ನಿಮ್ಮ ಗುರಿ ದೊಡ್ಡದಾಗಿರಲಿ,ಗುರಿ ತಲುಪಲು ಹೆಚ್ಚು ಪರಿಶ್ರಮ,ಸಮಯಪಾಲನೆ ಬಹುಮುಖ್ಯ; ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳ ಸ್ಪೂರ್ತಿ ಸಂವಾದ ಎಂಬ ಕಾರ್ಯಕ್ರಮ
ಯಾದಗಿರಿ; ನವೆಂಬರ್ 25
ನಿಮ್ಮ ಗುರಿ ದೊಡ್ಡದಾಗಿರಬೇಕು,ಗುರಿ ತಲುಪಲು ಹೆಚ್ಚು ಪರಿಶ್ರಮ, ಸಮಯಪಾಲನೆಯಿಂದ ಓದುವುದು ಬಹುಮುಖ್ಯವಾಗಿದ್ದು,ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ನೀವು ಹುಡುಕಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ,ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಹೆಜ್ಜೆಗೊಂದು ದಾರಿ,ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳ ಸ್ಪೂರ್ತಿ ಸಂವಾದ ಎಂಬ ವಿನೂತನ ಕಾರ್ಯಕ್ರಮ ನಡೆಸಿದ ಅವರು,ಬಹು ಆಸಕ್ತಿಯಿಂದ ವಿದ್ಯಾರ್ಥಿಗಳಿಂದ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ವಿದ್ಯಾರ್ಥಿಗಳ ಭವಿಷ್ಯದ ಗುರಿಗಳು ಮತ್ತು ಅವರ ಅಭಿಲಾಷೆಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾರ್ಥಿಗಳು ತಮ್ಮ ಪರಿಚಯ ಜೊತೆಗೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ ನೀಡಿದ ಅವರು ವಾರ್ಷಿಕ ಪರೀಕ್ಷೆಗಳ ತಯಾರಿಗಾಗಿ ಶಾಲೆ ಪ್ರಾರಂಭ ದಿನದಿಂದಲೇ ಓದಲು ಪ್ರಾರಂಭಿಸಬೇಕು. ಮನೆಯಲ್ಲಿ ಬಡತನವಿದೆ ಎಂದು ಯಾರು ನಿರಾಶೆಯಾಗಬಾರದು.ಚೆನ್ನಾಗಿ ಓದಿ ಉದ್ಯೋಗಿಗಳಾಗಿ ಪೋಷಕರ ಒಳ್ಳೆಯ ಮಕ್ಕಳಾಗಿ ಮುಂದಿನ ದಿನಗಳನ್ನು ಸಂತೋಷದಿಂದ ಕಳೆದರೆ ಅದುವೇ ಜೀವನ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಿ ಶಬ್ದಕೋಶ ಹಾಗೂ ಲೆಕ್ಕನಿಕೆಯನ್ನು ನೀಡಿ ಉತ್ತಮ ಭವಿಷ್ಯಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ವಿಷಯ ಪರಿವೀಕ್ಷಕರಾದ ಬಸಣ್ಣಗೌಡ ಆಲ್ದಾಳ, ಶಿಕ್ಷಣ ಸಂಯೋಜಕ ಬಸವರಾಜ, ಶಿಕ್ಷಕರಾದ ರಾಜಶೇಖರ, ಶಿಕ್ಷಕಿ ಮಂಜುಳಾ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.