ಹನೂರು:ವಿಕಲಚೇತನೋರ್ವನಿಗೆ ಪಿಂಚಣಿ ಹಣ ಬಾರದ ಹಿನ್ನಲೆ ಹಣ ಬರುವಂತೆ ಮಾಡಿಕೊಡಬೇಕು ನಾವು ತುಂಬಾ ಕಡು ಬಡತನದಿಂದ ಇದ್ದೇವೆ ಎಂದು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನ ಪಾಳ್ಯ ಗ್ರಾಮದ ಭಾಸ್ಕರ್ ಡಿಸೋಜ ಕುಮಾರ್ ಪತ್ರಿಕಾ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನಮ್ಮ ತಂದೆ ನಾನು ಚಿಕ್ಕವನಾಗಿದ್ದಾಗಲೇ ನಿಧನರಾಗಿದ್ದಾರೆ ನನ್ನ ತಾಯಿ ಕೂಲಿ ಮಾಡಿಕೊಂಡು ನನ್ನನ್ನು ಸಾಕುತ್ತಿದ್ದಾರೆ ಕಳೆದ ಏಳು ವರ್ಷಗಳ ಹಿಂದೆ ಬೈಕ್ ಅಪಘಾತದಲ್ಲಿ ಕಾಲುಮುರಿತವಾಗಿದ್ದು ಕಳೆದ ಐದು ವರ್ಷಗಳಿಂದ ಪಿಂಚಣಿ 1200 ರೂ.ಹಣ ಬರುತ್ತಿತ್ತು.ಒಂದು ವರ್ಷದಿಂದ ಯಾವುದೇ ರೀತಿಯ ಪಿಂಚಣಿ ಹಣವು ನನಗೆ ಬರುತ್ತಿಲ್ಲ ಹೀಗಾಗಿ ನನ್ನ ಜೀವನಕ್ಕೆ ಅನುಕೂಲವಾಗುವಂತೆ ಸರ್ಕಾರದ ಸವಲತ್ತುಗಳಲ್ಲಿ ಒಂದಾದ ಪಿಂಚಣಿ ಹಣವನ್ನು ಬರುವಂತೆ ಮಾಡಿಕೊಡಬೇಕು ಎಂದು ತಿಳಿಸಿದರು.
ಸರ್ಕಾರಿ ಪಿಂಚಣಿ ಹಣ ಬರುವಂತೆ ಮಾಡಿಕೊಡುವಂತೆ ಮನವಿ ಮಾಡುತ್ತಾ ನನಗೆ ವಿಕಲಚೇತನ ತಳ್ಳೋ ಗಾಡಿಯನ್ನು ದಯಮಾಡಿ ಕೊಡಿಸಿ ಕೊಡಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತೇನೆ ಎಂದು ಶಾಸಕ ಎಂಆರ್ ಮಂಜುನಾಥ್ ರವರಿಗೆ ಮಾಧ್ಯಮ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ಹನೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್ ಪ್ರತಿಕ್ರಿಯಿಸಿ,ಕಳೆದ ಒಂದು ವರ್ಷದಿಂದ ಇವರಿಗೆ ಪಿಂಚಣಿ ಹಣ ಬರುತ್ತಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿಲ್ಲ.ಇದೀಗ ಗಮನಕ್ಕೆ ಬಂದಿದ್ದು ಈ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ಲೇ ಅವರನ್ನು ಸ್ಥಳಕ್ಕೆ ಕಳುಹಿಸಿ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಬಳಿಕ ಪರಿಶೀಲಿಸಿ ಪಿಂಚಣಿ ಹಣವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವರದಿ:ಉಸ್ಮಾನ್ ಖಾನ್