ಬಾಗಲಕೋಟೆ ಜಿಲ್ಲೆಯ ರಬಕವಿ ಬನಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವಳ ಹತ್ಯೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಭಾರಿ ಪ್ರತಿಭಟನೆ ನಡೆಸಿದರು.
ನಗರದ ಸೋಮವಾರಪೇಟೆ ಭಗತ್ ಸಿಂಗ್ ಸರ್ಕಲದಿಂದ,ರ್ಯಾಲಿ ಮುಖಾಂತರ,ಮಹಾತ್ಮ ಗಾಂಧಿ ಸರ್ಕಲ್,ಮಂಗಳವಾರ ಪೇಟ್,ನಗರದ ಬಸ್ ನಿಲ್ದಾಣದ ಹತ್ತಿರ ಬಂದು ಮಾನವ ಸರ್ಪಳಿ ಹಾಕಿ ಭಾರಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹಾಗೂ ಬಿಜೆಪಿಯ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ರಬಕವಿ ಬನಹಟ್ಟಿ ತಾಲೂಕ ತಹಸಿಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯ ಸಂದರ್ಭದಲ್ಲಿ ಶ್ರೀ ಗುರು ಪ್ರಸಾದ ಸ್ವಾಮಿಗಳು ಮೈಗುರ ಮಾತನಾಡಿ ಇಂತಹ ಭೀಕರ ಹತ್ಯವನ್ನು ಖಂಡಿಸಿ ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಪೃವೃತ್ತರಾಗಬೇಕು.ಸರ್ಕಾರವು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲವಾದರೆ ಕಾನೂನಿನ ಭಯ ಇರುವುದಿಲ್ಲ ಎಂದು ಸರ್ಕಾರದ ವಿರುದ್ಧ ಹೇಳಿದರು.
ಈ ಪ್ರತಿಭಟನೆಯಲ್ಲಿ ರಬಕವಿ ಬನಹಟ್ಟಿ,ತೇರದಾಳ,ಮಹಾಲಿಂಗಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಮಾಜ ಹಿರಿಯರು ತಾಯಂದಿರು ಮಠಾಧೀಶರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ,
ಹಿಂದೂ ಮುಖಂಡ ಶಿವಾನಂದ ಗಾಯಕವಾಡ, ಮಂಜುನಾಥ್ ಜಮಖಂಡಿ ಹಿರೇಮಠ,ಪರಮಾನಂದ ಚಿಂಚಲಿ,ಯಮನಪ್ಪ ಕೊರಿ,ಧರ್ಮ ಸಾಗರ ತುಂಗಳ, ಮಲ್ಲಿಕಾರ್ಜುನ ಹೊಸಮನಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಉಪಸ್ಥಿತರಿದ್ದರು.
ವರದಿ:ಮಹಿಬೂಬ ಎಂ ಬಾರಿಗಡ್ಡಿ