ಉಪನೋಂದಣಿ ಕಚೇರಿಯಲ್ಲಿ ಲಂಚ ಹಾವಳಿ,ಅನಧಿಕೃತ ಸಿಬ್ಬಂದಿ ದರ್ಬಾರ್ ಕುರಿತು ಉಪ ವಿಭಾಗಾಧಿಕಾರಿ ಅವರಿಗೆ ಮನವಿ
ಇಂಡಿ:ಉಪನೋಂದಣಿ ಕಚೇರಿಯಲ್ಲಿ ಅನಧಿಕೃತ ಸಿಬ್ಬಂದಿಗಳು ಕುಳಿತುಕೊಂಡು ಸರಕಾರಿ ಹೊರಗುತ್ತಿಗೆ ಸಿಬ್ಬಂದಿಯಂತೆ ಕಾರ್ಯನಿರ್ವಾಹಿಸುತ್ತಿದ್ದು ಹಾಗೂ ಇ. ಸಿ ದಸ್ತಾವೇಜು ನಕಲು ಪ್ರತಿ ಕೇಳಿ ಬರುವ ಸಾರ್ವಜನಿಕರಿಂದ ಸರಕಾರ ನಿಗದಿ ಪಡಿಸಿದ ಧರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದು.ಸರಿಯಾದ ಶುಲ್ಕ ಎಷ್ಟ ಎಂದು ಕೇಳಿದರೆ ಇಲ್ಲಿ ಎಲ್ಲಾ ಕಾರ್ಯಕ್ಕೂ ಮೇಲಧಿಕಾರಿಗಳಿಗೆ ಹಣವನ್ನು ನೀಡಬೇಕಾಗುತ್ತದೆ ಇಲ್ಲವಾದರೆ ಕೆಲಸ ವಿಳಂಭವಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ ಇದರ ಬಗ್ಗೆ ಉಪನೋಂದಣಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೆ ಅಂದರೆ,ಖರೀದಿ ಮಾರ್ಟಗೇಜ್,ಕರಾರು ಪತ್ರ ಹಾಗೂ ಇತರೆ ನೋಂದಣಿ ಕೆಲಸಕ್ಕೆ ಬರುವ ಸಾರ್ವಜನಿಕರು ಉಪನೋಂದಣಾಧಿಕಾರಿಗಳಿಗಿಂತ ಮೊದಲು ಕಚೇರಿಯಲ್ಲಿ ಇರುವ ಅನಧಿಕೃತ ಸಿಬ್ಬಂದಿಗೆ ಭೇಟಿಯಾಗುವಂತಹ ಪರಿಸ್ಥಿತಿ ಇದೆ ಅಷ್ಟೇ ಅಲ್ಲದೆ ಸರಕಾರಿ ಫಿ ಭರಣಾ ಮಾಡಿದರು ಸಾಹೇಬರ ಫ಼ೀ ಅಂತ ಎಲ್ಲಾ ದಸ್ತುಬರಹಗಾರರ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ, ಏಕೆ ಅಂತ ಕೇಳಿದರೆ ಸಾಹೇಬರಿಗೆ ಕೇಳಿ ಇಲ್ಲ ಅಂದರೆ ನಾವು ದಸ್ತನ್ನು ಹಾಕುವದ್ದಿಲ್ಲವೆಂದು ಅಂಜಿಕೆ ಹಾಕುತ್ತಾರೆ ಇನ್ನು ಮುಂದೆ ಹೀಗಾಗದಂತೆ ಮಾನ್ಯರು ಕಳಕಳಿವಹಿಸಿ ಉಪ ನೋಂದಣಾಧಿಕಾರಿಗಳಿಗೆ ಕರೆಸಿ ತಾಕಿತು ಮಾಡಿ ಸಾರ್ವಜನಿಕ ಕೆಲಸಗಳು ಸುರಳೀತವಾಗುವಂತೆ ಮಾಡಲು ತಿಳಿಹೇಳಬೇಕಿದೆ. ಒಂದು ವೇಳೆ ಯಥಾಸ್ಥಿತಿ ಮುಂದುವರೆದಲ್ಲಿ ಇಂಡಿ ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೂರುತ್ತದೆ ಎಂದು ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಮಾಡಿಕೊಂಡರು.ಈ ಸಂಧರ್ಭದಲ್ಲಿ ಉಪಾಧ್ಯಕ್ಷರು ಕ,ರ ವೇ ಸುನಿಲಗೌಡ ಬಿರಾದಾರ,ಮಹೇಶ ಹೂಗಾರ,ದಾದು ಕೂಣಶಿರಸಗಿ, ರಾಚು ಬಡಿಗೇರ,ಸುನೀಲ್ ಮಠ,ಸದು ಕಂಬಾರ, ಶಿವೂಕುಮಾರ ಮಡಿವಾಳ, ವಿನಾಯಕ ಕೂರಚಗಾಂವ, ಅಶೋಕ್ ಪಾಟೀಲ್,ನಿಕೀಲ ಶೆಟ್ಟಿಗಾರ್,ಪ್ರಶಾಂತ ಲಾಳಸಂಗಿ,ಶ್ರೀಕಾಂತ್ ಬಡಿಗೇರ ಇನ್ನು ಅನೇಕರಿದ್ದರು.
ವರದಿ.ಅರವಿಂದ್ ಕಾಂಬಳೆ