ಕಲಬುರಗಿ:ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಜಿಲ್ಲೆಯ ಸರ್ವಾಂಗಿಣ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರಿಗೆ ಮತ ನೀಡಿ ಆರ್ಶೀವದಿಸಬೇಕು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಈ ಬಾರಿಯೂ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲು,ದೇಶದ ಅಭಿವೃದ್ದಿಗಾಗಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಗೆ ಮತ್ತೊಮ್ಮೆ ಮತ ನೀಡಿ ಆರ್ಶೀವದಿಸಬೇಕು.ಈ ದೇಶಕ್ಕೆ ಮೋದಿ ಅವರ ನಾಯಕತ್ವ ಅವಶ್ಯಕವಾಗಿದೆ.ಹಾಗೆ ಜಿಲ್ಲೆಗೆ ಉಮೇಶ ಜಾಧವ ಅವರ ನಾಯಕತ್ವವೂ ಅಗತ್ಯವಾಗಿದೆ ಎಂದು ಹೇಳಿದರು.
