ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಳಿದ ಮೇಲೆ ಉಳಿಯುವಂತಾಗಬೇಕು:ಎಸ್ ಆರ್.ಮನಹಳ್ಳಿ

ಬಾಗಲಕೋಟೆ:ತಿಮ್ಮಾಪುರ ಜೀವನದ ಸಾರ್ಥಕತೆ ಉತ್ತಮ ಆಚಾರ,ವಿಚಾರ,ಅಳವಡಿಸಿಕೊಂಡು ಜೀವನ ಸಾಗಿಸಿ,ಮನುಷ್ಯ ಅಳಿದ ಮೇಲೆಯೂ ಉಳಿಯುಂತಾಗಬೇಕು ಎಂದು ಶಿಕ್ಷಣ ತಜ್ಞ ಎಸ್.ಆರ್.ಮನಹಳ್ಳಿ ಹೇಳಿದರು.
ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕಾಳಿಕಾಂಬ ದೇವಾಲಯದ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದಮ್ಮ ಪಾಟೀಲ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ಸೇವೆಯೂ ನಿವೃತ್ತಿ ನಂತರ ಸಂಸ್ಥೆ, ಸಮಾಜ ಸ್ಮರಿಸುವಂತಾಗಬೇಕು,
ಶಿಕ್ಷಕ ವೃತ್ತಿ ಪವಿತ್ರವಾದದ್ದು,ಆದರ್ಶ,ಅನುಕರಣೆ ನಡೆತೆ ನಾವು ಅಳವಡಿಕೊಂಡಾಗ ಸಮಾಜ ನಮ್ಮನ್ನು ಖಂಡಿತ ಗೌರವಿಸುವ ಕಾರ್ಯ ಮಾಡುತ್ತದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಮಾತನಾಡಿ ಸತತ ಓದು ಆನಂದ ನೀಡುತ್ತದೆ,ಯಾವುದೇ ವೃತ್ತಿಯಿಂದ ನಿವೃತ್ತರಾದವರು ಅಧ್ಯಯನ,ಸಮಾಜ ಸೇವೆ ತೊಡಗಿ ಉತ್ತಮ ಜೀವನ ನಡೆಸಬಹುದು.
ವೃತ್ತಿ ಪಾವಿತ್ರತೆ ಇಂದು ಕಡಿಮೆಯಾಗುತ್ತಿದೆ ಗುರು ಶಿಷ್ಯರು ಸಂಬಂಧ,ಗುರುಭಕ್ತಿ,ಭಯ,ಗೌರವ ಭಾವನೆ ಕಡಿಮೆಯಾಗಿ,ಸಮಾಜದ ಸ್ವಾಸ್ಥ್ಯ ಹಾಳುಗುತ್ತಿದೆ. ಹಿಂದೆ ವಿದ್ಯಾರ್ಥಿಗಳನ್ನು ಹೆದರಿಸಿ,ಗದರಿಸಿ ಬುದ್ದಿ ಕಲಿಸುವ ವ್ಯವಸ್ಥೆ, ಇಂದು ಉಳಿದಿಲ್ಲ ಗುರುಗಳು ವಿದ್ಯಾರ್ಥಿಗಳ ಸಂಬಂಧ ಮೊದಲನಂತೆ ಉಳಿದಿಲ್ಲ ಎಂದರು.ಸಮಾರಂಭದ ಸಾನಿಧ್ಯವನ್ನು
ಹಡಗಲಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಬಾದನಾಳದ ಶಿವಸಿದ್ದ ಮಹಾಸ್ವಾಮಿಗಳು ವಹಿಸಿದ್ದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ,ಹಾಲಮತ ಸಮಾಜದ ಅಧ್ಯಕ್ಷ ಯಮನಪ್ಪ ನಾಗರಾಳ,ಜಗದೀಶ ಬಿಸಲದಿನ್ನಿ,ಎಚ್.ಎಸ್.ನಾಗೂರ, ಪಿ.ಎಚ್.ಪವಾರ,ಕನಕಪ್ಪ ಕಂಬಳಿ,ಶಿವಬಸಯ್ಯ ಹಿರೇಮಠ,ಬಸವರಾಜ ಆಸಂಗಿ,ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ,ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ,ರಂಗನಾಥ ಮಾಸರಡ್ಡಿ,ಸುಜಾತ ಹಂಚಿನಾಳ ಇದ್ದರು.
ರವಿ ಕಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು‌.
ಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ನಾಲ್ಕು ದಶಕಗಳ ಕಾಲ ಶಿಕ್ಷಕಿ,ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿದ್ದಮ್ಮ ಪಾಟೀಲ ಅವರನ್ನು ವಿವಿಧ ಸಂಘ ಸಂಸ್ಥೆಗಳು, ಶಿಕ್ಷಕರು ಗೌರವಿಸಿ,ಸನ್ಮಾನಿಸಿದರು.
ವಿಜಯಲಕ್ಷ್ಮಿ ನಾಗಲೋಟಿ ಪ್ರಾರ್ಥಿಸಿ,ಮಲ್ಲಿಕಾರ್ಜುನ ಸಜ್ಜನ ಸ್ವಾಗತಿಸಿದರು.
ಗಿರಿಯಪ್ಪ ಆಲೂರ ನಿರೂಪಿಸಿ,ಅಶೋಕ ಎಮ್ಮಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ