ಕೊಟ್ಟೂರು:ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಸೇವೆ ನೀಡುವಂತೆ ಒತ್ತಾಯಿಸಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕಾ.ನಿ.ಪ ಧ್ವನಿ ಸಂಘಟನೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರ ಸೂಚನೆಯಂತೆ ಕೊಟ್ಟೂರು ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸಂಘಟನೆಯ ಅಧ್ಯಕ್ಷರಾದ ಚಿಗಟೇರಿ ಜಯಪ್ಪ ಹಾಗೂ ಪದಾಧಿಕಾರಿಗಳ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಪಟ್ಟಣದ ತಹಶೀಲ್ದಾರ್ ಜಿ.ಕೆ.ಅಮರೇಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯರವರು 2024 ಫೆಬ್ರವರಿಯಲ್ಲಿ ಮಂಡಿಸಿದ ಪೂರ್ಣಾವಧಿ ಬಜೆಟ್ ಅಧಿವೇಶ ಸಮಯದಲ್ಲಿ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ ಉಚಿತ ಬಸ್ ಸೇವೆ ನೀಡಲಾಗುವುದು ಎಂದು ಹೇಳಿದ್ದಾರೆ ಅಷ್ಟೆ ಇದುವರೆಗೂ ಜಾರಿಯಾಗಿಲ್ಲ ಅದ್ದರಿಂದ ಅತೀ ಶೀಘ್ರವೇ ಉಚಿತ ಬಸ್ ಸೇವಾ ಸೌಲಭ್ಯ ಪತ್ರಕರ್ತರಿಗೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಡಿ ಎಸ್ ಎಸ್ ಅಧ್ಯಕ್ಷರು ಹಾಗೂ ಪತ್ರಕರ್ತ ಉಮೇಶ್ ತಿಳಿಸಿದರು.
ಸಂವಿಧಾನದ ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ ಸಮಾಜಕ್ಕಾಗಿ,ಸಮಾಜದ ಏಳಿಗೆಗಾಗಿ ಎಷ್ಟು ಮುಖ್ಯವಾಗಿ ಕೆಲಸ ನಿರ್ವಹಿಸುತ್ತವಯೋ ಅಷ್ಟೇ ಪ್ರಮಾಣದಲ್ಲಿ ಪತ್ರಕರ್ತರು ಸಹ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.ಸಮಾಜದ ಅಂಕುಡೊಂಕನ್ನು ತಿದ್ದೋ ಕೆಲಸ ಪತ್ರಿಕಾರಂಗ ಮಾಡುತ್ತಾ ಬಂದಿದೆ. ನ್ಯಾಯೋಚಿತವಾಗಿ ಸಂವಿಧಾನ ಬದ್ದವಾಗಿ ಸಿಗುವ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಪತ್ರಕರ್ತರಿಗೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ,ತಾಲೂಕು,ಹೋಬಳಿ ಮಟ್ಟದಲ್ಲಿ ಪತ್ರಕರ್ತರ ಪ್ರತಿಭಟನೆ ಮಾಡಲಾಗುವುದು ಎಂದು ಈ ಮನವಿ ಪತ್ರ ಮೂಲಕ ರಾಜ್ಯ ಸರ್ಕಾರದ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಾಲೂಕು ಕಾ ನಿ ಪ ಧ್ವನಿ ಸಂಘಟನೆ ಪತ್ರಕರ್ತರಾದ ಮಂಜುನಾಥ ಮೋರಗೇರಿ, ವೈ.ಮಹೇಶ್,ಗುರುಬಸವರಾಜ,ಅಣ್ಣಪ್ಪ,ನಾಗರಾಜ ಸಿ.ಪೂಜಾರ ಷಣ್ಮುಖ ಮುಂತಾದವರು ಉಪಸ್ಥಿತರಿದ್ದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು