ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸತತ ನಾಲ್ಕು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ನೀಡುತ್ತಿರುವ ಶಾಲೆಯ ವಿದ್ಯಾರ್ಥಿಗಳಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದೇವೆ ಎಂದು ಪ್ರಾಂಶುಪಾಲ ಡಾಕ್ಟರ್ ಕೆ ಮೂರ್ತಿ ಸಾಮ್ರಾಟ್ ತಿಳಿಸಿದರು ನಗರದ ಎ ಆರ್ ಎಂ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಕುರಿತು ಮಾತನಾಡಿದರು2024ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಹರ್ಷಿತಾ ಆರ್ 600 ಕ್ಕೆ 582 ಅಂಕಗಳನ್ನು ಪಡೆದು 97% ಗಳಿಸಿದ್ದಾರೆ ಇನ್ನೂ ದ್ವಿತೀಯ ಸ್ಥಾನ ಸಂಧ್ಯಾ ಪಡೆದುಕೊಂಡು 600 ಕ್ಕೆ 577ಅಂಕ ಪಡೆದು 96% ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಒಟ್ಟು 93 ವಿದ್ಯಾರ್ಥಿಗಳು ಇದ್ದು 93 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ100% ಫಲಿತಾಂಶ ಪಡೆದರೆ ಕಲಾ ವಿಭಾಗದಲ್ಲಿ 25 ವಿದ್ಯಾರ್ಥಿಗಳಿದ್ದು ,ಅದರಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 98% ಪಡೆದಿರುತ್ತಾರೆ ಒಟ್ಟಾರೆಯಾಗಿ 40 ಅತ್ಯುನ್ನತ 64 ಪ್ರಥಮ ಶ್ರೇಣಿ ಹಾಗೂ 7 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದ ಇವರಿಗೆ ಪ್ರಾಂಶುಪಾಲರು ಹಾರೈಸಿದರು.
ವರದಿ ಗಗನ್ ಸಾಮ್ರಾಟ್ ಶಿಡ್ಲಘಟ್ಟ