ಯಾದಗಿರಿ:ಮಲೇರಿಯಾ ಒಂದು ಸಾಂಕ್ರಾಮಿಕ ರೋಗ ಇದು ಅನಾಫಿಲಿಸ್ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು, ಮಲೇರಿಯಾ ನಿರ್ಮೂಲನಾ ಗುರಿ 2030ಕ್ಕೆ ಇದ್ದು, ಇದರ ನಿಟ್ಟಿನಲ್ಲಿ ಅತಿಕಾಳಜಿಯಿಂದ ಕಾರ್ಯನಿರ್ವಹಿಸಲು ಎಲ್ಲಾ ಸಿಬ್ಬಂದಿಗಳಿಗೆ ಸೂಚಿಸುತ್ತಾ ಇದರ ನಿಯಂತ್ರಣ ತಮ್ಮೆಲ್ಲರ ಕೈಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪ್ರಭುಲಿಂಗ ಮಾನಕರ್ ಅವರು ತಿಳಿಸಿದರು.
ವಿಶ್ವ ಮಲೇರಿಯಾ ದಿನಾಚರಣೆಯನ್ನು 2024ರ ಏಪ್ರಿಲ್ 29 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ ವಿಶ್ವ ಮಲೇರಿಯಾ ದಿನಾಚಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯ–“ಹೆಚ್ಚು ಸಮಾನತೆಯಿಂದ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸೋಣ” ಎಂಬ ಮಾಹಿತಿಯನ್ನು ತಿಳಿಸಿದರು.
ಯಾದಗಿರಿ ಜಿಲ್ಲೆಯಲ್ಲಿನ ಮಲೇರಿಯಾ ಪ್ರಕರಣಗಳ ಕಳೆದ 5 ವರ್ಷಗಳ ವಿವರ:
2020ರಲ್ಲಿ 03 ಮಲೇರಿಯ ಪ್ರಕರಣಗಳು. 2021ರಲ್ಲಿ 12 ಮಲೇರಿಯ ಪ್ರಕರಣಗಳು. 2022ರಲ್ಲಿ 04 ಮಲೇರಿಯ ಪ್ರಕರಣಗಳು. 2023ರಲ್ಲಿ 07 ಮಲೇರಿಯ ಪ್ರಕರಣಗಳು. 2024ರಲ್ಲಿ 01 ಮಲೇರಿಯ ಪ್ರಕರಣಗಳಾಗಿವೆ ಎಂದರು.
ಜಿಲ್ಲಾ ಡಿ.ವಿ.ಬಿ.ಡಿ.ಸಿ.ಓ ಡಾ.ಎಮ್.ಎ ಸಾಜೀದ ಅವರು ಮಾತನಾಡಿ, ಯಾವುದೇ ಜ್ವರವಿರಲಿ ರಕ್ತ ಲೇಪನ ಪರಿಕ್ಷೆ ಮಾಡುವುದರಿಂದ ಮಲೇರಿಯಾ ಪತ್ತೆ ಹಚ್ಚುವಿಕೆಯ ಬಗ್ಗೆ ಮಾಹಿತಿ ನೀಡಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿಸಿದರು, ನಂತರ ಮಲೇರಿಯಾ ಲಕ್ಷಣಗಳಾದ ಚಳಿಯ ಹಂತ, ಬಿಸಿಯ, ಜ್ವರದ ಹಂತ ಹಾಗೂ ಬೆವರುವಿಕೆಯ ಹಂತ ಮತ್ತು ಚಳಿ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಸ್ಥಳಿಯ ಮಲೇರಿಯಾ ಪ್ರಕರಣಗಳು ಇಳಿಮುಖವಾಗುತ್ತಾ ಬಂದಿದ್ದು, ಕ್ಷೇತ್ರ ಮಟ್ಟದಲ್ಲಿ ನಮ್ಮ ಸಿಬ್ಬಂದಿಯವರು ಗುಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತು ಮುಜಾಗೃತ ಕ್ರಮಗಳು ಹಾಗೂ ಮಲೇರಿಯಾ ಪತ್ತೆ ಹಚ್ಚುವ ವಿಧಾನವನ್ನು ವಿಸ್ತಾರವಾಗಿ ಸಭೆಯಲ್ಲಿ ಮಾಹಿತಿ ನೀಡಿದರು ಒಟ್ಟಾರೆಯಾಗಿ ನಾವುಗಳು ಮಲೇರಿಯಾ ನಿರ್ಮೂಲನಾ ಗುರಿಯ ಹಂತಕ್ಕೆ ಸಾಗುತ್ತಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಲ್ಲಪ್ಪ.ಕೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಸಂಜಯಕುಮಾರ ರಾಯಚೂರಕರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಕಾರಿ ಡಾ.ಜ್ಯೋತಿ ಕಟ್ಟಿಮನಿ, ಯಾದಗಿರಿ ತಾಲೂಕ ಆರೋಗ್ಯ ಅಧಿಕಾರಿ ಡಾ.ಹನುಮಂತ ರಡ್ಡಿ, ನಗರ ಪ್ರ.ಆ.ಕೇಂದ್ರದ ವ್ಶೆದ್ಯಾಧಿಕಾರಿ ಡಾ.ವಿನೂತಾ, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ತುಳಸಿರಾಮ್, ಈ ರೋಗವನ್ನು ತಡೆಗಟ್ಟಲು ಮುಂಜಾಗ್ರತ ಕ್ರಮಗಳಾದ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೊಡಿಕೊಳ್ಳಲು ಹಾಗೂ ಸೊಳ್ಳೆಗಳು ಕಚ್ಚವಿಕೆಯಿಂದ ಪಾರಾಗುವ ಕ್ರಮಗಳ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿ ವಂದರ್ನಾಪಣೆ ಮಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ