ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಪ್ರಚಾರ ಪ್ರಾರಂಭಿಸಿದ:ಸುನಿಲ್ ಬೊಸ್

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸುನೀಲ್ ಬೊಸ್ ಮಾತನಾಡಿ ನಾನು ಪಕ್ಷಕ್ಕಾಗಿ ಹಗಲಿರುಳು ಎನ್ನದೆ ದುಡಿದವನು ಶ್ರಮ ಪಟ್ಟವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯದ ಮಾತೇ ಇಲ್ಲ ಹಾಗಾಗಿ ನಮ್ಮ ಮುಂದಿನ ಸವಾಲು ಚುನಾವಣಾ ಎಂಬ ಮೈದಾನದಲ್ಲಿ ಅನ್ಯ ಪಕ್ಷದವರ ಜೊತೆಯಲ್ಲಿ ಹೋರಾಟ ಮಾಡಿ ಜಯಗಳಿಸಲು ಸಜ್ಜಾಗಬೇಕು,ನಮ್ಮ ಕಾರ್ಯಕರ್ತರು ಅತಿ ಹೆಚ್ಚು ವಿಶ್ವಾಸಾರ್ಹ ಒಳ್ಳೆಯದಲ್ಲ ಮುಖ್ಯವಾಗಿ ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ ನಮಗೆ ಕೊಟ್ಟಂತ ಶಕ್ತಿಯನ್ನು ಮತ್ತೆ ವಾಪಾಸು ನಾನು ನಿಮಗೆ ಕೊಡುತ್ತೇನೆ,ಬಡವರ ಪರವಾಗಿ ಕೆಲಸ ಮಾಡಿದ ಪಕ್ಷ ನಮ್ಮದು ಬಿಜೆಪಿಯು ಮೀಸಲಾತಿಯನ್ನು ಕಡಿತಗೊಳಿಸಲು ಹುನ್ನಾರ ಮಾಡುತ್ತಿದೆ ಯಾವುದೇ ಪಕ್ಷ ಜನರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಅಂತಹವರಿಗೆ ಮತ ನೀಡಬೇಕಾಗಿದೆ ಎಂದು ವಿನಂತಿಸಿದರು.
ಹನೂರು ಪಟ್ಟಣದಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ
ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಮಾತನಾಡಿ ಪ್ರತಿಯೊಬ್ಬರಿಗೂ ಅವಕಾಶಗಳು ಬಂದೆ ಬರುತ್ತವೆ ಎಲ್ಲರೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು,ಹನೂರು ಕ್ಷೇತ್ರದಲ್ಲಿ ಹೆಚ್ಚು ಲೀಡ್ ಕೊಟ್ಟರೆ ಮುಂದಿನ ದಿನಗಳಲ್ಲಿಯೂ ಸಹ ನಾವು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗುತ್ತದೆ, ಪ್ರತಿಯೊಬ್ಬರೂ ಯಾವ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆತ್ತವೆ ಅವರಿಗೆ ಮತ ನೀಡಬೇಕು ನಮ್ಮ ಸರ್ಕಾರದ ವತಿಯಿಂದ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣದ ಜೊತೆಯಲ್ಲಿ ಸ್ಕಾಲರ್ಶಿಪ್ ನೀಡುತ್ತಿದ್ದೇವೆ,ನಮ್ಮ ದೇಶದಲ್ಲಿ ಮೋದಿಯವರು ಭಾವನಾತ್ಮಕ ವಿಷಯವಾಗಿ ದೇಶವನ್ನು ಮುನ್ನೇಡಸುತ್ತಾರೆ ಅವರು ರಾಮಂದಿರ ಕಟ್ಟಿರುವುದು ದೊಡ್ಡ ವಿಚಾರವೇನಲ್ಲ ನಮ್ಮ ಮನೆಗೆ ಅಕ್ಕಿ ಕೊಟ್ಟಿರುವುದು ನಮ್ಮ ಸರ್ಕಾರದು ಮುಂದಿನ ದಿನಗಳಲ್ಲಿ ನಮ್ಮ ಪಕ್ಷವು ಕೆಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದರು.ಸರ್ಕಾರದ ಮತ್ತೋರ್ವ ಸಚಿವರಾದ
ಹೆಚ್ ಸಿ ಮಹದೇವಪ್ಪ ಮಾತನಾಡಿ ನಿರಂತರವಾಗಿ ಜನರಿಗೆ ಸ್ಪಂದಿಸುವ ಮಾಜಿ ಶಾಸಕರನ್ನು ಗುಣಗಾನ ಮಾಡಿದರು,ಜಿಲ್ಲೆಯಲ್ಲಿಯೆ ಈ ಕ್ಷೇತ್ರವು ಸವಾಲಿನ ಕ್ಷೇತ್ರವಾಗಿದೆ ಇವರ ಮನೆತನವುವ ಕಾರ್ಯಕರ್ತರ ಆಸ್ತಿಯಾಗಿದೆ ಹದಿಮೂರು ಚುನಾವಣಾ ಸ್ಪರ್ದಿಸಿದ ಕೀರ್ತಿ ಜಿ ವಿ ಗೌಡರ ಕುಟುಂಬಕ್ಕಿದೆ ಸಂಘಟನೆಗೆ ಹಲವಾರು ವರ್ಷಗಳ ಶ್ರಮವಿದೆ,ಮುಂದಿನ ಚುನಾವಣೆಯಲ್ಲಿ ಈಗೀರುವವರು ಮನೆಗೆ ವಾಪಾಸು ಹೊಗುತ್ತಾರೆ ಮತ್ತೆ ನರೇಂದ್ರರವರೆ ಮುಂದಿನ ಶಾಸಕರಾಗಿರುತ್ತಾರೆ ಎಲ್ಲಾ ಬೂತ್ ಗಳಲ್ಲಿ ನರೇಂದ್ರರವರ ಅಭ್ಯರ್ಥಿ ಎಂದು ಸುನೀಲ್ ಬೋಸ್ ರ ಪರವಾಗಿ ಕಾರ್ಯನಿರ್ವಹಿಸಬೇಕು ಬೊಸ್ ಕಳೆದ ಹಲವಾರು ವರ್ಷ ಚುನಾವಣಾಗಳಲ್ಲಿ ಕೆಲಸ ಮಾಡಿದ್ದಾರೆ ಕಾರ್ಯಕರ್ತರ ಮಟ್ಟದಲ್ಲಿ ಬೆಳೆದವರು ಹನೂರು ಕ್ಷೇತ್ರದಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮೂರು ಸಾವಿರ ಕೋಟಿಯಷ್ಟು ಅನುಧಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮಹದೇಶ್ವರ ಬೆಟ್ಟವು ಇಡೀ ಕ್ಷೇತ್ರದಲ್ಲಿ ಧಾರ್ಮಿಕ ಕೇಂದ್ರವಾಗಿದೆ ಇನ್ನೂರು ಅರವತ್ತಕ್ಕೂ ಹೆಚ್ಚು ಸಮುದಾಯ ಭವನ ನಿರ್ಮಾಣವನ್ನು ನರೇಂದ್ರ ಮಾಡಿದ್ದಾರೆ.ಕರ್ನಾಟಕದ ಮೂಲೆಮೂಲೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿದ್ದೇವೆ ಮೊದಲನೆ ಕುಡಿಯುವ ನೀರಿನ ಕಾಮಗಾರಿ ಮುಗಿದಿದೆ ರಸ್ತೆ ಕಾಮಾಗಾರಿಗಳಿಗಾಗಿ ಮಾಜಿ ಶಾಸಕ ನರೇಂದ್ರ ಗಲಾಟೆ ಮಾಡಿದವರು ಇವರು ಹತ್ತು ಸಾವಿರಕ್ಕೂ ಕಿಲೋಮೀಟರ್ ಗೂ ಹೆಚ್ಚು ರಸ್ತೆ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗಿದೆ.ಪ್ರತಿ ಮುಖಂಡರು ನಿಮ್ಮ ನಿಮ್ಮ ಬೂತ್ ಗಳಲ್ಲಿ ನೀವೆ ಅಭ್ಯರ್ಥಿ ಎಂದು ಮತ ಹಾಕಿಸಬೇಕೆಂದು ಮನವಿ ಮಾಡಿದರು .
ಸಭೆಯ ಅಧ್ಯಕ್ಷತೆಯನ್ನು ವಹಿಸಿದ
ಮಾಜಿ ಶಾಸಕರಾದ ಆರ್.ನರೇಂದ್ರ ಮಾತನಾಡಿ ದೃವನಾರಯಣ್ ರನ್ನು ಸ್ಮರಿಸುತ್ತಾ ಮಾದಪ್ಪನ ಸನ್ನಿಧಿಯಿಂದ ಪ್ರಚಾರ ಕಾರ್ಯ ಮಾಡುತ್ತಿದ್ದೇವೆ ಕಳೆದ ಸಲ ನಡೆದ ಘಟನೆಯನ್ನು ಮರೆತು ಮುಂದಿನ ಚುನಾವಣೆಯಲ್ಲಿ ಎರಡು ಲಕ್ಷಕ್ಕೂ ಹಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ನಮ್ಮ ಕ್ಷೇತ್ರದಲ್ಲಿ ಕನಿಷ್ಠ ಇಪ್ಪತೈದು ಸಾವಿರ ಲೀಡ್ ಗಳ ಅಂತರ ದಿಂದ ‌ಆಯ್ಕೆಮಾಡಲೇಬೇಕು ನಮ್ಮ ಸರ್ಕಾರದ ಯೋಜನೆಗಳು ಬಹಳ ಜನಪ್ರಿಯತೆ ಗಳಿಸಿವೆ ಇಂದಿನಿಂದ ಪ್ರಚಾರ ಆರಂಭಿಸೋಣ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಪ್ರಯತ್ನ ಮಾಡಿದ ಎಲ್ಲಾ ಕೆಲಸಗಳು ಇಂದು ನಡೆದಿವೆ ನಮಗೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದಾರೆ ಅವರಿಗೆ ಮತ ನೀಡಲು ನೆರವಾಗಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎಮ್.ಎಲ್.ಸಿ ಗಳಾದ ತಿಮ್ಮಯ್ಯ,ಮಾಜಿ ಶಾಸಕ ಯತೀಂದ್ರ,ಮರಿಸ್ವಾಮಿ , ನವನೀತ್ ಗೌಡ,ಬ್ಲ್ಯಾಕ್ ಅಧ್ಯಕ್ಷರುಗಳಾದ ಈಶ್ವರ್,ಮುಕುಂದ ವರ್ಮ,ಬಂಡಳ್ಳಿ ತಾರೀಖು,ಪ ಪ ಸದಸ್ಯರುಗಳಾದ ಗಿರೀಶ್,ಹರೀಶ್,ಸಂಪತ್ತು,ಸುದೇಶ್, ಸಿದ್ದಾರಾಜು,ನಟರಾಜು,ಜಾವೇದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾರ್ಯಕರ್ತರ ಸಭೆಯಲ್ಲಿ ಅನಿಲ್,ಅರುಳ್ ಸೆಲ್ವಂ, ಸೇರಿದಂತೆ ಲೊಕ್ಕನಹಳ್ಳಿ ಮುಖಂಡರು ಸೇರಿದಂತೆ ಇನ್ನಿತರರು ಜೆ ಡಿ ಎಸ್ ಮತ್ತು ಬಿಜೆಪಿ ತೊರೆದು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ