ಹನೂರು:ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಅವಕಾಶ ನೀಡಿದ್ದು ಸಾಕು
ಇದೀಗ ಬದಲಾವಣೆ ಬೇಕಿದೆ ಹೀಗಾಗಿ ಸಾಮಾಜಿಕ ಕಳಕಳಿ ಹೋರಾಟದ ಹಿನ್ನಲೆ ಹೊಂದಿರುವ ಬಿ ಎಸ್ ಪಿ ಅಭ್ಯರ್ಥಿಯಾದ ನನ್ನನ್ನು ಒಮ್ಮೆ ಗೆಲ್ಲಿಸಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಬಿ. ಎಸ್.ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.
ಹನೂರು ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಯಾವುದೇ ಚಳುವಳಿ ಹೋರಾಟದ ಹಿನ್ನಲೆ ಇಲ್ಲ ದುರ್ಬಲವಾಗಿದ್ದಾರೆ.ಜನ ಪರ,ಸಮಾಜ ಪರ ಗಟ್ಟಿ ದ್ವನಿಯಾಗಿ ಬಿ.ಎಸ್.ಪಿ ಕೆಲಸ ಮಾಡುತ್ತಿದೆ ನಿರಂತರವಾಗಿ ಹೋರಾಟ ಮೂಲಕ ಪಕ್ಷ ಸಂಘಟನೆ ಮಾಡಿದ್ದೇನೆ ಹೀಗಾಗಿ ಅಭಿವೃದ್ಧಿ ಹಿತ ದೃಷ್ಟಿಯಿಂದ ಈ ಭಾರಿ ಬಿ.ಎಸ್.ಪಿ ಯನ್ನು ಬೆಂಬಲಿಸಬೇಕು ಎಂದರು.
ಕಳೆದ 10 ವರ್ಷಗಳಿಂದ ಬಿಜೆಪಿಯು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳುತ್ತಿದೆ.ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಂದೇ ಒಂದು ಯೋಜನೆ ಸಹ ಕೇಂದ್ರದಿಂದ ಬಂದಿಲ್ಲ.ಸ್ಮಾರ್ಟ್ ಸಿಟಿ ಮಾಡ್ತೇವೆ ಎಂದರು ಆಗಿಲ್ಲ ಬುಲೆಟ್ ಟ್ರೈನ್ ಬಿಡುತ್ತೇವೆ ಕೇವಲ ಮಾತು ಅಷ್ಟೇ ಅಭಿವೃದ್ಧಿ ಆಗುತ್ತಿಲ್ಲ ಎಂದರಲ್ಲದೆ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಗೆದ್ದರೂ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಗೆದ್ದಂತಹವರು ರಾಜ್ಯ ಹಾಗೂ ಜನರ ಅಭಿವೃದ್ಧಿ ಪರ ಕೇಂದ್ರದಲ್ಲಿ ಮಾತನಾಡುವುದಿಲ್ಲ ಎಂದು ಟೀಕಿಸಿದರು.
ಕರ್ನಾಟಕದಲ್ಲಿ 25 ಎಂಪಿ ಗಳನ್ನು ಗೆದ್ದರೂ ಸಹ ಪ್ರವಾಹ ಬರಗಾಲ ಬಂದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ ಇದರ ಬಗ್ಗೆ ಮಾತನಾಡಲಿಲ್ಲ,ರಾಜ್ಯಕ್ಕೆ ಬರುವಂತಹ ಆದಾಯವನ್ನು ಕಡಿಮೆ ಮಾಡಿದಾಗ ಮಾತನಾಡಿಲ್ಲ,ಮೀಸಲು ಕ್ಷೇತ್ರದಿಂದ ಗೆದ್ದಂತಹ ಏಳು ಎಂಪಿಗಳು ಅದರಲ್ಲಿ ಐದು ಎಸ್ ಸಿ ಹಾಗೂ ಎರಡು ಎಸ್ಟಿ ಸಂಸದರು ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿಲ್ಲಿಸಿದಾಗ ಧ್ವನಿ ಎತ್ತಲಿಲ್ಲ.ಸಂವಿಧಾನ ಬದಲಾವಣೆ ಮಾಡುತ್ತೇವೆ,ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿ ಅವರು ಹೇಳಿದಾಗ ಮೀಸಲು ಕ್ಷೇತ್ರದಿಂದ ಗೆದ್ದಂತಹ ಬಿಜೆಪಿ ಪಕ್ಷದ ಎಂಪಿಗಳು ಯಾರೊಬ್ಬರೂ ಸಹ ವಿರೋಧಿಸಲಿಲ್ಲ ಇವರು ಬಾಯಿ ಕಟ್ಟಿದ ಎತ್ತುಗಳ ತರ ಕೂತಿರುತ್ತಾರೆ ಎಂದು ವ್ಯಂಗವಾಡಿದರು.
ಬಿಜೆಪಿ ಸಂವಿಧಾನ ವಿರೋಧಿ ಹೀಗಾಗಿ
ಕಾಂಗ್ರೆಸ್ ಪಕ್ಷ ಸಂವಿಧಾನ ಉಳಿಸುತ್ತೇವೆ ನಮಗೆ ವೋಟು ಹಾಕಿ ಎನ್ನುತ್ತಿದ್ದಾರೆ.ಇಲ್ಲಿನ ಅಭ್ಯರ್ಥಿಗಳಿಗೆ ಸಂವಿಧಾನ ಅದರಲ್ಲಿನ ಆರ್ಟಿಕಲ್,ಮೂಲಭೂತ ಹಕ್ಕು, ಕರ್ತವ್ಯಗಳು ತತ್ವ ಯಾವುವು ಗೊತ್ತಿಲ್ಲ ಬೇಕಿದ್ದರೆ ಚರ್ಚೆಗೆ ಬರಲಿ ನೋಡೋಣ ಎಂದು ಸವಾಲ್ ಎಸೆದರು.
ಕಳೆದ 25 ವರ್ಷಗಳಿಂದ ರೈತರ,ಕಾರ್ಮಿಕರ,ರಸ್ತೆ ವ್ಯಾಪಾರಿಗಳ,ಗುತ್ತಿಗೆ ನೌಕರ,ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಬಗ್ಗೆ ಹೋರಾಟ ಮಾಡಲಾಗಿದೆ.ಸ್ಕಾಲರ್ಶಿಪ್,ಕಂದಾಯ ಇಲಾಖೆ ನೌಕರರು,ಪೌರಕಾರ್ಮಿಕರ ಖಾಯಂಗಾಗಿ ದ್ವನಿ ಎತ್ತಿದ್ದೇನೆ.ಕೋವಿಡ್ ಸಂದರ್ಭದಲ್ಲಿ ಸಹಾಯ ಮಾಡಿದ್ದೇನೆ ಈ ರೀತಿಯಲ್ಲಿ ಸಾಮಾಜಿಕ ಕಳಕಳಿ ಇರುವ ಹೋರಾಟ ಮಾಡಿಕೊಂಡು ಬಂದಿರುವ ನನ್ನನ್ನು ಗೆಲ್ಲಿಸಿ ಬಿ.ಎಸ್.ಪಿ ಯನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹ ರಾ ಮಹೇಶ್,ಚಾಮರಾಜನಗರ ಜಿಲ್ಲಾ ಅಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಹನುಮಂತು,ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು,ಹನೂರು ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಧ್ಯಕ್ಷ ಸೀಗ ನಾಯಕ,ಪಾಳ್ಯ ಮಹೇಶ್,ಮಲ್ಲೇಶ್,ಅಜಿತ್ ಮೌರ್ಯ ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ವರದಿ:ಉಸ್ಮಾನ್ ಖಾನ್