ಪಾವಗಡ:ಶ್ರೀ ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಗುರು ಪೂರ್ಣಮಹೋತ್ಸವ ಮತ್ತು 11ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಶ್ರೀನಿವಾಸನಗರ (ಸಾಯಿ ನಗರ) ಅಗಸರಕುಂಟೆ ಹತ್ತಿರ ಏರ್ಪಡಿಸಲಾಗಿತ್ತು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ಗುರುಗಳ ಜನರಲ್ಲ ಆವರಿಸಿರುವ ಅಜ್ಞಾನ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತಾರೆ.
ಗುರುಗಳು ತಮ್ಮ ಪಾಠ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನು ನಿರಂತರವಾಗಿ ಬೆಳಗಿಸುವ ವ್ಯಕ್ತಿಯಾಗಿದ್ದಾನೆ.ಗುರು ಓರ್ವ ವ್ಯಕ್ತಿಗೆ ಸದಾಚಾರದ ಮಾರ್ಗವನ್ನು ಅನುಸರಿಸಲು ಯಾವಾಗಲೂ ಪ್ರೋತ್ಸಾಹಿಸುತ್ತಾನೆ ಹಾಗೂ ಜೀವನದ ಪ್ರತಿಯೊಂದು ಪಾಠವನ್ನು ನಮಗೆ ಕಲಿಸುತ್ತಾನೆ. ಅವನ ಸೂಚನೆಯಿಲ್ಲದೆ, ನಮ್ಮ ದಾರಿಯಲ್ಲಿ ಬರುವ ಕತ್ತಲೆಯನ್ನು ಹೋಗಲಾಡಿಸುವುದು ಕಷ್ಟ.
ಇದೇ ಆಷಾಢ ಪೂರ್ಣಮಿ ದಿನ ಭಾನುವಾರ ಶಿರಡಿ ಸಂಸ್ಥಾನದ ಸತ್ ಸಂಪ್ರದಾಯದಂತೆ ಪಾವಗಡದಲ್ಲಿ ಶ್ರೀ ಗುರು ಪೂರ್ಣಮ ಕಾರ್ಯಕ್ರಮ ನಡೆಸಲಾಗಿತ್ತು.
ಈ ಗುರು ಪೂರ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಗಿತ್ತು.
ಇಂದು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳಾಗಮಿಸಿ ಈ ವಿಶೇಷ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಗುರುವಿನ ಕೃಪೆಗೆ ಪಾತ್ರರಾಗಿರುತ್ತಾರೆ.
ಶ್ರೀ ಶ್ರೀ ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಗೋರ್ತಿ ನಾಗರಾಜ್ ಅವರು ಮಾತನಾಡಿ ಹಲವು ವರ್ಷಗಳಿಂದ ಅನೇಕ ರೀತಿಯಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬರ್ತಾ ಇದೀವಿ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಜಾಸ್ತಿ ಆಗ್ತಾ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.