ಪಾವಗಡ: 2013-24 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲ್ಲೂಕಿನ ಪ್ರತಿಬಾವಂತ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಜಕೀಯ ಉದ್ದೇಶಕ್ಕಾಗಿ ಟ್ರಸ್ಟ್ ನ ಕಾರ್ಯಕ್ರಮಗಳು ಮಾಡುತ್ತಿಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ ಮಾಡಲಾಗುತ್ತಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ಬಾಯಿ ತಿಳಿಸಿದರು.
ಪಟ್ಟಣದ ತೇಜಸ್ ಹೋಟೆಲ್ ಮತ್ತು ರೆಸ್ಟೋರೆಂಟ್ ಹರ್ಷಿತ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ತೇಜಸ್ ಚಾರಿಟೇಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಮಾಜಿ ಜಿ.ಪಂ ಸದಸ್ಯೆ ಗಾಯತ್ರಿ ಬಾಯಿ ಮಾತನಾಡಿ ದ್ವಿತೀಯ ಪಿಯುಸಿಯಲ್ಲಿ ಶೇ 90 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡುವ ವೇಳೆ ಗ್ರಾಮೀಣ ಭಾಗದ ವಿದ್ಯಾರ್ಥಿ/ನಿಯರ ನಾಳಿನ ಉತ್ತಮ ಭವಿಷ್ಯದ ಬಾಳಿಗೆ ಬೆಳಕಾಗುವ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅನೂಕೂಲವಾಗಲೆಂದು ಮಾಡಲಾಗುತ್ತಿದೆ, ರಾಜಕೀಯ ಉದ್ದೇಶಕ್ಕೆ ಈ ಕಾರ್ಯಕ್ರಮ ಮಾಡುತ್ತಿಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋಸ್ತಾಹಿಸುವ ಉದ್ದೇದಿಂದ ಸಮಾಜಿಕ ಸೇವೆ ಮಾಡಲು ಮುಂದೆ ಬಂದಿದ್ದೇವೆ, ಟೀಕೆಗಳಿಗೆ ಕಿವಿಕೊಡದೆ ನನ್ನ ಕೊನೆಯುಸಿರು ಇರುವವರೆಗೆ ಸಮಾಜಕ್ಕಾಗಿ ಸೇವೆಯನ್ನು ಸಲ್ಲಿಸುತ್ತೇನೆಂದರು ಈ ಹಿಂದೆ ಉಚಿತವಾಗಿ ಸಿ.ಇ.ಟಿ ತರಬೇತಿ,ಕಸ್ತೂರಿಬಾ ಬಾಲಕಿಯರ ವಸತಿ ಶಾಲೆಗೆ ವಾಟರ್ ಫಿಲ್ಟರ್, ಬ್ಯಾಡನೂರು ಎಂ,ಜಿ,ಎಂ ಶಾಲೆ, ಪಳವಳ್ಳಿ ತಾಂಡ ಸರ್ಕಾರಿ ಶಾಲೆ ಸೇರಿದಂತೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಾಲಾ ಸಮವಸ್ತ್ರ, ಕಲಿಕಾ ಸಾಮಗ್ರಿ, ಶಾಲಾ ಬ್ಯಾಗ್ ಇನ್ನಿತರೆ ಪಠ್ಯಕ್ಕೆ ಅನುಕೂಲವಾಗುವ ಸಾಮಾಗ್ರಿಗಳನ್ನು ನೀಡಿದ್ದೇವೆಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಹಾಗೂ ಟ್ರಸ್ಟ್ ನ ಅಧ್ಯಕ್ಷ ಸೋಮ್ಲಾ ನಾಯ್ಕ ಮಾತನಾಡಿ ಈ ಹಿಂದೆ ನಮ್ಮ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಈ ಸನ್ಮಾನ ಮಾಡುಲಾಗುತ್ತಿತ್ತು, ಈ ಭಾರಿ ವಿಶೇಷವಾಗಿ ತಾಲ್ಲೂಕಿನ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಇಂತಹ ಸಹಕಾರವನ್ನು ಪಡೆದು ವಿದ್ಯಾರ್ಥಿಗಳು ಅತೀ ಹಿಂದುಳಿತ ತಾಲ್ಲೂಕೆಂದು ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ನಮ್ಮ ತಾಲ್ಲೂಕನ್ನು ಮುಂದುವರಿದ ತಾಲ್ಲೂಕು ಆಗ ಬೇಕಾದರೆ ಉತ್ತಮವಾದ ಅಂಕ ಪಡೆದು ಉನ್ನತ ಸ್ಥಾನಮಾನಗಳನ್ನು ಪಡೆದು ಸಮಾಜದಲ್ಲಿ ಸೇವೆಯನ್ನು ಮಾಡುವ ಗುಣಗಳನ್ನು ರೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವೇಳೆ ಟ್ರಸ್ಟ್ ನ ಹಿರಿಯ ಉಪನೊoದನಾಧಿಕಾರಿ ಶಂಕರಮೂರ್ತಿ, ಖಜಾಂಚಿ ತೇಜಸ್ ಜಿ.ಎಸ್, ನಿರ್ದೇಶಕಿ ಹರ್ಷಿತ ಜಿ.ಎಸ್ ಹಾಗೂ ಜಿ.ಪಂ ಮಾಜಿ ಸದಸ್ಯರು ಗೌರಮ್ಮ ತಿಮ್ಮಯ್ಯ, ಚಂದ್ರಮೋಹನ್ ದಾಸ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿದ್ದರು.
ವರದಿ :ಕೆ.ಮಾರುತಿ