ಕಲಬುರಗಿ/ಚಿತ್ತಾಪುರ:
12ನೇ ಶತಮಾನದ ಸಾಮಾಜಿಕ ಹರಿಕಾರರಲ್ಲಿ ಹಡಪದ ಅಪ್ಪಣ್ಣ ಕೂಡಾ ಒಬ್ಬರಾಗಿದ್ದರು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ರಾವೂರ ಗ್ರಾಮದ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಬಸವಣ್ಣನವರ ಬಲಗೈ ಬಂಟರಾಗಿ ಅವರ ಜೊತೆ ಜೊತೆಗೆ ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅನುಭವ ಮಂಟಪದಲ್ಲಿ ಬಸವಣ್ಣನವರ ಕಾರ್ಯದರ್ಶಿಯಾಗಿ ಕಾಯಕಕ್ಕೆ ಯಾವ ಚ್ಯುತಿ ಬರದಂತೆ ಸೇವೆ ಮಾಡಿ ಅವರ ಮೆಚ್ಚುಗೆ ಪಡೆದರು ಅನುಭವ ಮಂಟಪಕ್ಕೆ ಯಾರೇ ಬಂದರೂ ಹಡಪದ ಅಪ್ಪಣ್ಣ ಅವರನ್ನು ಭೇಟಿ ಮಾಡಿ ಬರುವಂತೆ ಹೇಳುತ್ತಿದ್ದರು ತಮ್ಮ ವಚನಗಳ ಮೂಲಕ ಸಮಾಜದ ಮೌಢ್ಯತೆಯನ್ನು ಕಂದಾಚಾರಣೆಗಳನ್ನು, ಅನಿಷ್ಟ ಪದ್ಧತಿಗಳನ್ನು ಜನರ ಮನಸ್ಸಿನಿಂದ ದೂರ ಮಾಡುವ ಪ್ರಯತ್ನ ಮಾಡಿದರು ಅವರ ವಿಚಾರಗಳು ಇವತ್ತಿನ ಸಮಾಜಕ್ಕೆ ಪ್ರಸ್ತುತ ಜೀವಪರ ಕಾಳಜಿ ಹೊಂದಿದ್ದ ಶರಣರು ನಮ್ಮೆಲ್ಲರಿಗೂ ಆದರ್ಶ ಎಂದು ಹೇಳಿದರು.ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು ಹಡಪದ ಸಮಾಜದ ಪ್ರಮುಖರಾದ ಶಂಕರ ಹಡಪದ
ಮಹಾದೇವ ಹಡಪದ,ರಾಮಚಂದ್ರ ಹಡಪದ,ಬಸವರಾಜ ಹಡಪದ,
ಶಿವರಾಜ ಹಡಪದ ,
ಅಣ್ಣೆಪ್ಪ ಹಡಪದ,ಮಲ್ಲಿಕಾರ್ಜುನ ಹಡಪದ,ಬಾಗಣ್ಣ ಹಡಪದ,ಸಿದ್ದಣ್ಣ ಹಡಪದ,
ನಿಂಗಣ್ಣ ಹಡಪದ,ಸೋಮಶೇಖರ ಸೂಲಹಳ್ಳಿ, ಸೋಮಶೇಖರ್ ಬಾಳಿ ,ದತ್ತು ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ-ಮೊಹಮ್ಮದ್ ಅಲ್ಲಿ ಚಿತ್ತಾಪುರ