ಅರ್ಥಪೂರ್ಣವಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲು ತೀರ್ಮಾನ
ಅರ್ಥಪೂರ್ಣವಾಗಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲು ತೀರ್ಮಾನ
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಾ ಆಡಳಿತದ ವತಿಯಿಂದ ನಿಜಸುಖಿ ಹಡಪದ ಅಪ್ಪಣ್ಣ ನವರ 890 ನೇ ಜಯಂತೋತ್ಸವದ ಕಾರ್ಯಕ್ರಮ ಪೂರ್ವಭಾವಿ ಸಭೆಯು ತಹಸೀಲ್ದಾರ್ ಅಂಭ್ರೇಶ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಜರುಗಿತು. ಇದೇ ಜುಲೈ 23 ರಂದು ಮಂಗಳವಾರ ದಿನದಂದು ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತೋತ್ಸವವನ್ನು ತಾಲ್ಲೂಕಾ ಆಡಳಿತದಿಂದ ಕಚೇರಿ ಸಭಾಂಗಣದಲ್ಲಿಯೇ ಬೆಳಿಗ್ಗೆ 10 ಗಂಟೆಗೆ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ತಹಶಿಲ್ದಾರ ಅಂಭ್ರೇಶ ಮಾತನಾಡಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ತಮ್ಮ ಸಮುದಾಯ ಜನರೊದಿಂದಗೆ ಎಲ್ಲರ ಅಭಿಪ್ರಾಯದಂತೆ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದರು, ಚಿತ್ತಾಪುರ ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ -ಭೀಮರಾವ್ ಹಡಪದ ಮಾಸ್ತರ, ಮತ್ತು ತಾಲೂಕು ಕಾರ್ಯಾಧ್ಯಕ್ಷ ನಾಗರಾಜ ಹಡಪದ ಸಾತನೂರ, ಅವರು ನಮ್ಮ ಚಿತ್ತಾಪುರ ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ಭಾಂಧವರು,ಸಮಾಜದ ಹಿರಿಯ ಮುಖಂಡರು, ಯುವಕರು,ಮಹಿಳಾ ತಾಯಂದಿರು ಮತ್ತು
ಸಮಾಜ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಶರಣ ಹಡಪದ ಅಪ್ಪಣ್ಣ ನವರ ಜಯಂತೋತ್ಸವದಲ್ಲಿ ಭಾಗವಹಿಸಿ ಎಂದು ಕೋರಿದರು.ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿರುವರು ಎಂದು ತಾಲೂಕು ಕಾರ್ಯದರ್ಶಿ ಶಂಕರ್ ಹಡಪದ ಚಿತ್ತಾಪುರ ಅವರು ಈ ಪತ್ರಿಕೆಯ ಮೂಲಕ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿ ಯಶಸ್ವಿಯಾಗಿ ಆಚರಣೆ ಮಾಡಲು ಸಮಾಜದ ಬಂಧುಗಳಲ್ಲಿ ವಿನಂತಿಸಿಕೊಂಡರು.