ಬೀದರ್:ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಅಶೋಕ್ ಖೇಣಿ ಸಾರ್ವಜನಿಕ ಗ್ರಂಥಾಲಯನ್ನು ಬೀದರ ತಾಲೂಕಿನ ಯಾಕತಪೂರದಲ್ಲಿ ಶ್ರೀ ಅಶೋಕ್ ಖೇಣಿ ಅವರ ಹೆಸರಿನಲ್ಲಿ ಜೂ.10 ರಂದು ಗ್ರಂಥಾಲಯ ಸ್ಥಾಪನೆ ಮಾಡಲಾಗುವುದೆಂದು ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ.ಎಸ್.ಹೊಸಮನಿ ತಿಳಿಸಿರುತ್ತಾರೆ.
ಈ ಒಂದು ಗ್ರಂಥಾಲಯದಿಂದ ಗ್ರಾಮೀಣ ಜನರಿಗೆ ಉನ್ನತದ ಮಟ್ಟದ ಶಿಕ್ಷಣವನ್ನು ದೊರೆಯುವಂತ ಮಾಡುತ್ತದೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಮಾಡಿಕೊಡುತ್ತದೆ.ಐಎಎಸ್.ಕೆ.ಎ.ಎಸ್. ಎಫ್ ಡಿ ಸಿ.ಶಿಕ್ಷಕರ ಪರೀಕ್ಷೆಗಳು,ಪೊಲೀಸ್ ಪರೀಕ್ಷೆಗಳು,ಅಲ್ಲದೆ ಮಕ್ಕಳ ಸಾಹಿತ್ಯ,ದಲಿತ ಸಾಹಿತ್ಯ,ವಚನ ಸಾಹಿತ್ಯ,ಕವಿಗಳ ಪರಿಚಯ,ಸಾಹಿತ್ಯಗಾರರು,ಲೇಖಕರು ಮೊದಲಾದವರು ಶ್ರೀ ಅಶೋಕ್ ಖೇಣಿ ಸಾರ್ವಜನಿಕ ಗ್ರಂಥಾಲಯ ಉಪಯೋಗಿಸಬಹುದು.ಕವಿಗಳು ವಿಶೇಷವಾಗಿ ಗ್ರಾಮೀಣಾಭಾಗದಲ್ಲಿ ಮಹಿಳೆಯರಿಗೆ ಅನುಕೂಲವಾಗುತ್ತದೆ.ಈ ಗ್ರಂಥಾಲಯವು ಮಕ್ಕಳಿಗೆ ಅನುಕೂಲವಾಗಲಿದ್ದು ಇದನ್ನು ಜೂ.10 ರಂದು ಉದ್ಘಾಟನೆ ಮಾಡಲಾಗುವುದು ಎಂದು ಈ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ.ಎಸ್.ಹೊಸಮನಿ ತಿಳಿಸಿರುತ್ತಾರೆ.
ವರದಿ:ರೋಹನ್ ವಾಘಮಾರೆ