ಸೊರಬ:ತಾಲ್ಲೂಕಿನ ಕ್ಯಾಸನೂರು ಶ್ರೀ ಗುರುಬಸವ ದೇವರ ಸಂಸ್ಥಾನಮಠದ ವತಿಯಿಂದ ನಿಸರಾಣಿ ಸರ್ಕಲ್‌ನಲ್ಲಿ ನಿರ್ಮಾಣಗೊಂಡ ‘ದ್ವಾರ ಬಾಗಿಲು ಉದ್ಘಾಟನೆ’ ಶ್ರೀ ಶೈಲ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ,ಸಾರಲಿಂಗೇಶ್ವರ ಕರ್ತೃಗದ್ದುಗೆ ಪ್ರವೇಶೋತ್ಸವ ಮತ್ತು ಸದ್ಭಕ್ತರಿಗೆ ಗುರು ರಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತೊಗರ್ಸಿ ಮಳೆಹಿರೇಮಠ-ಕ್ಯಾಸನೂರು ಹಿರೇಮಠದ ಶ್ರೀ ಗುರುಬಸವ ಪಂಡಿತಾರಾದ್ಯ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಭಕ್ತರಿಗೆ ಆಹ್ವಾನ ಪತ್ರಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏ.13 ರ ಶನಿವಾರ ಸಂಜೆ 5 ಗಂಟೆಗೆ ದ್ವಾರಬಾಗಿಲು ಉದ್ಘಾಟನೆ,ನಂತರ ನಿಸರಾಣಿ ಸರ್ಕಲ್ ನಿಂದ ಶ್ರೀಮಠದವರೆಗೆ ಶ್ರೀ ಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ,ಹಿರಿಯ ಶ್ರೀಗಳ ಅಮೃತ ಮಹೋತ್ಸವ, ಗುರುವಂದನಾ ಕಾರ್ಯಕ್ರಮ,ಭಕ್ತರ ಷಷ್ಠಿಪೂರ್ತಿ ಭೀಮರಥ ಸಹಸ್ರ ಚಂದ್ರ ದರ್ಶನ,ಜನ್ಮ ಶತಮಾನೋತ್ಸವ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಂಜೆ ನಡೆಯುವ ಧಾರ್ಮಿಕ ಸಭೆಯನ್ನು ಸಚಿವ ಮಧುಬಂಗಾರಪ್ಪ ನಡೆಸಲಿದ್ದು ಶ್ರೀಶೈಲ ಮಹಾಪೀಠದ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸಲಿದ್ದು,ತೊಗರ್ಸಿ ಮಳೆಹಿರೇಮಠ ಮಹಾಂತ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಈ ಸಮಾರಂಭದಲ್ಲಿ ಗೊಗ್ಗೆಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ,ನಂದಿಪುರ ಹಿರೇಮಠದ ನಂದೀಶ್ವರ ಶಿವಚಾರ್ಯರು,ಕೂಡಲ ಗುರುನಂಜೇಶ್ವರದ ಗುರು ಮಹೇಶ್ವರ,ಅಕ್ಕಿಆಲೂರು ಶಿವಬಸವ ಅಂಕುಶದೊಡ್ಡಿ ನಾಮದೇವ ಶಿವಾಚಾರ್ಯರು,ಹೆರೂರು ನಂಜುಂಡ ಪಂಡಿತಾರಾದ್ಯ ಸ್ವಾಮಿಗಳು ಭಾಗವಹಿಸಿಲಿದ್ದಾರೆ.
ಏ.14 ಭಾನುವಾರ ಬೆಳಿಗ್ಗೆ 7 ಕ್ಕೆ ಜದ್ಗುರುಗಳ ಸಾನಿಧ್ಯದಲ್ಲಿ ನೂತನ ಕರ್ತೃ ಗದ್ದುಗೆಯಲ್ಲಿ ಇಷ್ಟಲಿಂಗ ಮಹಾಪೂಜೆ,11 ಕ್ಕೆ ಧಾರ್ಮಿಕ ಸಮಾರಂಭ,ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ಗುರುಗಳಿಂದ ಗುರುರಕ್ಷೆ ನೀಡಲಾಗುವುದು.ಈ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಉಚಿತ ಔಷಧಿಗಳ ವಿರಣೆ,ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ 7 ಕ್ಕೆ ಶ್ರೀಶೈಲ ಜದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಂತರ ಧರ್ಮ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಲಿದ್ದು,ಸಂಸದ ಬಿ.ವೈ ರಾಘವೇಂದ್ರ,ಶಾಸಕ ಬಿ.ವೈ ವಿಜೇಂದ್ರ,ಕೆ.ಎಸ್ ಗುರುಮೂರ್ತಿ,ಕೆ.ಪಿ ರುದ್ರಯ್ಯ,ಉಪವಿಭಾಗಾಧಿಕಾರಿ ಯತೀಶ್ ಸೇರಿದಂತೆ ಶಿರಾಳಕೊಪ್ಪ ವೀರಕ್ತಮಠದ ಸಿದ್ದೇಶ್ವರ ಸ್ವಾಮಿ,ತೊಗರ್ಸಿ ಪಂಚವಣ್ಣಿಗೆ ಮಠ ಚನ್ನವೀರ ದೇಶಿ ಕೇಂದ್ರ ಸ್ವಾಮಿ,ಡಾ.ಮಹಾಂತಸ್ವಾಮಿ, ಮುರುಘ ರಾಜೇಂಧ್ರಸ್ವಾಮಿ ಹಿರೇಮಾಗಡಿ, ಹೋತನಹಳ್ಳಿ ಶಿಂದಗಿ ಮಠ,ಶಂಭುಲಿಂಗ ಶಿವಾಚಾರ್ಯ ಸ್ವಾಮಿ,ಸದಾಶಿವಸ್ವಾಮಿ ಮೂಡಿ, ಶಾಂತಪುರ ಶಿವಾನಂದ ಶಿವಾಚಾರ್ಯ ಸ್ವಾಮಿ ಹಾಗೂ ಗುಡುಗಿನನಕೊಪ್ಪ ಲಿಂಗಪ್ಪಶರಣ ಸ್ವಾಮಿ ಭಾಗವಹಿಸಲಿದ್ದಾರೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ.ಈರೇಶಗೌಡ,ಉದ್ಯಮಿ ಹೇಮರಾಜ ಪಾಟೀಲ್ ಮತ್ತಿತರರಿದ್ದರು.
ವರದಿ-ಸಂದೀಪ ಯು.ಎಲ್.ಸೊರಬ