ಭದ್ರಾವತಿ: ನಗರದ ಹೊಸಮನೆ ಬಡಾವಣೆಯ ಶ್ರೀ ಅಕ್ಕಮಹಾದೇವಿ ಶಿಕ್ಷಣ ಟ್ರಸ್ಟ್ (ರಿ.)
ಎ ವಿ ಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಲಭಿಸಿದೆ.
ಎ ವಿ ಎಸ್ ಕಾಲೇಜಿನಲ್ಲಿ ಮೂರು ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 13 ವಿದ್ಯಾರ್ಥಿಗಳು ಪ್ರಥಮ ದರ್ಜೆ ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆ ಸೇರಿದಂತೆ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಶೇಕಡ 100 ಫಲಿತಾಂಶ ಲಭಿಸಿದೆ.
ಯಶವಂತ್ ಹೆಚ್ 554 ಅಂಕಗಳೊಂದಿಗೆ ಶೇ. 92.33 ಪ್ರಥಮ,ನಿವೇದಿತಾ ಎ.ಪಿ 530 ಅಂಕಗಳು ಶೇ. 88.33, ಭೂಮಿಕ ಕೆ 523 ಅಂಕಗಳು ಶೇ. 87.16, ಅಪ್ಸರ ಉನ್ನೀಸಾ 505 ಅಂಕಗಳು ಶೇ. 84.16 ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳು ಪ್ರಾಂಶುಪಾಲರು ಉಪನ್ಯಾಸಕ ವರ್ಗದವರಿಗೆ ಹಾಗೂ ಪೋಷಕರಿಗೆ ಆಡಳಿತ ಮಂಡಳಿ ಅಭಿನಂದಿಸಿದೆ.
