ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ಒಂದು ವಾರದಿಂದ ತುರ್ತು ವಾಹನದ ಎರಡು ಚಕ್ರಗಳು ಪಂಚರ್ ಆಗಿ ನಿಂತಿದೆ ಸಾರ್ವಜನಿಕರಿಗೆ ಇದರಿಂದ ಯಾವುದೇ ತರಹದ ಉಪಯೋಗ ಆಗುತ್ತಿಲ್ಲ ರಾಮಾಪುರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕ ಹಾಗೂ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ತುರ್ತು ಪರಿಸ್ಥಿತಿಯಲ್ಲಿ ಏನಾದರೂ ಅಪಘಾತಗಳಾಗಿ ಗಾಯಗಳಾದಾಗ ಅಥವಾ ತುರ್ತು ಪರಿಸ್ಥಿತಿ ಉಂಟಾದಾಗ ಆಂಬುಲೆನ್ಸ್ ಅವಶ್ಯಕತೆ ಇದೆ ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ತರಹ ಚಕ್ರಗಳೆಲ್ಲಾ ಪಂಚರ್ ಆಗಿ ಆಂಬುಲೆನ್ಸ್ ನಿಂತಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ.ಆದ್ದರಿಂದ ಮೇಲಾಧಿಕಾರಿಗಳು ಆದಷ್ಟು ಬೇಗ ಎಚ್ಚೆತ್ತುಕೊಂಡು ಆಂಬುಲೆನ್ಸ್ ಅನ್ನು ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕೆಂದು ರಾಮಾಪುರ ಗ್ರಾಮದ ಜನತೆ ಹಾಗೂ ದಲಿತ ಸಂಘರ್ಷ ಸಮಿತಿಯ ಹನೂರು ಘಟಕ ಸಂಚಾಲಕರಾದ ಮಾರಿಯಪ್ಪ ಅವರು ಇದಕ್ಕೆ ಸಂಬಂಧ ಪಟ್ಟವರು ಆದಷ್ಟು ಬೇಗ ವಾಹನ ಸರಿಪಡಿಸಬೇಕು. ಕೇಳಿಕೊಂಡಿದ್ದಾರೆ.
ವರದಿ:ಉಸ್ಮಾನ್ ಖಾನ್