ಮಹಾರಾಷ್ಟ್ರ/ಜತ್ತ:ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿ,ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಪ್ರವೇಶ ಪಡೆದು ಸರಕಾರಿ ಶಾಲೆಗಳ ಉನ್ನತಿಗಾಗಿ ಜನರು ಬೆಂಬಲವಾಗಿ ನಿಲ್ಲಬೇಕಿದೆ ಎಂದು ಸಂಖ ಕೇಂದ್ರದ ಪ್ರಮುಖರಾದ ಧರೆಪ್ಪಾ ಕಟ್ಟಿಮನಿಯವರು ಹೇಳಿದರು.ಅವರು ಮಹಾರಾಷ್ಟ್ರ ರಾಜ್ಯದಲ್ಲಿಯ ಜತ್ತ ತಾಲ್ಲೂಕಿನ ಜಿಲ್ಲಾ ಪರಿಷತ್ತು ಸರಕಾರಿ ಕನ್ನಡ ಸಿಳೀನವಸ್ತಿ,ಸಂಖ ಶಾಲೆಯ ಮೊದಲನೆಯ ತರಗತಿ ಮಕ್ಕಳ ಸ್ವಾಗತೋತ್ಸವ ಹಾಗೂ ನಾಲ್ಕನೆಯ ತರಗತಿ ಮಕ್ಕಳ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಮಾತನಾಡಿ,ಸದ್ಯದ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳನ್ನು ಸಮೃದ್ಧಗೊಳಿಸುವದು ಮತ್ತು ಅವುಗಳನ್ನು ಬೆಳೆಸುವುದು ಸ್ಥಳಿಯ ಜನರ ಪಾತ್ರ ಪ್ರಾಮುಖ್ಯವಾಗಿದೆ.ತಮ್ಮ ಸಹಭಾಗಿತ್ವದಲ್ಲಿ ಈ ಶಾಲೆಯ ಉನ್ನತಿ ಮಾಡಬೇಕು.ಇವತ್ತು ಈ ಸರಕಾರಿ ಕನ್ನಡ ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳನ್ನು ನಾವು ಸ್ವಾಗತಿಸುತ್ತೇವೆ.ಸಿಳೀನವಸ್ತಿ ಶಾಲೆಯು ಸದ್ಯ ಒಳ್ಳೆಯ ಗುಣಮಟ್ಟ ಶಿಕ್ಷಣ ನೀಡುವ ಸರಕಾರಿ ಶಾಲೆಯಾಗಿದೆ. ಮೊದಲನೆಯ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ೨೦೨೧-೨೨ನೇ ವರ್ಷದಲ್ಲಿ ಈ ಶಾಲೆಯಲ್ಲಿ ಕೇವಲ ೨೦ ಮಕ್ಕಳು ಕಲಿಯುತ್ತಿದ್ದರು. ಸದ್ಯ ೬೫ಕ್ಕಿಂತ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದದ್ದು ಅಭಿಮಾನ ವಿಷಯ.ಒಂದು ವಸ್ತಿ ಶಾಲೆ ಈ ರೀತಿ ಬದಲಾಣೆ ಆಗುತ್ತಿರುವದು ಶ್ಲಾಘನೀಯ ಕಲಿಕೆಯಲ್ಲಿ ಹೊಸದನ್ನು ಪ್ರಯೋಗ ಮಾಡುತ್ತಿರುವ ಈ ಶಾಲೆ ಸದ್ಯ ಮಾದರಿ ಶಾಲೆಯಾಗುತ್ತಿದೆ ಎಂದು ಹೇಳಿದರು.
ಶಾಲೆ ವ್ಯವಸ್ಥಾಪನೆ ಸಮಿತಿಯ ಅಧ್ಯಕ್ಷ ರಮೇಶ ಕನಮಡಿ ಮಾತನಾಡಿ,ನಮ್ಮ ಸರಕಾರಿ ಶಾಲೆಗಳ ಬಗ್ಗೆ ನಮಗೆ ಗೌರವ ಮತ್ತು ಹೆಮ್ಮೆ ಇರಬೇಕು.ನಮ್ಮ ಸಿಳೀನವಸ್ತಿ ಶಾಲೆಯಲ್ಲಿ ಪ್ರತಿವರ್ಷವು ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿಗೆ ಆಗುತ್ತಿದೆ.ಇದು ಸರಕಾರಿ ಶಾಲೆಯ ಗುಣಮಟ್ಟವನ್ನು ತೋರಿಸಿಕೊಡುತ್ತದೆ.ಸರಕಾರಿ ಶಾಲೆಗಳು ಎಲ್ಲಾ ಸಮುದಾಯಗಳಿಗೆ ಸಮಾನ ಜ್ಞಾನ ನೀಡುವ ಜೀವಂತ ದೇವರ ಮಂದಿರಗಳು.ಅದಕ್ಕೆ ನಾವು ನಮ್ಮ ಮಕ್ಕಳನ್ನು ನಮ್ಮ ಸ್ಥಳೀಯ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು ಹಾಗೂ ಶಾಲೆಗಳ ಉನ್ನತಿಗಾಗಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಇದಕ್ಕೂ ಮುಂಚೆ ಮೊದಲನೆಯ ತರಗತಿಯ ಮಕ್ಕಳನ್ನು ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡುತ್ತಾ ಬರಮಾಡಿಕೊಳ್ಳಲಾಯಿತು.ಈ ಸಂಧರ್ಭದಲ್ಲಿ ಮೊದನೆಯ ತರಗತಿಯ ಮಕ್ಕಳಿಗಾಗಿ ವಿವಿಧ ಕಿರೀಟಗಳು,ಘೋಷಪಟ್ಟಿಗಳು,ಕೈಯಲ್ಲಿಯ ಬಣ್ಣ ಬಣ್ಣದ ಬಲೂನಗಳು ಆಕರ್ಷಣೆಯ ಕೇಂದ್ರವಾಗಿದ್ದವು.ಸಂಪೂರ್ಣ ಶಾಲೆ ಹಬ್ಬದ ವಾತಾವರಣದಂತೆ ಇತ್ತು.ಈ ನಿಮಿತ್ತ ಮಕ್ಕಳ ಮನರಂಜನೆಗಾಗಿ ವಿವಿಧ ಅಂಗಡಿಗಳನ್ನು ಹಾಕಲಾಗಿತ್ತು.ಜೊತೆಗೆ ವಿವಿಧ ಕಲಿಕಾ ಚಟುವಟಿಗಳನ್ನು ಹಮ್ಮಿಕೊಳ್ಳಲಾಗಿತ್ತು.ಇವೆಲ್ಲಾ ಮಕ್ಕಳಿಗೆ ಮತ್ತು ಪಾಲಕರಿಗೆ ತುಂಬಾ ಸಂತೋಷ ನೀಡಿದವು ಮಕ್ಕಳ ಭಾಷಣ ಜರುಗಿದವು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಪ್ಪಾಸಾಹೇಬ ಅಂಕಲಗಿ ವಹಿಸಿದ್ದರು.ನಿಂಗಪ್ಪ ಸಿಳೀನ ಹಾಗೂ ಚಾಂದ್ ಮಕಾನದಾರ ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಪ್ರತಿಮೆ ಪೂಜೆ ಮಾಡಿದರು.ಶಿವಾನಂದ ಕನಮಡಿಯವರು ಪ್ರವೇಶ ಪಡೆಯುವ ಮಕ್ಕಳಿಗೆ ಪುಷ್ಟ ಮತ್ತು ಸಿಹಿ ನೀಡಿ ಬರಮಾಡಿಕೊಂಡರು. ವೇದಿಕೆಯ ಮೇಲೆ ಲಕ್ಷ್ಮಣ ಕನಮಡಿ,ಗುರಪ್ಪಾ ಕನಮಡಿ,ದೇವೇಂದ್ರ ಅಂಕಲಗಿ,ಚನ್ನಪ್ಪ ಕನಮಡಿ, ಸಿದರಾಯ ತೇಲಿ,ಸುರೇಶ ಚೌಗುಲೆ ಇನ್ನಿತರರು ಉಪಸ್ಥಿತರಿದ್ದರು.
ಸಮಾರಂಭ ಯಶಸ್ವಿಗಾಗಿ ಶ್ರೀಶೈಲ್ ಅಂಕಲಗಿ,ಸಂಗಪ್ಪಾ ಸಿಳೀನ್,ಸದ್ಧಾಮಹುಸೇನ ಶೇಖ, ಮಲ್ಲಿಕಾರ್ಜುನ ಕನಮಡಿ,ಬಸವರಾಜ ಕೊಲೂರ,ಮಹೇಶ್ ಬಿರಾದಾರ,ಶಾಲೆಯ ಶಿಕ್ಷಕಕರು, ಅಂಗನಾಡಿ ಸೇವಕಿಯರು,ಅಡುಗೆ ಸಹಾಯಕರು ಹಾಗೂ ಇನ್ನಿತರರು ಶ್ರಮಿಸಿದರು.ಗುರುಬಸು ಬಿರಾದಾರ ನಿರೂಪಿಸಿದರು,ಮಹಾಂತೇಶ್ ಸಿಳೀನ್ ಸ್ವಾಗತಿಸಿದರು ಹಾಗೂ ಅನ್ನಪೂರ್ಣಾ ಮಾಳಿಯವರು ವಂದಿಸಿದರು.
ನಮ್ಮ ಶಾಲೆ ಸರಕಾರಿ ಕನ್ನಡ ಮಾಧ್ಯಮದ ಶಾಲೆಯಾಗಿದ್ದು,ಇಲ್ಲಿ ನಾವು ಕನ್ನಡದೊಂದಿಗೆ ಆಂಗ್ಲ ಮತ್ತು ಮರಾಠಿ ಭಾಷೆಯ ಜ್ಞಾನವನ್ನು ಕೊಡುತ್ತೇವೆ. ಆಧುನಿಕ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಬೋಧನೆ ಮಾಡುತ್ತೇವೆ.ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಒತ್ತು ನೀಡುತ್ತೇವೆ.ಪ್ರತಿ ಮಗುವಿಗೆ ಅವಶ್ಯಕ ಕಲಿಕೆ ನೀಡುತ್ತೇವೆ.ಆಂಗ್ಲ ಮಾಧ್ಯಮದ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ನಮ್ಮಲ್ಲಿ ನೀಡುತ್ತೇವೆ.ಅದಕ್ಕೆ ಪಾಲಕರು ತಮ್ಮ ಮಕ್ಕಳನ್ನು ನಮ್ಮ ಜಿಲ್ಲಾ ಪರಿಷತ್ತು ಸರಕಾರಿ ಕನ್ನಡ ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳಲು ಈ ಮೂಲಕ ವಿನಂತಿಸುತ್ತೇವೆ ಎಂದು ಶ್ರೀ ಮಲಿಕಜಾನ ಶೇಖ,ಮುಖ್ಯೋಪಾದ್ಯಾಯರು, ಸರಕಾರಿ ಕನ್ನಡ ಶಾಲೆ,ಸಿಳೀನವಸ್ತಿ ಸಂಖ ಇವರು ತಿಳಿಸಿದರು.