ರಾಯಚೂರಿನಲ್ಲಿ (AIIMS): ಅಖಿಲ ಭಾರತ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗುರುಮಿಠಕಲ್ ತಾಲೂಕು ಘಟಕ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಪತ್ರ ನೀಡುವ ಮೂಲಕ ಒತ್ತಾಯ ಮಾಡಲಾಯಿತು. ನಿರಂತರವಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು,ಕೇಂದ್ರ ಸರಕಾರದ ವಿಳಂಬತನ, ಕಲ್ಯಾಣ ಕರ್ನಾಟಕ ಪ್ರದೇಶದ ವಿರೋಧಿ ನೀತಿಯನ್ನು ಖಂಡಿಸಿ ತಮಗೆ ತಿಳಿದಿರುವಂತೆ ರಾಯಚೂರಿನಲ್ಲಿಯೇ ಏಮ್ಸ್ (AIIMS) ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ದಿನಾಂಕ: 13-05-2022 ರಿಂದ ನಿರಂತರ ಸುದೀರ್ಘ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದೆ.ಈ ಹೋರಾಟಕ್ಕೆ ಕರವೇ ಬೆಂಬಲಿಸುತ್ತಾ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ, ಕೇಂದ್ರ ಸರಕಾರದ ಹಣಕಾಸು ಸಚಿವರಿಗೆ ಶಿಫಾರಸ್ಸು ಪತ್ರಗಳನ್ನು ಬರೆದು ರಾಯಚೂರಿನಲ್ಲಿ ಏಮ್ಸ್ (AIIMS) ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಒತ್ತಾಯಿಸಿದ್ದಾರೆ.
ದಿನಾಂಕ: 29-06-2024 ರಂದು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಪ್ರಧಾನಮಂತ್ರಿಗಳನ್ನು ದೆಹಲಿಯಲ್ಲಿ ಸ್ವತಃ ಭೇಟಿ ಮಾಡಿ ಹಿಂದುಳಿದ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ‘ಏಮ್ಸ್’ (AIIMS) ಅನ್ನು ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ ಇಂದಿಗೂ ಕೇಂದ್ರ ಸರಕಾರದಿಂದ ಯಾವುದೇ ಸ್ಪಂದನೆ ಇರದೇ ಇರುವುದು ಖಂಡನೀಯವಾಗಿದೆ.
ಆದ್ದರಿಂದ ಕೇಂದ್ರ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ, ಐ.ಐ.ಟಿ ಯಿಂದ ವಂಚಿತಗೊಂಡ, 371(ಜೆ), ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನಕ್ಕೊಳಪಟ್ಟ,ಮಹತ್ವಾಕಾಂಕ್ಷಿ ರಾಯಚೂರು ಜಿಲ್ಲೆಗೆ ಶೀಘ್ರದಲ್ಲಿಯೇ ಏಮ್ಸ್ (AIIMS) ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ.
ಒಂದು ವೇಳೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವಂತ ಜಿಲ್ಲೆಗಳಲ್ಲಿ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಈ ಮನವಿ ಪತ್ರದ ಮೂಲಕ ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಶರಣು ಎಲ್ಹೇರಿಯವರು ಮಾತನಾಡಿ ಕೇಂದ್ರ ಸರ್ಕಾರ ರಾಯಚೂರಿನಲ್ಲಿ (AIIMS) ಸ್ಥಾಪನೆಗೆ ಅನುಮತಿ ನೀಡದೇ ಇದ್ದರೆ ಕಲ್ಯಾಣ ಕರ್ನಾಟಕದ ಭಾಗದಿಂದ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಾಗುವುದು.
ಪ್ರತಿ ಬಾರಿಯೂ ನಮ್ಮ ಕಲ್ಯಾಣ ಕರ್ನಾಟಕದ ಭಾಗಕ್ಕೆ ಅಭವೃದ್ಧಿಯ ಕೆಲಸಗಳು ನೀಡುವುದರಲ್ಲಿ ಮಲತಾಯಿ ಧೋರಣೆ ನೀತಿಯನ್ನು ಅನುಸರಿಸುತ್ತಿದೆ. ಇದೇ ರೀತಿ ಮುಂದುವರಿದರೆ ಕರವೇ ಮುಖಾಂತರ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬೀದಿಗಿಳಿದು ನಮ್ಮ ಮಹತ್ವಾಂಕಾಕ್ಷಿಯ ಅಖಿಲ ಬಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಿಗುವವರೆಗೆ ನಿರಂತರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಶರಣಬಸಪ್ಪ ಎಲ್ಹೇರಿ ತಾಲ್ಲೂಕು ಕರವೇ ಅಧ್ಯಕ್ಷರು
ಗುರುಮಠಕಲ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪದಾಧಿಕಾರಿಗಳು ಗೋಪಾಲಕೃಷ್ಣ ಮೇಧಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ,ಭೀಮಾಶಂಕರ ಪಡಿಗೆ ತಾಲ್ಲೂಕು ಗೌರವಾಧ್ಯಕ್ಷರು,ನಿಖಿಲ್ ಢಗೆ ವಿದ್ಯಾರ್ಥಿ ಘಟಕ ಅಧ್ಯಕ್ಷರು,ಶರಣು ಮೇದಾ ನಗರಾಧ್ಯಕ್ಷರು,ಶರಣು ಮಜ್ಜಿಗೆ ಕಾರ್ಮಿಕ ಘಟಕ ಅಧ್ಯಕ್ಷರು,ವೆಂಕಟೇಶ ಚಿಟಕನಪಲ್ಲಿ ತಾಲ್ಲೂಕು ಕಾರ್ಯದರ್ಶಿ,ಸಾಬಪ್ಪ ಮದ್ದೂರ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.