ವನಸಿರಿ ಫೌಂಡೇಶನ್ ತಂಡದ ಸದಸ್ಯರು ಆಲದ ಮರಕ್ಕೆ ನಾಮಕರಣ ಮಾಡಿರುವುದು ಪರಿಸರ ಪ್ರೇಮಿಗಳಿಗೆ ಸಂತೋಷವುಂಟು ಮಾಡಿದೆ ಎಂದು ಸಿಂಧನೂರ ನಗರದ 7 ನೇ ವಾರ್ಡ ನಿವಾಸಿ ಪ್ರಮೀಳಾ ರವಿಕುಮಾರ ಪತ್ತಾರ ಸಂತಸ ವ್ಯಕ್ತಪಡಿಸಿದರು.
ಅವರು ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ಮಾತನಾಡಿದರು. ನಾನು ಮಗುವಿಗೆ ನಾಮಕರಣ ಮಾಡುವುದನ್ನು ನೋಡಿದ್ದೇನೆ.ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರಕ್ಕೆ ಮರುನಾಮಕರಣ ಮಾಡಿದ್ದಾರೆ ಎಂದು ವಿಷಯ ತಿಳಿದು ನಾನು ಇಲ್ಲಿಗೆ ಬಂದಿದ್ದೇನೆ.ರೈತನೋರ್ವ ಕಡಿದು ಹಾಕಿದ ಆಲದ ಮರವನ್ನು ತಂದು ಜೀವ ತುಂಬಿ ಅದಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅನುಗ್ರಹದಿಂದ ಅಮರ ಶ್ರೀ ಎಂಬ ಹೆಸರನ್ನು ಇಟ್ಟಿರುವುದು ತುಂಬಾ ಖುಷಿ ಎನಿಸುತ್ತದೆ ಇದರ ಒಂದು ಶ್ರಮಕ್ಕೆ ವನಸಿರಿ ಫೌಂಡೇಶನ್ ತಂಡ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ.ಬೆಳೆಯುವ ಸಿರಿ ಮೊಳಕೆಯಲಿ ಎನ್ನುವಂತೆ ಪ್ರತಿಯೊಂದು ಸಸಿಯು ಚಿಗುರೊಡೆದು ಮರವಾಗ ಬೆಳೆಯಬೇಕು ಅದರ ನೆರಳಲ್ಲಿ ನಾವು ಬದುಕಬೇಕು ಉಸಿರಾಡಬೇಕು ಅಂದರೆ ಜಗತ್ತಿನಲ್ಲಿ ಪ್ರತಿಯೊಂದು ಗಿಡಕೂಡ ಮುಖ್ಯವಾಗಿರುತ್ತೆ.ಜಗತ್ತಿನಲ್ಲಿ ಪ್ರತಿಯೊಂದು ಸಸ್ಯಕ್ಕೂ ಜೀವವಿದೆ ಎನ್ನುವುದನ್ನು ಜಗದೀಶ್ ಚಂದ್ರಬೋಸ್ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ.ಆವತ್ತಿನಿಂದ ಮಾನವರ ಜೊತೆಗೆ ಸಸ್ಯಗಳು ಉಸಿರಾಡುತ್ತವೆ ಎಂಬುದನ್ನು ತಿಳಿಯಬಹುದನ್ನು ನಾವುಗಳೆಲ್ಲರೂ ತಿಳಿಯೋಣ ಪ್ರತಿಯೊಬ್ಬರೂ ಇಂತಹ ಒಂದು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಸಹಕಾರ ನೀಡೋಣ ಪರಿಸರ ರಕ್ಷಣೆ ನಮ್ಮನಿಮ್ಮೆಲ್ಲರ ಹೊಣೆ ಎಂದು ಹೇಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.