ಕರ್ನಾಟಕ ಕೂಡೊ ಮಾರ್ಷಲ್ ಆರ್ಟ್ಸ್ ತಂಡಕ್ಕೆ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ತೃತೀಯ ಚಾಂಪಿಯನ್ ಟ್ರೋಫಿ
ಹೊನ್ನಾಳಿ:ದಿನಾಂಕ 25-05-2024 ರಿಂದ 30-05-2024 ರ ವರೆಗೆ ಹಿಮಾಚಲ ಪ್ರದೇಶದ, ಸೋಲನ್ ಜಿಲ್ಲೆಯ ಗ್ರೀನ್ ಹಿಲ್ಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ 2ನೇ ಕುಡೊ ರಾಷ್ಟ್ರೀಯ ಚಾಂಪಿಯನ್‌ಶಿಪ್ ಕಪ್ 2024-25 ನಡೆಯಿತು.ಈ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯದ ಹಲವಾರು ಜಿಲ್ಲೆಗಳಿಂದ 70 ಕ್ರೀಡಾಪಟುಗಳು ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ, ಮಾರ್ಚ್ ತಿಂಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಭಾಗವಹಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಹೊನ್ನಾಳಿಯ
1)ಲಕ್ಷ್ಮಿಕಾಂತ್ ಡಿ ಎಂ ಬೆಳ್ಳಿಯ ಪದಕ
2) ಸಿದ್ಧಾರ್ಥ್ ಪಾಟೀಲ್ ಎಂ ಡಿ ಬೆಳ್ಳಿಯ ಪದಕ ಪಡೆದು ಹೊನ್ನಾಳಿಯನ್ನ ರಾಷ್ಟ್ರ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ತರಬೇತುದಾರರಾದ ಡಿ ಎಂ ಅಂಬೇಡ್ಕರ್ ಬೋಧ್ ತಿಳಿಸಿದ್ದಾರೆ ಹಾಗೂ
ಕೂಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶಿಹಾನ್ ಶಬ್ಬೀರ್ ಅಹ್ಮದ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ತಂಡವು ಭಾಗವಹಿಸಿತ್ತು.ತೀರ್ಪುಗಾರರಾಗಿ ಅಮೃತ್ ಪಟೇಲ್. ಜಿ.ಆರ್. ಅಂಬೇಡ್ಕರ್ ಡಿ.ಎಂ ಹಾಗೂ ಮೊಹಮ್ಮದ್ ಇಬ್ರಾಹಿಂ.ಎಸ್ ರವರು,ಟೀಮ್ ಕೋಚ್ ಆಗಿ ಶೇಖರ್ ಎಂ ರವರು ಹಾಗೂ ಟೀಮ್ ಮ್ಯಾನೇಜರ್ ಆಗಿ ಮೊಹಮ್ಮದ್ ನಿಜಾಮುದ್ದೀನ್ ರವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ನೀಡಿ 3 ಚಿನ್ನ,13 ಬೆಳ್ಳಿ ಹಾಗೂ 18 ಕಂಚು ಒಟ್ಟು 34 ಪದಕಗಳನ್ನು ಪಡೆದುಕೊಂಡು ತೃತೀಯ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾರೆ.ಕೂಡೊ ಜಪಾನಿನ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಆಗಿದೆ ಅಂದರೆ ಜಪಾನಿನ ಒಂದು ಸಮರ ಕಲೆಯಾಗಿದೆ.ಈ ಕ್ರೀಡೆಯು ಬಾಕ್ಸಿಂಗ್,ಕರಾಟೆ, ಜುಡೊ, ಟೆಕ್ವಾಂಡೊ, ಕಿಕ್ ಬಾಕ್ಸಿಂಗ್, ಕುಸ್ತಿ, ಮುಯ್ ಥಾಯ್, ವುಶು, ಜುಜುಟ್ಸು ಸೇರಿದಂತೆ ಹಲವಾರು ಸಮರ ಕಲೆಗಳ ಮಿಶ್ರಣವಾಗಿದ್ದು ಈ ಒಂದು ಕ್ರೀಡೆಯನ್ನು ಕಲಿತರೆ ಎಲ್ಲಾ ಸಮರ ಕಲೆಗಳನ್ನು ಕಲಿತಹಾಗೆ.ಆದ್ದರಿಂದ ಈ ಕ್ರೀಡೆಯು ಹೆಣ್ಣು ಮಕ್ಕಳು ಆತ್ಮ ರಕ್ಷಣೆಗಾಗಿ ಅತ್ಯುತ್ತಮವಾಗಿದೆ. ಈ ಕ್ರೀಡೆಯ ನಿಯಮಗಳು, ಶಿಸ್ತು ಹಾಗೂ ಭಾರತದಲ್ಲಿ ಈ ಕ್ರೀಡೆಯ ಅತಿ ವೇಗವಾಗಿ ಬೆಳವಣಿಗೆಯನ್ನು ಗಮನಿಸಿ ಭಾರತ ಸರ್ಕಾರವು ಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ. ಆದ್ದರಿಂದ 6 ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದರೆ 10,000 ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು.ಹಾಗೆಯೆ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆಯುವ ಕೂಡೊ ಕ್ರೀಡಾಪಟುಗಳಿಗೆ ಭಾರತ ಸರ್ಕಾರದ ವತಿಯಿಂದ ಆರ್ಥಿಕ ರಾಶಿ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಯ ಸೌಲಭ್ಯಗಳು ನೀಡಲಾಗುತ್ತಿದೆ ಎಂದು ಕೂಡೊ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯದ ಚೆರ್ಮ್ಯಾನ್ ರವರಾದ ಪ್ರಖ್ಯಾತ ಬಾಲಿವುಡ್ ಚಲನಚಿತ್ರ ನಟ ಶ್ರೀ ಶಿಹಾನ್ ಅಕ್ಷಯ್ ಕುಮಾರ್ ಅವರು ತಿಳಿಸುತ್ತಾ ಭಾರತ ಸರ್ಕಾರಕ್ಕೆ ಹಾಗೂ ಭಾರತ ಸರ್ಕಾರದ ಕ್ರೀಡಾ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಪೋಷಕರಿಗೆ ಕುಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶಿಹಾನ್ ಶಬ್ಬೀರ್ ಅಹ್ಮದ್ ರವರ,ವಿವಿಧ ಜಿಲ್ಲಾ ಕೂಡೊ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ತರಬೇತಿದಾರಾರಿಗೆ ಶುಭ ಕೋರಿದ್ದಾರೆ.
ವರದಿ ಪ್ರಭಾಕರ್ ಡಿ ಎಂ