ಕಲಬುರಗಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್.ಮಾಂಗ ಹೇಳಿದರು
ಪುರಸಭೆ ಹಾಗೂ ತಾಲೂಕ ಸ್ವೀಪ್ ಸಮಿತಿ ಚಿತ್ತಾಪೂರ ರವರು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 5 ವರ್ಷಕ್ಕೊಮ್ಮೆ ಭಾರತೀಯ ನಾಗರಿಕರಿಗೆ ಸಿಗುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಈ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬಲ್ಲ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶ ದೊರೆಯುತ್ತದೆ ಎಂದರು.
ಮತದಾನ ಜಾಗೃತಿ ಜಾಥಾ ಪುರಸಭೆ ಕಾರ್ಯಾಲಯದಿಂದ ನಾಗಾವಿ ಸರ್ಕಲ್,ಜನತಾ ಬಜಾರ್,ಭುವನೇಶ್ವರಿ ಚೌಕ ಮುಖಾಂತರ ಬಸ್ ಸ್ಟ್ಯಾಂಡ್,ಲಾಡ್ಜಿಂಗ್ ವೃತ್ತದವರೆಗೆ ಸಾಗಿತು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಂಬ್ರೇಶ ಬಿರಾದಾರ ಸುನೀಲ್,ವಿಠ್ಠಲ್ ಹಾದಿಮನಿ,ಶರಣಪ್ಪ, ಆರೋಗ್ಯ ನಿರೀಕ್ಷಕ ವೆಂಕಟೇಶ ಕುಮಾರ, ಶರಣಕುಮಾರ,ಲೋಹಿತ್ ಕಟ್ಟಿಮನಿ, ಶಿರೇಸ್ತದಾರರಾದ ಅಶ್ವಥ ನಾರಾಯಣ,ರವಿಶಂಕರ, ನವಿನ್,ಮರೆಪ್ಪ,ಭೀಮರಾಯ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.