ಬಸವನ ಬಾಗೇವಾಡಿ-ಭೀಕರ ಬರಗಾಲದಿಂದ ನೀರಿನ ಅಭಾವ ಇರುವ ಕಾರಣ ಈ ಬಾರಿ ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ ಬಣ್ಣದಾಟ ಆಡುವುದನ್ನು ಕಡಿಮೆ ಮಾಡಿ ಮನೆಯಲ್ಲೇ ಬಣ್ಣದಾಟ ಆಚರಣೆ ಮಾಡುವುದು ಸೂಕ್ತ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹೋಳಿ ಹಬ್ಬ ಎಂದರೆ ಅದರ ಸಂಭ್ರಮವೇ ಬೇರೆ, ಈ ವರ್ಷ ವರುಣನ ಕೃಪೆಯಾಗಿಲ್ಲ ಅಂತರ್ಜಲ ಸೊರಗುವ ಹಂತಕ್ಕೆ ತಲುಪಿದೆ.
ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬಣ್ಣದಾಟದ ಆಚರಣೆಗೆ ಈ ಬಾರಿ ಬ್ರೇಕ್ ಹಾಕಿದರೆ ನೀರಿನ ಮಿತವ್ಯಯ ಸಾಧಿಸಬಹುದಾಗಿದೆ ಎಂದು ಬಸವನ ಬಾಗೇವಾಡಿ ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ಅವರು ಮನವಿ ಮಾಡಿಕೊಂಡಿದ್ದಾರೆ.
