ವಿಜಯನಗರ ಜಿಲ್ಲೆಯ ಕಂಪ್ಲಿ ತಾಲೂಕಿನ ನಂ 3 ಸಣಾಪುರ ಗ್ರಾಮದಲ್ಲಿ ವನಸಿರಿ ಫೌಂಡೇಶನ್ ಕಂಪ್ಲಿ ತಾಲೂಕ ಘಟಕದ ವತಿಯಿಂದ ಸಣಾಪುರ ರಸ್ತೆಯ ಅಕ್ಕಪಕ್ಕದಲ್ಲಿ ವಿವಿಧ ರೀತಿಯ ತಳಿಯ 500ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಂಪ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕದ ಸದಸ್ಯರಾದ ವಿನೋದ ಕುಮಾರ ಮಾತನಾಡಿ ಕಾಡು ಬೆಳಸಿ ನಾಡು ಉಳಿಸಿ ಎನ್ನುವಂತೆ ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳಸುವ ಮೂಲಕ ಈ ನಾಡಿನ ಜನತೆಗೆ ಶುದ್ಧ ಗಾಳಿ,ಆಹಾರ ದೊರೆಯುವಂತೆ ಆಗಬೇಕು.ಈ ಭೂಮಂಡಲದ ಮೇಲೆ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಅದೇರೀತಿ ಗಿಡಮರಗಳಿಗೂ ಜೀವ ಇದೆ ಅನ್ನುವುದು ನಾವುಗಳು ಅರ್ಥಮಾಡಿಕೊಳ್ಳಬೇಕು ಗಿಡಮರಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು.ಪರಿಸರವನ್ನು ಪ್ರತಿಯೊಬ್ಬರೂ ಸಂರಕ್ಷಣೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ವನಸಿರಿ ತಂಡ ರಾಜ್ಯಾದ್ಯಂತ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಇಂದು ನಮ್ಮ ಗ್ರಾಮದ ಪ್ರಮುಖ ರಸ್ತೆಯ ಅಕ್ಕಪಕ್ಕದಲ್ಲಿ ವಿವಿಧ ರೀತಿಯ ತಳಿಗಳ ಸಸಿಗಳನ್ನು ನೀಡುತ್ತಿರುವುದು ತುಂಬಾ ಶ್ಲಾಘನೀಯ ಮತ್ತು ನನಗೆ ಹೆಮ್ಮೆ ಅನಿಸುತ್ತಿದೆ.ಇದಕೆಲ್ಲಾ ಮಾರ್ಗದರ್ಶಕರಾದ ಅಮರೇಗೌಡ ಮಲ್ಲಾಪೂರ ಅವರಿಗೂ ಈ ಕಾರ್ಯದಲ್ಲಿ ಕೈಜೋಡಿದ ಗ್ರಾಮದ ಹಿರಿಯರಿಗೂ ಕಿರಿಯರಿಗೂ ವನಸಿರಿ ಫೌಂಡೇಶನ್ ಸದಸ್ಯರಿಗೂ ಹಾಗೂ ಸ್ನೇಹಿತರ ಬಳಗಕ್ಕೂ ದನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿನೋದಕುಮಾರ,K.ಪ್ರಶಾಂತ, K.ಬಸವರಾಜ,A.ಪ್ರಕಾಶ,D.ವೀರೇಶ,ಶರಣಪ್ಪಗೌಡ, ಶಂಕರಗೌಡ,K.ಶಶಿಧರ, ರೆಡ್ಡಿಶಣ್ಣಪ್ಪ,ಮಲ್ಲಯ್ಯ, ವೀರೇಶ,ಮನೋಜ,ಗಣೇಶ, ದೇವೇಂದ್ರ ಇನ್ನೂ ಹಲವಾರು ಹಿರಿಯರು,ಯುವಕರು ಭಾಗವಹಿಸಿದ್ದರು.
