ಬೆಂಗಳೂರು : ಇಂದು ರಾಜಾಜಿನಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ರಾಜ್ಯೋತ್ಸವ ಹಾಗೂ ವಾರ್ಷಿಕ ಎನ್ ಸಿ ಸಿ , ಎನ್ಎಸ್ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ಕ್ರಾಸ್ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ ಎಸ್ ಬಾಲಾಜಿ ಅವರು
ಮಾತನಾಡಿದರು.
ಕಂಸಾಳೆ, ಡೊಳ್ಳು ಕುಣಿತ, ವೀರಭದ್ರ ಕುಣಿತ ಇನ್ನಿತರ ಜನಪದ ಪ್ರಕಾರಗಳ ನೃತ್ಯವನ್ನೂ ಮಾಡಲಾಯಿತು.
ರಾಜಾಜಿನಗರ ಮತಕ್ಷೇತ್ರದ ಶಾಸಕರು ಮಾಜಿ ಶಿಕ್ಷಣ ಸಚಿವರು ಶ್ರೀ ಸುರೇಶ್ ಕುಮಾರ್ ಅವರು ಉದ್ಘಾಟಿಸಿದರು, ಕನ್ನಡ ಜಾನಪದ ಪರಿಷತ್, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧ್ಯಕ್ಷ ಡಾ ರಾಜಗುಂಡಾಪುರ , ಜಾನಪದ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಮೇಶ್, ಪ್ರಾಂಶುಪಾಲರಾದ ಶ್ರೀ ವನಜಾಕ್ಷಿ ಹಳ್ಳಿ, ರಾಮಯ್ಯ ಇದ್ದರು. ಜನಪದ ಬಳಸಿ ಹಾಗೂ ಜನಪದ ಬೆಳೆಸಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.