ರಾಯಚೂರು ಜಿಲ್ಲೆಯ ಲಿಂಗಸುಗೂರು MNR ಬಿಲ್ಡಿಂಗ್ ರಾಯಚೂರು ಬೈಪಾಸ್ ರಸ್ತೆಯಲ್ಲಿರುವ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ.) ಆನೆ ಹೊಸೂರು ಡಾ.ಸುಧಾ ಮೂರ್ತಿ ಇನ್ಫೋ ಪದವಿ ಪೂರ್ವ ಕಾಲೇಜು ಲಿಂಗಸೂಗೂರು ವತಿಯಿಂದ ಡಾಕ್ಟರ್ ಸುಧಾ ಟ್ಯಾಲೆಂಟ್ ಅವಾರ್ಡ್ 2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ಬಾರಿಗೆ ಎಸ್ ಎಸ್ ಎಲ್ ಸಿ ಎಕ್ಸಾಮ್ ಬರೆದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಂದಣಿ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು.ಪರೀಕ್ಷೆಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ,ಶೀಲ್ಡ್ ಮತ್ತು ಧನಸಹಾಯ ನೀಡಲಾಯಿತು.ಈ ಸ್ಪರ್ಧಾ ಪರೀಕ್ಷಾ ವಿಜೇತರಿಗೆ ಮೊದಲನೇ ಬಹುಮಾನವಾಗಿ 7,000 ರೂಪಾಯಿ,ಎರಡನೇ ಬಹುಮಾನವಾಗಿ 5000 ರೂಪಾಯಿ,ಮೂರನೇ ಬಹುಮಾನ 3000 ರೂಪಾಯಿ ಹಾಗೂ 10 ವಿದ್ಯಾರ್ಥಿಗಳಿಗೆ ಸಮಾಧಾನಕರವಾದ ಬಹುಮಾನ ವಿತರಿಸಿ ನೂರಾರು ವಿದ್ಯಾರ್ಥಿಗಳು,ಪಾಲಕರ ನಡುವೆ ಸನ್ಮಾನಿಸಲಾಯಿತು.ಕಾಲೇಜಿನ ಆಡಳಿತ ಮಂಡಳಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ಪ್ರವೇಶಾತಿ 30% ದರ ಕಡಿಮೆ ಮಾಡುವುದಾಗಿ ಘೋಷಿಸಿದರು.ಟ್ಯಾಲೆಂಟ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ವಿವರವು
1.ಪ್ರಥಮ ಬಹುಮಾನ:ಸಿದ್ದಾರ್ಥ್ (ಮುರಾರ್ಜಿ ವಸತಿ ಶಾಲೆ ದೇವರಭೂಪುರ್)
2.ದ್ವಿತೀಯ ಬಹುಮಾನ:ನಾಗವೇಣಿ ವಜ್ರ ಬಂಡಿ (ಆದರ್ಶ್ ಶಾಲೆ ಸಿಂಧನೂರು)
3.ತೃತೀಯಾ ಬಹುಮಾನ:ಪೂಜಾ (ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಡವಿಭಾವಿ) ಹಾಗೂ ಹತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮದಗ್ನಿ ಟಿ ಭವಾನಿ ಶಿಕ್ಷಕರು,
ಸಂಯೋಜಕರು ಡಾ.ಸುಧಾಮೂರ್ತಿ ಪ.ಪೂ ಕಾಲೇಜು ಇವರಿಂದ.
ಪ್ರಾಸ್ತಾವಿಕ ನುಡಿ ಶ್ರೀ ರಮೇಶ್ ವೆಂಕಟಾಪುರ ಪ್ರಾಚಾರ್ಯರು ಡಾ.ಸುಧಾಮೂರ್ತಿ ಮಹಿಳಾ ಪದವಿ ಮಹಾವಿದ್ಯಾಲಯ ಲಿಂಗಸ್ಗೂರು.ಈ ಕಾರ್ಯಕ್ರಮದ ಉಪಸ್ಥಿತಿ:ಅಮರನಾಥ ವಣಿಕಿಹಾಳ ಪ್ರಾಚಾರ್ಯರು. ಡಾ.ಸುಧಾಮೂರ್ತಿ ಪದವಿ ಪೂರ್ವ ಕಾಲೇಜು.
ಸ್ವಾಗತ ಭಾಷಣವನ್ನು ಸ್ವರ್ಣಲತಾ ಉಪನ್ಯಾಸಕರು ನೆರವೇರಿಸಿದರು ಹಾಗೂ ಡಾ.ಚಂದ್ರಶೇಖರ ಶಿಕ್ಷಕರು ವಿದ್ಯಾರ್ಥಿಗಳ ಕುರಿತು ಭಾಷಣ ಮಾಡಿದರು.
ಮುಖ್ಯ ಅತಿಥಿಗಳು:ಭೀಮಪ್ಪ ಕಳಕಪ್ಪನವರ್, ನಿಲಯ ಪಾಲಕರು.
ಶಿವಣ್ಣ ಪರಂಗಿ,ಬಸವರಾಜ್ ಬಡಿಗೇರ,
ವಂದನಾರ್ಪಣೆ:ಶ್ರೀ ಅಮರೇಶ್ ಉಪ್ಪಲದಿನ್ನಿ. ಗ್ರಂಥಪಾಲಕರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪನ್ಯಾಸಕರು: ಶ್ರೀ ಭೀಮಣ್ಣ ಫೂಲಭಾವಿ,ಶ್ರೀ ಮಲ್ಲಿಕಾರ್ಜುನ್ ಹೊಸಮನಿ,ಸುರೇಶ್,ಮಾರುತಿ,ಕುಮಾರಿ ಕಸ್ತೂರಿ,ಮಾಳಿಂಗರಾಯ,ವೀರೇಶ್ ಆದೋನಿ, ಮೋನಿಕಾ,ವೆಂಕಟೇಶ್,ಬಸಲಿಂಗಪ್ಪ ಗುಡಿಮನಿ
ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.
ವರದಿ-ಬಸವರಾಜ್ ಬಡಿಗೇರ್