ತುಮಕೂರು:ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ತಮ್ಮ ಅಧ್ಯಕ್ಷತೆಯಲ್ಲಿ ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ವಿಶೇಷವಾಗಿ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ, ಇಲಿಜ್ವರ ಮತ್ತು ಜೀಕಾ ವೈರಸ್ ತಡೆಗಟ್ಟುವುದಕ್ಕೆ ತಾಲ್ಲೂಕಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದಕ್ಕೆ ಹೆಚ್ಚು ಒತ್ತು ನೀಡುವುದು ಮತ್ತು ತುಂಗಾಭದ್ರ ಜಲಾಶಯದಿಂದ ಪಾವಗಡ ತಾಲ್ಲೂಕಿಗೆ ಹರಿಯುತ್ತಿರುವ ಕುಡಿಯುವ ನೀರಿನ ಯೋಜನೆಯ ಕುರಿತು ಮಾಹಿತಿ ಪಡೆದರು.
ತಾಲ್ಲೂಕಿನ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು ಶಿಕ್ಷಕರ ಕೊರತೆಯ ಮಾಹಿತಿ ಪಡೆದು ಆದಷ್ಟು ಬೇಗ ಶಿಕ್ಷಕರನ್ನು ನಿಯೋಜಿಸಲು ಸಂಬಂಧ ಪಟ್ಟ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿ ಶಾಲಾ ಕೊಠಡಿಗಳ ದುರಸ್ಥಿ ಮಾಡುವ ವಿಚಾರ ಹಾಗೂ ರಿಂಗ್ ರಸ್ತೆ ನಿರ್ಮಾಣ, ಡಿಪ್ಲೋಮ ಕಾಲೇಜು ನಿರ್ಮಾಣಕ್ಕೆ ಸ್ಥಳದ ಮಾಹಿತಿ ಪಡೆದರು,
ಬೆಸ್ಕಾಂ ಇಲಾಖೆಯಲ್ಲಿ ಎರಡು ಮೂರು ಗುಂಪುಗಳಾಗಿದ್ದು ಇಂಜಿನಿಯರ್ ಗಳು ಟಿಸಿ ಅಳವಡಿಸಲು ರೈತರನ್ನು ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದಾರೆಂದು ಮತ್ತು ಸೀನಿಯಾರಿಟಿ ಪ್ರಕಾರ ಪಟ್ಟಿ ರೂಪಿಸುತ್ತಿಲ್ಲ ಎಂದರು ಸಾರಿಗೆ ನಿಗಮದ ಬಸ್ಸುಗಳು ಎಲ್ಲ ಗ್ರಾಮಗಳಗೆ ಸಂಚಾರ ಮಾಡುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೆಡಿಪಿ ಸಭೆಯಲ್ಲಿ ಡಿಪೋ ಮೆನೇಜರ್ ಗೆ ಸೂಚಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆಯಾಗಿರುವುದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ಅವರಿಂದ ಮಾಹಿತಿ ಪಡೆದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲೆಗೆ ಸರಿಯಾದ ಸಮಯಕ್ಕೆ ಬಾರದೆ ಇರುವ ಶಿಕ್ಷಕರ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಬೇಕು. ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಾಕಿತು ಮಾಡಿದರು.
ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ಕೇಳಿ ತಿಳಿದು, ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ತಿಳಿಸಿದರು.
ಲ್ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾದರೆ, ಜನರು ಸರ್ಕಾರಿ ಶಾಲೆಗಳ ಮೇಲೆ ಇರುವ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದರು.
ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ
ಹಣ ಸಂದಾಯವಾಗದಿರುವ ಬಗ್ಗೆ ಸಿ ಡಿ ಪಿ ಓ ಸುನೀತಾ ಡಿಜೆ ಅವರ ಬಳಿ ಕಾರಣ ಕೇಳಿ ಮಾಹಿತಿ ಪಡೆದರು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿ ರಾಮ್, ದಂಡಾಧಿಕಾರಿ ವರದರಾಜು, ಪಿ ಡಬ್ಲ್ಯೂ ಡಿ AEE ಅನಿಲ್ ,ಜಿ.ಪಂ ಕಿರು ನೀರು ಸರಬರಾಜು ಇಲಾಖೆಯ AEE ಹನುಮಂತಯ್ಯ ,ಜಿ.ಪಂ AEE ಸುರೇಶ್,ತಾಲ್ಲೂಕು ಅಬಕಾರಿ ನಿರೀಕ್ಷಕರು ಮೈಕಲ್ ಜಾರ್ಜ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ , ಆರೋಗ್ಯಾಧಿಕಾರಿ ಡಾ. ಕಿರಣ್,ಕೃಷಿ ಸಹಾಯಕ ನಿರ್ದೇಶಕ ಅಜಯ್, ಸಾರಿಗೆ ವ್ಯವಸ್ಥಾಪಕ ಹನುಮಂತರಾಯಪ್ಪ, ಯೋಜನಾಧಿಕಾರಿ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್, ಎಸ್ ಟಿ ಅಧಿಕಾರಿ ಯಮುನಾ, ಸಿಡಿಪಿಓ ಸುನಿತಾ, ಸಬ್ ಇನ್ಸ್ ಪೆಕ್ಟರ್ ಗುರುನಾಥ್ ಸೇರಿ ಇನ್ನೂ ಮುಂತಾದ ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.