ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪೂರ ವಿರಚಿತ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ ೨೧ ಜೋಡಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ಕುಕನೂರಿನ ಅನ್ನದಾನೇಶ್ವರ ಮಠದ ಡಾ.ಮಹಾದೇವ ಸ್ವಾಮೀಜಿ ಅವರು ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮಿಜಿ,ಕೆಪಿಎಸ್ಸಿ ಸದಸ್ಯ ಎಚ್.ಡಿ.ಪಾಟೀಲ್, ವಿರುಪಾಕ್ಷಯ್ಯ ಗುರುವಿನ,ಚಂದ್ರಮ್ಮ ಧರ್ಮರಮಠ,ರುದ್ರಮುನಿ ಸ್ವಾಮಿ,ಮಹಾದೇವಯ್ಯ ಗುರುವಿನ,ಹುಚ್ವಿರಯ್ಯ ಭದ್ರಾಪೂರ,ರಾಜಣ್ಣ ರಡ್ಡೇರ, ಮಲ್ಲಪ್ಪ ಗುಡಿಹಿಂದಲ್,ಶರಣಪ್ಪ ಹಾದಿಮನಿ, ಹಂಚಾಳಪ್ಪ ಕಲ್ಲಗೋಡಿ,ಪರಸಪ್ಪ ಹೊಸಮನಿ,ದುರಗೇಶ ಹುಲಿಗೇಜ್ಜಿ, ಬಸವರಾಜ ಭಾವಿಕಟ್ಟಿ, ಮಹೇಶ ದೊಡ್ಡಮನಿ, ಯಲ್ಲಪ್ಪ ದೇವರಳ್ಳಿ,ಚೆನ್ನಪ್ಪ ತಳವಾರ,ಶ್ರೀ ಧರ ಹೋಸಮನಿ ಸೇರಿದಂತೆ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು. ಬೆಳಗಿನ ಜಾವದಲ್ಲಿ ಮುತ್ತೈದೆಯರಿಂದ ಕುಂಭ ಕಳಸದೊಂದಿಗೆ ಪುರಾಣ ಗ್ರಂಥದ ಮೆರವಣಿಗೆ ಡೊಳ್ಳು ಸಕಲ ವಾದ್ಯಗಳೊಂದಿಗೆ ಜರುಗಿದ ನಂತರ ಮಹಾಪ್ರಸಾದ ನಡೆಯಿತು.
ಸಂಜೆಯ ವೇಳೆ ಪೂಜ್ಯರ ಹಾಗೂ ಹರ,ಗುರು,ಚರ ಮೂರ್ತಿಗಳ ಮಾರ್ಗದರ್ಶನದಲ್ಲಿ ಶ್ರೀ ಭೀಮಾಂಬಿಕಾ ದೇವೀಯ ಲಘು ರಥೋತ್ಸವ ಬಹು ವಿಜೃಂಭಣೆಯಿಂದ ನೆರವೇರಿತು. ಭಕ್ತರು ಭಕ್ತಿಯಿಂದ ಉತ್ತತ್ತಿ ಬಾಳೆಹಣ್ಣು ಅರ್ಪಿಸಿ ಪ್ರಾರ್ಥಿಸಿದರು.ನಂತರ ಶ್ರೀ ಭೀಮಾಂಬಿಕಾ ನವ ತರುಣ ನಾಟ್ಯ ಸಂಘ ಭಟಪನಹಳ್ಳಿ ಇವರಿಂದ “ರೈತರ ರಾಜ್ಯದಲ್ಲಿ ರಾಯಣ್ಣ” ಸುಂದರ ಸಾಮಾಜಿಕ ನಾಟಕ ಜರುಗಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.