ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೬೧ ನೆಯ ಶಿವಾನುಭವ ಗೋಷ್ಠಿ ಜರುಗಿತು.”ತೋರಿಕೆಗೆ ಮಾಡುವ ಭಕ್ತಿ ಸೇರಿಕೆ ಧರ್ಮನಿಗಿಲ್ಲ” ಈ ಚಿಂತನ ವಿಷಯ ಕುರಿತು ಶಿವಾನುಭವ ಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮಹಾದೇವಪ್ಪ ಕಮ್ಮಾರ ಅವರು ಮಾತನಾಡಿ ನಾವು ಮಾಡುವ ದಾನ ಧರ್ಮ ಇನ್ನೋಬ್ಬರಿಗೆ ಗೊತ್ತಾಗಬಾರದು ನಾವು ಗೊತ್ತು ಪಡಿಸಿದರೆ ಅದು ತೋರಿಕೆಯ ಭಕ್ತಿಯಾಗುತ್ತದೆ ಎಂದರು.ಭಕ್ತಿಯಿಂದ ಕೈ ಮುಗಿಯುವ ಭಕ್ತನೆ,ನಿಜವಾದ ಭಕ್ತ,ಎಷ್ಟಾದರೂ ಕೊಡು ಆದರೆ ನಮ್ಮ ಮನಸ್ಸಿನಿಂದ ಕೊಡಬೇಕು ಈ ರೀತಿ ಕೊಟ್ಟಾಗ ಇದು ತೋರಿಕೆಯ ಭಕ್ತಿಯಾಗುವುದಿಲ್ಲ ಎಂದು ಶ್ರೀ ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ,ರುದ್ರಪ್ಪ ಹರಿಜನ,ಡಾ.ಬಸವರಾಜ ಪ್ರಭಣ್ಣನವರ ಮಾತನಾಡಿದರು.
ಶ್ರೀ ಮಠದ ಒಡಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ.ಗು.ಹಿರೇಮಠ ಸಾನಿದ್ಯ ವಹಿಸಿದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿಯಿಂದ ಭಜನೆಮಾಡಿ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಬಸವರಾಜ ಕುರಿ ಹಾಲಕೇರಿ,ಪರಸುರಾಮ ಗಡ್ಡದ,ಸಂಗಪ್ಪ ಮಂಡಾಲಿ,ಕಳಕಪ್ಪ ಚೌದರಿ,ಈರಪ್ಪ ರಾವಣಕಿ,ಶರಣೆಗೌಡ ದಮ್ಮೂರ,ಸಂಗೀತ ಬಳಗದ ಕಳಕಪ್ಪ ಹಡಪದ,ಯಮನೂರಪ್ಪ ಹಳ್ಳಿಕೇರಿ, ಸೇರಿದಂತೆ ಇತರರು ಭಾಗವಹಿಸಿದ್ದರು ನಂತರ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.