಯಕ: ಎಸ್.ಬಾಲರಾಜು

ಹನೂರು:ದೇಶಕ್ಕೆ ಮತ್ತೊಮ್ಮೆ ನರೇಂದ್ರ
ಮೋದಿಯವರು ಪ್ರಧಾನಿಯಾಗುವುದು ದೇಶಕ್ಕೆ ಅನಿವಾರ್ಯವಾಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾದ ಎಸ್.ಬಾಲರಾಜ್ ತಿಳಿಸಿದರು.
ಹನೂರು ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ಲೋಕಾಸಭಾ ಚುನಾವಣೆ 2024 ರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರು ಗುಜರಾತ್ ರಾಜ್ಯದಲ್ಲಿ ಮೂರು ಬಾರಿ ಸಿ ಎಂ ಆದರು ಮತ್ತು ದೇಶದಲ್ಲಿ ಎರಡುಬಾರಿ ಪ್ರಧಾನಿಯಾಗಿ ಮತ್ತೊಮ್ಮೆ ಮೂರನೆಯ ಬಾರಿಗೆ ಪ್ರಧಾನಿ ಆಗಲು ದೇಶದ ಜನತೆ ಕಾತರರಾಗಿದ್ದಾರೆ.ಭಾರತಕ್ಕೆ ಕಿರೀಟ ಪ್ರಾಯವಾದ ಜಮ್ಮು ಕಾಶ್ಮೀರಕ್ಕೆ 370 ಕಾಯ್ದೆ ಜಾರಿಗೆ ತಂದವರು. ಹಿಂದೆ ಬರಿ ಗುಂಡಿನ ಸದ್ದು ಕೇಳುತ್ತಿತ್ತು ಈಗ ಅಲ್ಲಿ ನಮ್ಮ ಹಿಂದೂ ದೇವಾಲಯದ ಘಂಟೆಗಳ ಸದ್ದು ಆಗುತ್ತಿದೆ.ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರದ ಎಲ್ಲಾ ಮುಖಂಡರುಗಳು ಒಪ್ಪಿಗೆ ಸೂಚಿಸಿದ್ದಾರೆ.ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಸ್ಮರಿಸುತ್ತೇನೆ ಎಂದರು.ನಮ್ಮ ತಂದೆ ತಾಯಿಗಳು ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು ಅದೇ ರೀತಿಯಲ್ಲಿ ನಾನೂ ಸಹ ಸಾರ್ವಜನಿಕ ಜೀವನದಲ್ಲಿದ್ದೇನೆ.
ನನಗೆ ಕಾಂಗ್ರೇಸ್‌ನಿಂದ ಅನ್ಯಾಯವಾಗಿದೆ,ಅಲ್ಲಿ ಜೀತ ಮಾಡಿದ್ದು ಸಾಕಾಗಿತ್ತು ನಮ್ಮ ಗುರುಗಳಾದ ರಾಜಶೇಖರ್ ಮೂರ್ತಿ ಮತ್ತು ನಮ್ಮ ನಾಯಕರಾದ ಯಡಿಯೂರಪ್ಪರವರ ಆರ್ಶಿವಾದದಿಂದ ಬಿಜೆಪಿ ಪಕ್ಷವು ನನ್ನ ಕೈ ಹಿಡಿಯುವ ವಿಶ್ವಾಸದಿಂದ ಬಿಜೆಪಿಗೆ ಬಂದೆ.ಅದ್ದರಿಂದ ಕ್ಷೇತ್ರದ ಜನತೆ ನನನ್ನು ಆಶೀರ್ವದಿಸಬೇಕು ನಾನು ಯಾವುದೇ ಜಾತಿಗೆ ಸಿಮೀತವಾದವನಲ್ಲ ನಮ್ಮ ಪಕ್ಷವೆ ನಮ್ಮ ಜಾತಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಮಾತನಾಡಿ, ಬಾಲರಾಜ್ ಉತ್ತಮ ಅಭ್ಯರ್ಥಿಯಾಗಿದ್ದಾರೆ ಒಳ್ಳೆಯ ಕೆಲಸಗಾರರು.ಸಿದ್ದರಾಮಯ್ಯನವರ ಹಲವಾರು ಯೋಜನೆಗಳು ಚುನಾವಣಾ ನಂತರ ವಿಫಲವಾಗಲಿವೆ.ದಲಿತರಿಗೆ ಮೀಸಲಿರಿಸಿದ ಹಣವನ್ನು ಬೇರೆಯ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಅವರು ನೀಜವಾದ ದಲಿತ ವಿರೋಧಿ ಸರ್ಕಾರ,ಯುವಕರಿಗೆ ವಂಚಿಸಿದ ಸರ್ಕಾರ ಎಂದು ತಿಳಿಸಿದರು .
ಡಾ ದತ್ತೇಶ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಕಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳು ಕೇಳುಗರಿಗೆ ಪ್ರಪಂಚದಲ್ಲಿ ಮಾದರಿ ಯಾಗುವಂತೆ ಮಾಡಿದ್ದಾರೆ ನಮಗೆ ಮೊದಲು ಬೂತ್ ನಂತರ ಬಾಲರಾಜ್ ಅದಾದ ಮೇಲೆ ಮೋದಿಯವರು ಗೆದ್ದರೆ ಪ್ರಪಂಚವೆ ಗೆದ್ದಂತೆ ಅದ್ದರಿಂದ ಅತ್ಯಂತ ಹೆಚ್ವು ಅಂತರದಲ್ಲಿ ಗೆಲ್ಲಿಸೋಣ ಎಂದು ತಿಳಿಸಿದರು .
ಮಾಜಿ ಶಾಸಕಿ ಪರಿಮಳ ನಾಗಪ್ಪರ ಪುತ್ರರಾದ
ಡಾಕ್ಟರ್ ಪ್ರೀತನ್ ನಾಗಪ್ಪ ಮಾತನಾಡಿ ದೇಶ ಸೇವೆಯಲ್ಲಿ ಮೋದಿಯವರ ಹತ್ತು ವರ್ಷದ ಸಾಧನೆಯನ್ನು ಪ್ರತಿ ಮನೆ ಮನೆಗೆ ಪ್ರಚಾರ ಮಾಡಿ ಮತಯಾಚನೆ ಮಾಡಿ ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇರುತ್ತೇವೆ ಕಾರ್ಯಕರ್ತರಿಗೆ ಒಬ್ಬ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಅವರಿಗೆ ನಮ್ಮ ಹನೂರು ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಡೀ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಲು ಪ್ರಯತ್ನ ಮಾಡೋಣ ಎಂಬುದಾಗಿ ತಿಳಿಸಿದರು .
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್,ಚುನಾವಣೆ ಉಸ್ತುವಾರಿ ಜಿಲ್ಲಾ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ,ಒ ಬಿ ಸಿ ಮೋರ್ಚಾ ವೆಂಕಟೇಶ್,ರಾಷ್ಟ್ರೀಯ ಪರಿಷತ್ ಸದಸ್ಯ ವೆಂಕಟಸ್ವಾಮಿ,ವೆಂಕಟೆಗೌಡ,ನಿಶಾಂತ್,ಹನೂರು ಮಂಡಲ ಅಧ್ಯಕ್ಷರಾದ ವೃಷಬೇಂದ್ರ ಮಲೆ ಮಹದೇಶ್ವರಬೆಟ್ಟ ಮಂಡಲದ ಅಧ್ಯಕ್ಷ ರಾಜು, ಕಾರ್ಯಕರ್ತರುಗಳು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ