ಸೇಡಂ:ಸದೃಢ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಸಂಸದ ಉಮೇಶ ಜಾಧವ ಮನವಿ ಮಾಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಲಬುರಗಿ ಜಿಲ್ಲೆಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್,1 ಲಕ್ಷ ಜನರಿಗೆ ಪ್ರತ್ಯಕ್ಷ ಹಾಗೂ 2 ಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರಕಲಿದೆ.ಲಕ್ಷಾಂತರ ಜನರ ಕನಸು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮ ಮಂದಿರದ ನಿರ್ಮಾಣಕ್ಕೆ ನೇತೃತ್ವ ವಹಿಸಿ ಮಂದಿರ ಕಟ್ಟಿಸಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿಸಿ ಜನರ ಕನಸನ್ನು ನನಸುಗೊಳಿಸಿದೆ.ಅಲ್ಲದೇ ಹತ್ತು ವರ್ಷಗಳಿಂದ ಜನರ ಬೇಡಿಕೆಯಂತೆ ಕಲಬುರಗಿಯಿಂದ ಬೆಂಗಳೂರಿಗೆ ಎರಡು ವಿಶೇಷ ರೈಲುಗಳನ್ನು ಆರಂಭಿಸಿದ್ದೇನೆ.ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಈ ಭಾಗದ ಜನರ ಅಭಿವೃದ್ಧಿಗೂ ಶ್ರಮಿಸಲಾಗಿದೆ. ಹೀಗಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನಾವೆಲ್ಲರೂ ಬಿಜೆಪಿ ಗೆಲ್ಲಿಸಬೇಕು ಎಂದರು.
ಶ್ರೀ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ ಮೋದಿಜೀಯವರಂತೆ
ಸದಾ ಸೇವಕನಾಗಿ ಈ ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ.ಕೆಲವೊಂದು ಕೆಲಸಗಳು ಅರ್ಧಕ್ಕೆ ನಿಂತಿದ್ದು ಅವುಗಳನ್ನು ಪೂರ್ತಿಗೊಳಿಸಲು ಹಾಗೂ ಮೋದಿಜೀಯವರ ಕೈ ಬಲ ಪಡಿಸಲು ಕ್ಷೇತ್ರದ ಜನತೆ ಆಶಿರ್ವಾದಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಬುರ್ಗಿ ಗ್ರಾಮಿಣ ಶಾಸಕ ಬಸವರಾಜ ಮತ್ತಿಮೂಡ್,ಮಾಜಿ ಶಾಸಕ ರಾಜಕುಮಾರ ಪಾಟೀಲ್,ಮಾಜಿ ವಿಧಾನಪರಿಷತ್ ಸದಸ್ಯ ಬಿ.ಜಿ ಪಾಟೀಲ್,ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್,ಬಿಜೆಪಿ ಮುಖಂಡ ಚಂದು ಪಾಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ,ಅವ್ವಣ್ಣ ಮ್ಯಾಕೇರಿ,ಸೇಡಂ ಮಂಡಲದ ಅಧ್ಯಕ್ಷ ಶರಣು ಮೆಡಿಕಲ್,ತಿರುಪತಿ ಶಾಬಾದಕರ್, ಅತೀಶ್,ನಾಗಪ್ಪ ಕೊಳ್ಳಿ,ಓಂ ಪ್ರಕಾಶ ಪಾಟೀಲ್,ಸಿದ್ದು ಬಾನರ್ ಸೇರಿದಂತೆ ಇನ್ನಿತರರಿದ್ದರು.
ವರದಿ ಉಸ್ಮಾನ ಭಾಶಾ ಊಡಗಿ