ಯಾದಗಿರಿ: ಕರ್ನಾಟಕ ರಾಜ್ಯದಾದ್ಯಂತ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮೂರು ತಿಂಗಳಿಂದ ವೇತನ ನೀಡುತ್ತಿಲ್ಲವೆಂದು ಇಂದಿನಿಂದ ಮುಷ್ಕರಕ್ಕೆ ಸಜ್ಜಾಗಿದ್ದಾರೆ.ಮೇ 6 ಸೋಮವಾರ ರಾತ್ರಿ 8 ಗಂಟೆಯಿಂದ ರಾಜ್ಯದಾದ್ಯಂತ ಆಂಬುಲೆನ್ಸ್ ಸೇವೆ ರದ್ದಾಗಲಿದೆ ಎಂದು ತಿಳಿದ ಬಂದಿದೆ.
ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ 108 ಸೇವೆ ಸಿಬ್ಬಂದಿ ತಿರುಗು ಬಿದ್ದಿದ್ದಾರೆ.108 ಸಿಬ್ಬಂದಿಗಳು ಮೂರು ತಿಂಗಳಿಂದ ವೇತನ ಇಲ್ಲದೆ ಜೀವನ ನಡೆಸಲು ತುಂಬಾನೇ ತೊಂದರೆ ಆಗುತ್ತದೆ, ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ.ಈ ಎಲ್ಲಾ ಕಾರಣಗಳಿಗೆ ಸೋಮವಾರ ರಾತ್ರಿಯಿಂದ ಆಂಬುಲೆನ್ಸ್ ಸೇವೆ ಓಡಾಟವನ್ನು ರದ್ದುಗೊಳಿಸಿ ಮುಷ್ಕರ ಮಾಡುವುದಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳಿಂದ ವೇತನ ಕೊಡುವುದು ಬಾಕಿಯಿದೆ. ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್,ಜನವರಿ ತಿಂಗಳ ವೇತನದಲ್ಲಿ 30 ಸಾವಿರ ರೂಪಾಯಿ ಕಡಿತ ಮಾಡಿ,ಕೇವಲ 13 ಸಾವಿರ ರೂಪಾಯಿ ವೇತನ ನೀಡುತ್ತಿದ್ದಾರೆ. ಹೀಗಾಗಿ ನಾವುಗಳು ಸೋಮವಾರ
ಸಂಜೆ ವೇಳೆಗೆ ವೇತನ ಪಾವತಿ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು.ಒಂದು ವೇಳೆ ವೇತನ ಪಾವತಿ ಮಾಡದಿದ್ದರೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಸಿಬ್ಬಂದಿಗಳ ಸಂಘ ಎಚ್ಚರಿಕೆ ನೀಡಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.