ಗಂಗಾವತಿ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ ಭಟ್ಟರ ಹಂಚಿನಾಳ್ ನಲ್ಲಿ 69ನೆಯ ಅಖಿಲ ಭಾರತ ಸಹಕಾರ ಸಪ್ತಮಿಯನ್ನು ಆರನೇ ದಿನದಂದು ದಿನಾಚರಣೆಯನ್ನು ಆಚರಣೆ ಮಾಡಲಾಯಿತು,ಕಾರ್ಯಕ್ರಮದ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ಅಧ್ಯಕ್ಷರಾದ ಡಾಕ್ಟರ್ ಶೇಖರಗೌಡ ಮಾಲಿ ಪಾಟೀಲ್, ಉದ್ಘಾಟಕರಾದ , ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಗೌಡ ಬೂದುಗುಂಪ, ಪಂಪಾಪತಿ ಸಿಂಗನಾಳ ಟಿ ಎ ಪಿಸಿ ಎಂ ಅಧ್ಯಕ್ಷರು ಕರಾಟಗಿ, ಶ್ರೀ ದೊಡ್ಡಪ್ಪ ದೇಸಾಯಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಗಂಗಾವತಿ ಧ್ವಜ ರೋಣವನ್ನು,ನೆರವೇರಿಸಿದರು,
ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಜಿ ಐ ಪಡೆಸಲಿ, ಎಂ ಸತ್ಯನಾರಾಯಣ ಒಕ್ಕೂಟದ ನಿರ್ದೇಶಕ ಮಾಜಿ ಅಧ್ಯಕ್ಷರವರು ಮಾತನಾಡಿ, ಪ್ರತಿ ವರ್ಷ ಭಾರತದಾದಂತ ನವಂಬರ್ 14ರಿಂದ 20ರವರೆಗೆ ಅಖಿಲ ಭಾರತ ಸಹಕಾರ ಸಪ್ತಹ ಆಚರಣೆ ನಡೆಸುತ್ತಿದ್ದು ನವೆಂಬರ್ 14 ಪಂಡಿತ್ ನೆಹರು ರವರ ಹುಟ್ಟುಹಬ್ಬವಾಗಿದ್ದು, ನೆಹರು ಅವರು ಸಹಕಾರ ಚಳುವಳಿಯ ಬೆಳವಣಿಗೆಗೆ ನೀಡಿದ ಪ್ರೋಸ್ತಕಾಗಿ ಮತ್ತು ಸಹಕಾರದ ಪಿತಾಮರಾದ ಸಿದ್ದನಗೌಡ ಹಾಗೂ ಕ್ಷೀರ ಕ್ರಾಂತಿ ಪಿತಾಮ ಕುರಿಯನ್ ರ ವರಿಗೆ ಕೃತಜ್ಞತೆಗಳು ಅರ್ಪಿಸುತ್ತಾ, ಕೊಪ್ಪಳ ಜಿಲ್ಲೆಯಲ್ಲಿ 258 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಎಪ್ಪತ್ತು ಸಾವಿರ ಆರು ಸಾವಿರ ಹಾಲು ಸಂಗ್ರಹಣೆ ಆಗುತ್ತಿದ್ಲು, ಇದಕ್ಕೆ ರೈತರು ಸಹಕಾರವೇ ಕೇಂದ್ರಬಿಂದು, ಒಕ್ಕೂಟದಿಂದ ರೈತರಿಗೆ ಸಾಕಷ್ಟು ಅನುಕೂಲವಿದ್ದು, ರಾಸುಗಳ ಜೀವವಿಮೆ,ರಬ್ಬರ್ ಮ್ಯಾಟರ್, ಚಾಪ್ ಕಟರ್, ಅಕಾಲಿಕ ಮರಣ ಹೊಂದಿದ ರೈತರಿಗೆ 20.000 ಸಹಾಯಧನ ನೀಡಲಾಗುವುದು, ಹಾಲು ಉತ್ಪಾದಕರ ಸಹಕಾರಸಂಘಗಳಿಗೆ ಸಂಬಂಧಿಸಿದಂತೆ ಪೀಠೋಪಕರಣಗಳನ್ನು ಒದಗಿಸುವುದು, ಕಟ್ಟಡಗಳಿಗೆ ಅನುದಾನ ದೊರಕಿಸುವುದು, ಸಹಕಾರದಿಂದ ರಿಯಾತಿಯ ಅನುದಾನದಲ್ಲಿ ರೈತರಿಗೆ ಸೌಲಭ್ಯವನ್ನು ಒದಗಿಸಲಾಗುತ್ತದೆ, ಒಕ್ಕೂಟದಿಂದ ಲೀಟರ್ಗೆ ಒಂದು ರೂಪವನ್ನು ಹೆಚ್ಚಿಸಿದೆ ಆದರೆ ಪಶು ಆಹಾರವನ್ನು ಕಡಿತಗೊಳಿಸಲು ಸರಿಯಾದ ಮಾರ್ಗವನ್ನು ಅನುಸರಿಸಿ ಸೂಕ್ತ ದರದಲ್ಲಿ ಪಶು ಆಹಾರವನ್ನು ಕಲ್ಪಿಸಿಕೊಡಲಾಗುವುದು ಮತ್ತು ಸೂಕ್ತ ಸಮಯದಲ್ಲಿ ರಾಸುಗಳಿಗೆ ಪಸು ಚಿಕಿತ್ಸೆ ನೀಡಲಾಗುವುದು, ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ಅಧ್ಯಕ್ಷರಾದ ಡಾಕ್ಟರ್ ಶೇಖರಗೌಡ, ಮಾಲಿಪಾಟೀಲ್, ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಗೌಡ ಬೂದುಗುಂಪ, ಕೊಪ್ಪಳ ಸಹಕಾರ ಯನಿಯನ್ ನಿರುದಶಕರಾದ ಶ್ರೀಮತಿ ಶಕುಂತಲಾ ಉಡಜಾಲಿ ಶ್ರೀ ಪಂಪಾಪತಿ ಸಿಂಗನಾಳ ಟಿ ಎ ಪಿಸಿ ಎಂ ಅಧ್ಯಕ್ಷರು ಕರಾಟಗಿ, ಶ್ರೀ ದೊಡ್ಡಪ್ಪ ದೇಸಾಯಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಗಂಗಾವತಿ , ಕೊಪ್ಪಳ ತಾಲೂಕು ಸಹಕಾರ ಸಂಘಗಳ ಅಧಿಕಾರಿಗಳು ತಾಲೂಕು ಹಾಲು ಉತ್ಪಾದಕರ ಒಕ್ಕೂಟದ ಅಧಿಕಾರಿಗಳು, ಕಾರ್ಯದರ್ಶಿಗಳು, ಬಾಬು ರೆಡ್ಡಿ ಕ್ಯಾಂಪಿನ ಹಿರಿಯ ನಾಗರಿಕರು,ಭಟ್ಟರ ಹಂಚಿನಾಳ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ನಿರ್ದೇಶಕರು ಊರಿನ ಗುರಿಯರು ರೈತರು ಭಾಗಿಯಾಗಿದ್ದರು,
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.