ಹನೂರು:ಲೋಕಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆ ಪೊನ್ನಾಚಿ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಗ್ರಾಮದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಯಿತು.
ಪೊನ್ನಾಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿರುವ ಲೋಕೇಶ್ ಮಾತನಾಡಿ ನಮ್ಮ ದೇಶದಲ್ಲಿ ಚುನಾವಣಾ ಸಮಯದಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು.ಮತದಾನದ ದಿನ ಕಡ್ಡಾಯವಾಗಿ ನಾವೆಲ್ಲರೂ ಮತದಾನ ಮಾಡಬೇಕು ಯೋಗ್ಯರನ್ನ ಆಯ್ಕೆ ಮಾಡಿ ಯಾವುದೇ ಹಣದ ಆಮಿಷಕ್ಕೆ ಒಳಗಾಗದೆ ದೇಶಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ಮತದಾರ ಪ್ರಭುವಿನ ಪಾತ್ರ ಅತ್ಯಮೂಲ್ಯವಾಗಿದೆ ಇದರಿಂದ ದೇಶದ ಅಭಿವೃದ್ಧಿ ಹೊಂದಲು ಸಾದ್ಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ SWEEP ಮಹೇಶ್ ಮಾದರಿ ವಿಡಿಯೋ ತೋರಿಸುವ ಮೂಲಕ ಜನರಲ್ಲಿ ಮತದಾನದ ಅರಿವು ಮೂಡಿಸಿದರು.
ವಿಶೇಷವಾಗಿ ಶಾಲಾ ಮಕ್ಕಳು ತಂದೆ ತಾಯಿಗಳಿಗೆ ಪತ್ರ ಬರೆಸುವುದರ ಮುಖಾಂತರ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.ಈ ಸಮಯದಲ್ಲಿ ವಿ ಎಲ್ ಡಬ್ಲ್ಯೂ ನಾಗರಾಜು, ಮಂಜು,ನೇತ್ರಾ,ವಿಕಲಾಂಗ ಚೇತನರು ಹಾಗೂ ಮಹಿಳೆಯರು ಸೇರಿದಂತೆ ಶಾಲಾಮಕ್ಕಳು,ಪೋಷಕರು ಭಾಗವಹಿಸಿದ್ದರು.
ವರದಿ:ಉಸ್ಮಾನ್ ಖಾನ್