ಶಿವಮೊಗ್ಗ:ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ,ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ,ಕ್ಯಾಲಿಕಟ್ ಕೃಷಿ ವಿಜ್ಞಾನ ಕೇಂದ್ರ ನವಿಲೆ,ಶಿವಮೊಗ್ಗ ಮತ್ತು ತೋಟಗಾರಿಕೆ ಇಲಾಖೆ ಶಿವಮೊಗ್ಗ ಇವರ ಸಹಯೋಗದೊಂದಿಗೆ
“ಕಾಳು ಮೆಣಸಿನ ವೈಜ್ಞಾನಿಕ ಬೇಸಾಯ ಪದ್ಧತಿಗಳು”
ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವು ದಿನಾಂಕ 23.5.2024ರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಕೃಷಿ ಕಾಲೇಜ್,ನವಿಲೆ ಇದರ ಎಂ.ಎಸ್.ಸ್ವಾಮಿನಾಥನ್ ಸಭಾಂಗಣ (ಎಂ.ಪಿ.ಹಾಲ್)ದಲ್ಲಿ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.
ಡಾ.ಎಸ್.ಪ್ರದೀಪ್ ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ನವಿಲೆ,ಶಿವಮೊಗ್ಗ ಇವರು ಕಾರ್ಯಕ್ರಮಕ್ಕೆ ಸ್ವಾಗತ ಕೋರುವರು:ಡಾ.ಆರ್.ಸಿ.ಜಗದೀಶ, ಕುಲಪತಿಗಳು,ಕೆ.ಶಿ.ನಾ.ಕೃ.ತೋ.ವಿ.ವಿ.,ಇರುವಕ್ಕಿ ಶಿವಮೊಗ್ಗ,ಇವರು ಅಧ್ಯಕ್ಷತೆ ವಹಿಸುವ ಕಾರ್ಯಕ್ರಮವನ್ನು ಡಾ.ಪ್ರಕಾಶ್ ಜಿ.ಎನ್.,ತೋಟಗಾರಿಕೆ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ಶಿವಮೊಗ್ಗ ಇವರು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಡಾ.ಬಿ.ಹೇಮ್ಲಾನಾಯ್ಕ,ಶಿಕ್ಷಣ ನಿರ್ದೇಶಕರು,ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ,ಶಿವಮೊಗ್ಗ,ಡಾ.ದುಷ್ಯಂತ ಕುಮಾರ್ ಬಿ.ಎಂ.,ಸಂಶೋಧನಾ ನಿರ್ದೇಶಕರು,ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ, ಡಾ. ಕೆ.ಟಿ. ಗುರುಮೂರ್ತಿ, ವಿಸ್ತರಣಾ
ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ, ಡಾ. ಆರ್. ಗಣೇಶ್ ನಾಯಕ್, ಡೀನ್ (ಕೃಷಿ) ಮತ್ತು ಆವರಣದ ಮುಖ್ಯಸ್ಥರು, ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ, ಡಾ. ಜೆ. ವೆಂಕಟೇಶ್, ವಿಶ್ರಾಂತ ಶಿಕ್ಷಣ ನಿರ್ದೇಶಕರು, ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ ಇವರುಗಳು ಉಪಸ್ಥಿತರಿರುವರು.
ತಾಂತ್ರಿಕ ಉಪನ್ಯಾಸವನ್ನು ವಿಶ್ರಾಂತ ಶಿಕ್ಷಣ ನಿರ್ದೇಶಕರು ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ, ಡಾ. ನಾಗರಾಜಪ್ಪ ಅಡಿವೆಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ ನವಿಲೆ, ಶಿವಮೊಗ್ಗ, ಡಾ ಗಿರೀಶ್ ಆರ್,ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಕೆವಿಕೆ,ಶಿವಮೊಗ್ಗ ಇವರುಗಳು ನಡೆಸಿಕೊಡುವರು.
ರೈತರ ಸಂವಾದ ಮತ್ತು ಅನುಭವಗಳು ಹಾಗೂ ವಂದನಾರ್ಪಣೆಯನ್ನು ಡಾ.ಭರತ್ ಕುಮಾರ್ ಎಂ.ವಿ.,ವಿಜ್ಞಾನಿಗಳು (ತೋಟಗಾರಿಕೆ),ಕೆವಿಕೆ, ಶಿವಮೊಗ್ಗ ಇವರು ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್