ಚಾಮರಾಜನಗರ:ನನ್ನ ಸುದೀರ್ಘ ರಾಜಕೀಯ ಭವಿಷ್ಯದ ಇತಿಹಾಸ ಕೊನೆಗೊಂಡಿತ್ತು ಅಂದುಕೊಂಡಿದ್ದ ಕೆಲವರಿಗೆ ನಮ್ಮ ಮನೆ ದೇವರು ಮಾದಪ್ಪ ಹಾಗೂ ತುಮಕೂರಿನ ಜನತೆ ಆಶೀರ್ವಾದಿಂದ ಇಂದು ನಾನು ಕೇಂದ್ರದ ಮಂತ್ರಿಯಾಗಿ ಅತ್ಯಂತ ದೊಡ್ಡ ಜವಾಬ್ದಾರಿ ನಿಭಾಯಿಸಲು ಅವಕಾಶ ಸಿಕ್ಕಿದೆ. ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಮಾದಪ್ಪನ ಸನ್ನಿಧಿಗೆ ಕೇಂದ್ರ ರೈಲ್ವೆ ಮತ್ತು ರಾಜ್ಯ ಜಲಶಕ್ತಿ ಸಚಿವ ವಿ.ಸೋಮಣ್ಣ ಅವರು ತಮ್ಮ 74ನೇ ವರ್ಷದ ಹುಟ್ಟುಹಬ್ಬ ದ ಪ್ರಯುಕ್ತ ಆಗಮಿಸಿದ ಅವರಿಗೆ ಬಿಜಿಪಿ ಪ್ರಮುಖರಾದ ಡಾಕ್ಟರ್ ದತ್ತೇಶ್ ಕುಮಾರ್ ಸಾಥ್ ನೀಡಿದರು ನಂತರ ಮಾತನಾಡಿದ ಸಚಿವರು ಮನೆದೇವ್ರ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದೆನೆ ಚಾಮರಾಜನಗರ ಮತ್ತು ಹೆಜ್ಜಾಲ ರೈಲ್ವೆ ಬಗ್ಗೆ ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹೇಳಿ ಜನರನ್ನು ನಂಬಿಸಿದ್ದಾರೆ. ಆದರೆ ಆ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರು ಕನಕಪುರ ಮಳವಳ್ಳಿ ಕೊಳ್ಳೇಗಾಲ ಮಾರ್ಗವಾಗಿ ರೈಲು ವ್ಯವಸ್ಥೆ ತರಲು ನಾನು ಪ್ರಮಾಣಿ ಪ್ರಯತ್ನ ಮಾಡುತ್ತೇನೆ ಎಂದರು. ಜನ್ಮ ದಿನದ ಪ್ರಯುಕ್ತ ಮಹದೇಶ್ವರಬೆಟ್ಟದ ಸುತ್ತ ಮುತ್ತಲಿನ ಗ್ರಾಮದ ಮಹಿಳೆಯರು ಹಾಗೂ ವಯೋವೃದ್ಧರಿಗೆ ಮಹದೇಶ್ವರ ತಪೋ ಭವನದಲ್ಲಿ
ಸೀರೆ ಮತ್ತು ಬೆಡ್ ಸೀಟ್ ಗಳನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಜಿಲ್ಲೆಯ ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಮುಖಂಡರು ಗಳು ಸಚಿವ ವಿ.ಸೋಮಣ್ಣ ಅವರಿಗೆ ಹೂ ಗುಚ್ಚ ನೀಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು.
ಈ ವೇಳೆ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮ.ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಉಪ ಕಾರ್ಯದರ್ಶಿ ಚಂದ್ರಶೇಖರ್ ತಹಸೀಲ್ದಾರ್ ಪ್ರಸಾದ್ ಬಿಜೆಪಿ ಮುಖಂಡ ಡಾ.ದತ್ತೇಶ್ ಕುಮಾರ್ ಕಾರ್ಯಕರ್ತರು ಮುಖಂಡರು ಇದ್ದರು.
ವರದಿ:ಉಸ್ಮಾನ್ ಖಾನ್