ಓಟದ ನಡಿಗೆ ವೇಗವು ತಗ್ಗಿದಂತೆಯಾಗಿದೆ ಅಂತರ್ಜಾಲದ ಹಲವಾರು ದೃಶ್ಯಗಳಲ್ಲಿ ಬರುವ ವಿಚಾರವಾಗಿ ಅದು ಸರಿ ಇದು ಸರಿ ಎಂಬ ಯೋಚನೆಯನ್ನು ಮಾಡುತ್ತಾ ಕುಳಿತಿದ್ದೆ ಹಣಕಾಸಿನ ವ್ಯವಸ್ಥಿತ ಜಾಲಗಳು ಬೇರೂರಿದೆ.ರಣಹದ್ದುಗಳು ಸತ್ತ ಪ್ರಾಣಿಗಳ ಮೇಲೆರಗಿ ಬರುವಂತೆ ಇರುವುವು. ಸಂಪೂರ್ಣ ಸುಳಿಗೆ ಸಿಕ್ಕಿ ನರಳಿದಂತೆ ನರಕಯಾತನೆ.
ನಿಜವೆಂಬ ಭ್ರಮೆಯಿಂದ ಹೊರ ಬರುವುದೆಂದರೆ ಜೇಡರ ಬಲೆಗೆ ಸಿಲುಕಿದ ಕೀಟದಂತೆ ಎತ್ತ ನೋಡಿದರು ಬಿರುಬಿಸಿಲು,ಬಿಸಿ ಗಾಳಿಯನ್ನೇ ಆಸ್ವಾದಿಸಿ ಕುಡಿಯುವ ಪರಿಸ್ಥಿತಿ,ಆಕಾಶಕ್ಕೆ ಮುಖ ಮಾಡಿ ಕುಳಿತ ರೈತನ ಪಾಡು,ಬತ್ತಿಹ ಭೂಮಿಯ ಒಣ ಹವೆಯ ಸುಡುತ್ತಿರುವ ಬಿಸಿಲಿಗೆ ಮೈಯೊಡ್ಡುವ ಪರಿಸ್ಥಿತಿಯು ಈ ಕಾಲದಲ್ಲಿ ಇಂತಹ ಸಂದರ್ಭಗಳಿಂದ ಹೊರ ಬರುವುದೆ,ಸಿಲುಕಿದ ಜಾಲದಿಂದ ಹೇಗಾದರೂ ಮಾಡಿ ಬಂದರು ಇನ್ನೊಂದು ಬಲೆ ಆಹ್ವಾನಿಸುತ್ತಿರುತ್ತದೆ.
ಮಾನವ ಜೇಡರ ಬಲೆಗೆ ಸಿಕ್ಕ ಕೀಟದಂತಾಗಿದ್ದಾನೆ ಯಾವ ಭಾಗಕ್ಕಾದರೂ ತಾನಾಗೆ ಹೋಗಿ ಸಿಲುಕಿ ಕೊಳ್ಳಬಹುದು ಕೊನೆ ಎಂಬುದೇ ಇಲ್ಲ.(ಮುಂದುವರಿಯುತ್ತದೆ)…
-ಚೇತನ್ ಕುಮಾರ್ ಎಂ,ಕೆ,ಮೈಸೂರು