ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದ ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಜಿಲ್ಲಾಡಳಿತ ಭವನದಲ್ಲಿ ಬೇಸಿಗೆಯ ಸುಡು ಬಿಸಿಲಿನ ದಿನಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯಕರವಾದ ಪಾನೀಯ ಸೇವನೆಗಳ ಬಗ್ಗೆ ಜಾಗೃತಿ ಮೂಡಿಸುವ ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಚಾಲನೆ ನೀಡಿದರು.
ಆಯುಷ್ ಇಲಾಖೆಯಿಂದ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ) ಪರಿಚಯ
ಹುಣಸೆ ಹಣ್ಣು( ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ರಾತ್ರಿ ಇಡೀ ನೆನಸಿಡಬೇಕು),ಬೆಲ್ಲದ ಪುಡಿ, ಜೀರಿಗೆ ಪುಡಿ,ಕಾಳು ಮೆಣಸಿನ ಪುಡಿ,ಸೈಂದವ ಲವಣದಿಂದ ಚಿಂಚಾ ಪಾನಕ ತಯಾರಿಸಬಹುದು.ಈ ಪಾನಕದಿಂದ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಮಲಬದ್ದತೆ ನಿವಾರಿಸಿ,ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ ವಂದನಾ ಜೆ ಗಾಳಿ,ಡಾ ಪ್ರಕಾಶ್ ಹೆಚ್ ರಾಜಾಪುರ, ಡಾ ಪ್ರಮೋದ ಕುಲ್ಕರ್ಣಿ,ಡಾ ರಾಜೇಶ್ವರಿ ಗೋನಾಳಮಠ, ಡಾ ಸುನಂದಾ ಕುದರಿ,ಡಾ ರಮೇಶ್ ಸಜ್ಜನ್, ರವಿ ಕುಮಾರ ಪಾಟೀಲ್,ಡಾ ಎಂ ಬಿ ಪಾಟೀಲ್, ಡಾ ಮೀರಾ ಜೋಷಿ, ಸಂಗಮೇಶ್ ಕೆಂಭಾವಿ, ಡಾ ಪ್ರಮೀಳಾ ದೇವಿ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ